Nivedita Gowda : ನಿವಿ ಹೊಸ ಡ್ರೆಸ್ ಟ್ರೆಂಡ್ | ಪೇಪರ್ ಡ್ರೆಸ್ಸಿನಲ್ಲಿ ಮಿಂಚಿಂಗ್ !

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಜೋಡಿ ಎಂದರೆ ತಪ್ಪಾಗದು. ಇತ್ತೀಚೆಗಷ್ಟೇ  ನಿವೇದಿತಾ ಸೋಲೋ ಟ್ರಿಪ್ ಕೂಡ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ರು. ಈ ನಡುವೆ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ನಿವೇದಿತಾ ಗೌಡ ಸ್ಪರ್ಧಿಸುತ್ತಿದ್ದು, ಇದೀಗ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಹೆಚ್ಚು ಸದ್ದು ಮಾಡುತ್ತಿರುವ ಬಾರ್ಬಿ ಡಾಲ್ ನ ಹೊಸ ವರಸೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಫ್ಯಾನ್ಸ್ ಗಳನ್ನು ರಂಜಿಸುವ  ನಿವೇದಿತಾ ಗೌಡ, ಇದೀಗ ಪೇಪರ್​ನಲ್ಲಿ​ ಡಿಸೈನ್ ಮಾಡಿದ ಡ್ರೆಸ್ (Paper Dress) ಧರಿಸಿ ರೀಲ್ಸ್ ಮಾಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಹಾಗೂ ಗಾಯಕ ಚಂದನ್​ ಶೆಟ್ಟಿ (Chandan Shetty) ಕಿರುತೆರೆಯ ಸ್ಟಾರ್​ ಜೋಡಿಯಾಗಿದ್ದಾರೆ. ಇತ್ತೀಚಿಗೆ ಪ್ರೆಗ್ನೆಂಟ್​ ವಿಚಾರಕ್ಕೆ ದಂಪತಿ ಸಖತ್ ಸುದ್ದಿಯಾಗಿದ್ರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಿವೇದಿತಾ ಗೌಡ, ಆಗಾಗ ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿರುತ್ತಾರೆ. ಇದೀಗ ಪೇಪರ್​ನಲ್ಲಿ​ ಡಿಸೈನ್ ಮಾಡಿದ ಡ್ರೆಸ್ (Paper Dress) ಧರಿಸಿ ನಿವೇದಿತಾ ಗೌಡ ರೀಲ್ಸ್ ಮಾಡಿದ್ದಾರೆ.

ನಿವೇದಿತಾ ಗೌಡ ಎಲ್ಲೇ ಹೋದರೂ ಬಂದರೂ ಅಲ್ಲಿನ ರೀಲ್ ಅಪ್ಲೋಡ್ ಮಾಡೋದು ವಾಡಿಕೆ. ಬಿಗ್ ಬಾಸ್ ಸೀಸನ್ 5 ರ ಮೂಲಕ ಹೆಚ್ಚು ಜನಪ್ರಿಯರಾದ ಚಂದನ್ ಹಾಗೂ ನಿವೇದಿತಾ ನಡುವೆ  ಸ್ನೇಹ ಚಿಗುರಿ ಲವ್ ಕಹಾನಿ ನಡೆದು ಕೊನೆಗೆ ಲವ್ ಮ್ಯಾರೇಜ್ ಆಗಿದ್ದು ಗೊತ್ತಿರುವ ವಿಚಾರವೇ!!! ಆದರೆ ಈ ಕ್ಯೂಟ್ ಜೋಡಿಗೆ ಫ್ಯಾನ್ ಫಾಲೋವರ್ಸ್ ಕೂಡ ಹೆಚ್ಚಿದ್ದು, ಸದ್ಯ ಹೊಸ ಹೊಸ ರೀಲ್ಸ್ ಮಾಡಿ ಅಭಿಮಾನಿಗಳನ್ನು ಖುಷಿ ಪಡಿಸೋದರಲ್ಲಿ ಈ ಜೋಡಿ ಹೆಚ್ಚು ಬ್ಯುಸಿ ಆಗಿರುತ್ತಾರೆ.

