Coconut water: ಎಳನೀರಿನಿಂದ ದೊರೆಯುವ ಆರೋಗ್ಯ ಪ್ರಯೋಜನ ತಿಳಿದರೆ ನೀವು ದಂಗಾಗೋದು ಗ್ಯಾರಂಟಿ!!
ಕಲ್ಪವೃಕ್ಷ ಮರದಲ್ಲಿ ಬಿಡುವ ತೆಂಗಿನಕಾಯಿಯೊಳಗಿನ ಎಳನೀರು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹಲವು ಆರೋಗ್ಯದ ಅಡ್ಡ ಪರಿಣಾಮಗಳಿಗೆ ಎಳನೀರು ಉತ್ತಮ ಪರಿಹಾರ. ಇವುಗಳಲ್ಲಿರುವ ಪೋಷಕಾಂಶಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಿಸಿಲಿನ ಬೇಗೆಗೆ ಎಳನೀರು ಅಥವಾ ತೆಂಗಿನಕಾಯಿ ನೀರು ಸೇವನೆಯಿಂದ ದೇಹವು ಆರಾಮವೆನಿಸುತ್ತದೆ. ದೇಹದ ಒತ್ತಡ, ಮಾನಸಿಕ ಅಸ್ವಸ್ಥತೆ, ಹಸಿವು ಈ ಸಂದರ್ಭದಲ್ಲಿ ಎಳನೀರಿನ ಸೇವನೆಯಿಂದ ನೀವು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ನೀವು ಎಳನೀರು ಪ್ರಿಯರೇ? ಹಾಗಾದರೆ ಈ ಎಂಟು ಲಾಭಗಳ ಬಗ್ಗೆ ತಿಳಿಯಲೇ ಬೇಕು…!
ಇದು ಉತ್ತಮ ರುಚಿಯನ್ನು ಮಾತ್ರವಲ್ಲ, ಆರೋಗ್ಯದ ಬಗ್ಗೆ ಕಾಳಜಿಯುಳ್ಳವರು ವಿಶೇಷವಾಗಿ ತೆಂಗಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ತೆಂಗಿನ ನೀರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲೋರಿಗಳು, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳ ಪ್ರಮಾಣವು ತುಂಬಾ ಕಡಿಮೆಯಿದ್ದರೆ, ಖನಿಜಗಳು ಸಾಕಷ್ಟು ಪ್ರಮಾಣದಲ್ಲಿರುತ್ತವೆ.
ಸಕ್ಕರೆ ಮಟ್ಟವನ್ನು ನಿಯಂತ್ರಿಸಲು:- ತೆಂಗಿನ ನೀರು ದೇಹದ ಒತ್ತಡವನ್ನು ನಿಯಂತ್ರಿಸಲು ಸಹಾಯಕ. ಜೊತೆಗೆ ಮಧುಮೇಹ ಸಮಸ್ಯೆ ಹೊಂದಿರುವವರಿಗೂ ಇದು ಸಹಾಯಕ. ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯ ಪ್ರಕಾರ, ರಕ್ತದಲ್ಲಿನ ಗ್ಲುಕೋಸ್ಅನ್ನು ಕಡಿಮೆ ಮಾಡಲು ತೆಂಗಿನನೀರು ಸಹಾಯಕ ಎಂಬುದು ತಿಳಿದು ಬಂದಿದೆ. ಆದರೆ ಇನ್ನೂ ಹೆಚ್ಚಿನ ಮಟ್ಟದ ಅಧ್ಯಯನಗಳು ಅವಶ್ಯಕ ಎಂದು ಶಾಸ್ತ್ರಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ತೆಂಗಿನ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದೊಂದೇ ಅಲ್ಲದೇ ಇದು ಮೆಗ್ನಿಶೀಯಮ್ನ ಖನಿಜವಾಗಿದೆ. ಇದು ಟೈಪ್ 2 ಮಧುಮೇಹ ಮತ್ತು ಪ್ರಿಡಿಯಾಬಿಟಿಸ್ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ತೂಕ ಇಳಿಸಲು:- ತೆಂಗಿನ ನೀರನ್ನು ಕುಡಿಯುವುದು ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಬಯೋಆಕ್ಟಿವ್ ಕಿಣ್ವಗಳು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನ ನೀರನ್ನು ಕುಡಿಯುವುದರಿಂದ ಕ್ಯಾಲೊರಿಗಳನ್ನು ವೇಗವಾಗಿ ಕರಗಿಸುತ್ತದೆ. ನೀವು ಫಿಟ್ ದೇಹವನ್ನು ಪಡೆಯಲು ಬಯಸಿದರೆ, ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಂಗಿನ ನೀರನ್ನು ಕುಡಿಯಬೇಕು.
