ನಾಗಚೈತನ್ಯ ಬಾಳಿಗೆ ಎಂಟ್ರಿ ಕೊಟ್ಟ ನಟಿ | ಅಷ್ಟಕ್ಕೂ ನಿಜ ವಿಷಯ ಏನು? ಡೇಟಿಂಗ್ ನಲ್ಲಿ ಬಿಜಿಯಾದ ಈ ನಟಿ ಈಗ ಹೇಳುತ್ತಿರುವುದೇನು?

Share the Article

ಇತ್ತೀಚೆಗಷ್ಟೇ ನಟಿ ಶೋಭಿತಾ ಧುಲಿಪಾಲ ನಟ ನಾಗ ಚೈತನ್ಯ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ಧಿ ಎಲ್ಲೆಡೆ ಹರಿದಾಡುತ್ತಿತ್ತು. ಮೊದಲಿಂದಲೂ ಈ ಕುರಿತು ಊಹಾಪೋಹಗಳು ಹರಿದಾಡಿದರು ಕೂಡ ತಲೆಕೆಡಿಸಿಕೊಳ್ಳದ ನಟಿ ತಮ್ಮ ಬಗ್ಗೆ ಹರಿದಾಡುತ್ತಿರುವ ವಿಚಾರದ ಕುರಿತಂತೆ ತೆರೆ ಎಳೆಯಲು ಮುಂದಾಗಿದ್ದಾರೆ.

ಮಜಿಲಿ’ ಚಿತ್ರದಲ್ಲಿ ನಾಗ ಚೈತನ್ಯ ಅವರು ಶೋಬಿತಾಗೆ ಲಿಪ್​ ಲಾಕ್ ಮಾಡುವ ಹಸಿ ಬಿಸಿ ದೃಶ್ಯಗಳು ಸಿನೆಮಾದಲ್ಲಿದೆ. ಆದರೆ, ನಟಿ ಸಮಂತಾ ಹಾಗೂ ನಾಗ ಚೈತನ್ಯ ಅವರ ಸಂಬಂಧದಲ್ಲಿ ಬಿರುಕು ಮೂಡಿ ವಿಚ್ಛೇದನಕ್ಕೆ ತಲುಪಿದ ಬಳಿಕ ಈ ರೀತಿಯ ಗಾಳಿ ಸುದ್ದಿಗಳು ಹೆಚ್ಚು ಕೇಳಿ ಬರುತ್ತಿವೆ. ಹೆಸರಿಗೆ ಮಸಿ ಬಳಿಯುವ ಪ್ರಯತ್ನಕ್ಕೆ ಕೈ ಹಾಕುವ ನಿಟ್ಟಿನಲ್ಲಿ ಅನೇಕ ಮಂದಿ ಈ ರೀತಿಯ ವದಂತಿ ಹುಟ್ಟುಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತು ನಟಿ ಮಜಿಲಿ’ ಚಿತ್ರದಲ್ಲಿ ನಾಗ ಚೈತನ್ಯ ಅವರು ಶೋಬಿತಾಗೆ ಲಿಪ್​ ಲಾಕ್ ಮಾಡುವ ದೃಶ್ಯಗಳಿದ್ದವು. ಸಮಂತಾ ಜತೆ ನಾಗ ಚೈತನ್ಯ ವಿಚ್ಛೇದನ ಪಡೆದ ನಂತರ ಅನೇಕರು ಈ ವದಂತಿ ಹುಟ್ಟು ಹಾಕಿದ್ದರು ಎನ್ನಲಾಗಿದೆ. ಸದ್ಯ ಈ ಕುರಿತಂತೆ ನಟಿ ಶೋಭಿತ ಮೌನ ಮುರಿದು ಸ್ಪಷ್ಟನೆ ನೀಡಿದ್ದಾರೆ.

ನಟಿ ಶೋಭಿತ ಹಾಗೂ ನಾಗ ಚೈತನ್ಯ ಕುರಿತು ಎಲ್ಲೆಡೆ ಹಬ್ಬುತ್ತಿರುವ ಗಾಳಿ ಸುದ್ದಿಗಳ ಬಗ್ಗೆ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದು, ಈಗ ಹರಿದಾಡುತ್ತಿರುವ ವಂದತಿಗಳ ಬಗ್ಗೆ ಕೇಳಿದ್ದೇನೆ . ನಾಗಚೈತನ್ಯ ಅವರು ತನ್ನ ಸೀನಿಯರ್ ಆಗಿದ್ದು,ಅವರಿಗೆ ತಾನು ಸದಾ ಗೌರವ ನೀಡುತ್ತೇನೆ. ಅಷ್ಟೆ ಅಲ್ಲದೇ, ಮಜಿಲಿ ಸಿನಿಮಾ ಬಳಿಕ ಅವರ ಜೊತೆಗೆ ಸಂಪರ್ಕದಲ್ಲಿ ಕೂಡ ಇಲ್ಲ ಎನ್ನುವ ಜೊತೆಗೆ ನಾಗ ಚೈತನ್ಯ ಅವರ ಜೊತೆಗೆ ತಾನು ಡೇಟಿಂಗ್ ಮಾಡುತ್ತಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ನಟಿಯ ಸ್ಪಷ್ಟನೆ ಕೇಳಿ ಕೆಲವರು ಶಾಕ್ ಆದರೆ, ಮತ್ತೆ ಕೆಲವರು ಬೇರೆಯವ್ರ ಉಸಾಬರಿ ನಮಗೇಕೆ ಎಂದು ಸುಮ್ಮನಾಗಿದ್ದಾರೆ.

Leave A Reply

Your email address will not be published.