ಇತ್ತೀಚೆಗಷ್ಟೇ ಡ್ಯಾಡಿ ಕುರಿತ ರೀಲ್ಸ್ ಮಾಡಿ ಪೇಚಿಗೆ ಸಿಲುಕಿದ್ದ ನಿವಿ ಹಾಗೂ ಚಂದನ್ ಜೋಡಿಯ ವರಸೆ ಕಂಡು  ಅಭಿಮಾನಿಗಳು ಚಂದನ್ ತಂದೆಯಾಗುತ್ತಿದ್ದಾರೆ ಎಂದು ಭಾವಿಸಿದ್ದರು. ಓಡಾಡುತ್ತಿದ್ದ ಊಹಾಪೋಹಗಳ ನಡುವೆ  ಇದಕ್ಕೆ ಸ್ವತಃ ಚಂದನ್ ಕ್ಲಾರಿಟಿ ಕೊಟ್ಟಿದ್ದರು. ಇದೀಗ , ಕಸದಿಂದ ರಸ ಎನ್ನುವ ಹಾಗೆ ಪೇಪರ್‌ನಿಂದ ಹೊಸ ರೀತಿಯ ಫ್ರಾಕ್ ರೆಡಿ ಮಾಡಿಸಿಕೊಂಡಿದ್ದಾರೆ.  ಆ ಫ್ರಾಕ್ ಅನ್ನು ತೊಟ್ಟು ನೆಟ್ಟಿಗರ ದಿಲ್ ಕದಿಯುವ ಪ್ರಯತ್ನಕ್ಕೆ ಲಗ್ಗೆ ಇಟ್ಟಿದ್ದಾರೆ. ಕಪ್ಪು ಬಣ್ಣದ ಟೀ ಶರ್ಟ್ ಮೇಲೆ ಪೇಪರ್ ಡ್ರೆಸ್ ಹಾಕಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ಟ್ರೆಂಡ್ ಸೃಷ್ಟಿಯಾಗಿದೆ.

ಸಾಮಾನ್ಯವಾಗಿ ಲಾಂಗ್ ಗೌನ್ ಧರಿಸಿ ಬಾರ್ಬಿ ಗೊಂಬೆಯ  ಹಾಗೇ ರೆಡಿ ಆಗೋ ನಿವೇದಿತಾ ಗೌಡ ಇದೀಗ ತನ್ನ ಹೊಸ ಡ್ರೆಸ್ ಸೆನ್ಸ್ ಮೂಲಕ ಸುದ್ದಿಯಲ್ಲಿದ್ದಾರೆ.ಸದ್ಯ ನಿವೇದಿತಾ ಗೌಡ ಪೇಪರ್‌ನಿಂದ ರೆಡಿ ಮಾಡಿದ ಡ್ರೆಸ್ ಅನ್ನು ಹಾಕಿಕೊಂಡ ವಿಡಿಯೋವನ್ನು ನಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನಿವೇದಿತಾ ಗೌಡ ಕಪ್ಪು ಬಣ್ಣದ ಟೀ ಶರ್ಟ್ ಮೇಲೆ ಪೇಪರ್ ಡ್ರೆಸ್ ಧರಿಸಿದ್ದು ಮ್ಯೂಸಿಕ್​ಗೆ ಡ್ಯಾನ್ಸ್ ಮಾಡಿದ್ದು, ಈ  ವೀಡಿಯೋವನ್ನು ನಿವೇದಿತಾ ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದು,  ಈ ವಿಡಿಯೋಗೆ ನಾನಾ ಬಗೆಯ ಕಮೆಂಟುಗಳು ಹರಿದು ಬರುತ್ತಿವೆ. ನಿವೇದಿಗೌಡ ಉರ್ಫಿ ಜಾವೇದ್ (Urfi Javed) ಅವರಂತೆ ಕಾಣುತ್ತಿದ್ದಾರೆ  ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  ಕೆಲ ನೆಟ್ಟಿಗರು ನಿವೇದಿತಾ ಗೌಡ ಅವರನ್ನು ಜ್ಯೂನಿಯರ್ ಉರ್ಫಿ ಜಾವೇದ್ ಎಂದು  ಕೂಡ ಕರೆಯುತ್ತಿದ್ದಾರೆ. ಈ ನಡುವೆ ನಿವೇದಿತಾ ಗೌಡ, ಕಲರ್ಸ್ ಕನ್ನಡದಲ್ಲಿ ಗಿಚ್ಚ ಗಿಲಿಗಿಲಿ ಶೋ ಪ್ರಸಾರವಾಗುತ್ತಿರುವ ಹಿನ್ನೆಲೆ  ಮನರಂಜನೆಯ ಭಾಗವಾಗಿ   ಈ ರೀತಿಯ ಡ್ರೆಸ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಏನೇ ಆದರೂ ನಿವಿ ಹೊಸ ಡ್ರೆಸ್ ಎಲ್ಲೆಡೆ ಟ್ರೆಂಡ್ ಆಗಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

https://www.instagram.com/reel/Cn9FebEJxjc/?igshid=Yzg5MTU1MDY=

Leave A Reply

Your email address will not be published.