ರಕ್ತದೊತ್ತಡ ನಿಯಂತ್ರಿಸಲು:- ತೆಂಗಿನ ನೀರಿನಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ, ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ತೆಂಗಿನ ನೀರು ಸಹಾಯಕ. ಇದನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಮೂತ್ರಪಿಂಡದಲ್ಲಿ ಬೆಳೆದ ಕಲ್ಲು ನಿವಾರಣೆಗೆ ಸಹಾಯಕ:- ಸಾಕಷ್ಟು ನೀರಿನಾಂಶ ಹೊಂದಿರುವ ಪದಾರ್ಥಗಳನ್ನು ಸೇವಿಸುವ ಮೂಲಕ ಮೂತ್ರಪಿಂಡದಲ್ಲಿ ಬೆಳೆದಿರುವ ಕಲ್ಲುಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಹಾಗಾಗಿಯೇ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವವರಿಗೆ ಹೆಚ್ಚು ನೀರು ಕುಡಿಯುವಂತೆ ತಜ್ಞರು ಸಲಹೆ ನೀಡುತ್ತಾರೆ. ತೆಂಗಿನ ನೀರು ಮೂತ್ರಪಿಂಡದಲ್ಲಿ ಕಲ್ಲುಗಳು ಅಂಟಿಕೊಳ್ಳದಂತೆ ತಡೆಯುತ್ತದೆ. 2018ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ತೆಂಗಿನ ನೀರಿನಲ್ಲಿ ಪೊಟ್ಯಾಷಿಯಮ್, ಕ್ಲೋರೈಡ್ ಮತ್ತು ಸಿಟ್ರಸ್ ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕಲ್ಲುಗಳು ಹೊರಹೋಗಲು ಸಹಾಯ ಮಾಡುತ್ತದೆ.
ಗ್ಯಾಸ್ ಸಮಸ್ಯೆ:- ತೆಂಗಿನ ನೀರು ದೇಹದಲ್ಲಿ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ, ಇದರಿಂದ ನಿಮಗೆ ಅಸಿಡಿಟಿ(Acidity) ಮತ್ತು ಎದೆಯುರಿ ಸಮಸ್ಯೆ ಇರುವುದಿಲ್ಲ. ತೆಂಗಿನ ನೀರು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಉಬ್ಬುವುದು ಮತ್ತು ಗ್ಯಾಸ್ ಸಮಸ್ಯೆ ಇಲ್ಲ. ಫೈಬರ್ ಅಧಿಕವಾಗಿರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
ಕಡಿಮೆ ಕೊಲೆಸ್ಟ್ರಾಲ್:- ತೆಂಗಿನ ನೀರು ಕುಡಿಯುವುದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನ ನೀರು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದನ್ನು ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೋಗುತ್ತದೆ. ತೆಂಗಿನ ನೀರು ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.
ದೇಹವನ್ನು ನಿರ್ವಿಷಗೊಳಿಸಲು:- ತೆಂಗಿನ ನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸಲು ಕೆಲಸ ಮಾಡುತ್ತದೆ. ತೆಂಗಿನ ನೀರನ್ನು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ:- ತೆಂಗಿನ ನೀರಿನಲ್ಲಿ ಇರುವ ಗುಣಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ತೆಂಗಿನ ನೀರು ಮೊಡವೆಗಳ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.