Central Bank Of India : ಡಿಗ್ರಿ ಪಾಸಾದವರಿಗೆ ಬಂಪರ್ ಉದ್ಯೋಗವಕಾಶ | ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ 250 ಹುದ್ದೆ | ಹೆಚ್ಚಿನ ಮಾಹಿತಿ ಇಲ್ಲಿದೆ
ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿಯೊಬ್ಬರಿಗೂ ಸರ್ಕಾರಿ ನೌಕರಿ ಇಲ್ಲವೇ ಬ್ಯಾಂಕ್ ಉದ್ಯೋಗ ಪಡೆಯಬೇಕು ಎನ್ನುವ ಕನಸು ಇರೋದು ಸಹಜ. ನೀವು ಕೂಡ ಬ್ಯಾಂಕ್ ಉದ್ಯೋಗಿ ಆಗಬೇಕು ಎಂದು ಹಂಬಲಿಸುತ್ತಿದ್ದರೆ ಮುಖ್ಯ ಮಾಹಿತಿ ನಿಮಗಾಗಿ. ಇದೀಗ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅನೇಕ ಹುದ್ದೆ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೀನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ 4 ರ ಮುಖ್ಯ ಮ್ಯಾನೇಜರ್, ಮಧ್ಯಮ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್ 3 ರ ಸೀನಿಯರ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಈ ಹಿನ್ನೆಲೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಯ್ಕೆ ವಿಧಾನ, ಹುದ್ದೆಗಳ ವಿವರ ತಿಳಿದುಕೊಳ್ಳುವುದು ಒಳ್ಳೆಯದು. ಈ ಹುದ್ದೆಗಳಿಗೆ ಯಾವುದೇ ಪದವಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಹೀಗಿದೆ:
ಮುಖ್ಯ ಮ್ಯಾನೇಜರ್ ಸ್ಕೇಲ್ 4 (ಮೇನ್ ಸ್ಟ್ರೀಮ್) : 50
ಸೀನಿಯರ್ ಮ್ಯಾನೇಜರ್ ಸ್ಕೇಲ್ 3 (ಮೇನ್‌ಸ್ಟ್ರೀಮ್): 200
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು 27-01-2023 ಆರಂಭಿಕ ದಿನವಾಗಿದ್ದು, ಅದೇ ರೀತಿ, ಅರ್ಜಿ ಸಲ್ಲಿಸಲು 11-02-2023 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಯಲ್ಲಿ ತಿದ್ದುಪಡಿಗಳಿದ್ದಲ್ಲಿ 11-02-2023 ಕೊನೆಯ ದಿನವಾಗಿದೆ. 11-02-2023 ರ ಮೊದಲು ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕಾಗಿದ್ದು, ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು 26-02-2023 ಕೊನೆ ದಿನಾಂಕವಾಗಿದೆ.
ವಿದ್ಯಾರ್ಹತೆ : ಯಾವುದಾದರು ಪದವಿ ಪಾಸ್ ಆಗಿರಬೇಕು.
ಅರ್ಜಿ ಶುಲ್ಕ: 850 ರೂಪಾಯಿ.
ವಯೋಮಿತಿ:
ಮುಖ್ಯ ಮ್ಯಾನೇಜರ್ ಸ್ಕೇಲ್ 4 (ಮೇನ್ ಸ್ಟ್ರೀಮ್) : 40 ವರ್ಷ ಮೀರಿರಬಾರದು.
ಸೀನಿಯರ್ ಮ್ಯಾನೇಜರ್ ಸ್ಕೇಲ್ 3 (ಮೇನ್‌ಸ್ಟ್ರೀಮ್): 45 ವರ್ಷ ಮೀರಿರಬಾರದು.
ಅನುಭವ: ಮುಖ್ಯ ಮ್ಯಾನೇಜರ್ ಹುದ್ದೆಗೆ ಯಾವುದೇ ಬ್ಯಾಂಕ್‌ನಲ್ಲಿ ಕನಿಷ್ಠ 7 ವರ್ಷಗಳ ಕಾಲ ಆಫೀಸರ್ ಹುದ್ದೆಯಲ್ಲಿ ಕರ್ತವ್ಯ ಮಾಡಿದ ಅನುಭವ ಹೊಂದಿರಬೇಕು. ಅದೇ ರೀತಿ, ಸೀನಿಯರ್ ಮ್ಯಾನೇಜರ್ ಹುದ್ದೆಗೆ ಯಾವುದೇ ಬ್ಯಾಂಕ್‌ನಲ್ಲಿ ಕನಿಷ್ಠ 5 ವರ್ಷ ಆಫೀಸರ್ ಹುದ್ದೆ ಕರ್ತವ್ಯ ಅನುಭವ ಹೊಂದಿರಬೇಕಾಗುತ್ತದೆ.
ಆಯ್ಕೆ ವಿಧಾನ:
ಆನ್‌ಲೈನ್ ಪರೀಕ್ಷೆಯ ಜೊತೆಗೆ ಸಂದರ್ಶನ ವಿರಲಿದೆ.ಮೊದಲಿಗೆ 100 ಅಂಕಗಳಿಗೆ 60 ನಿಮಿಷದ ಲಿಖಿತ ಪರೀಕ್ಷೆ ಇರಲಿದೆ. ಇದಲ್ಲದೆ, ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಬ್ಯಾಂಕಿಂಗ್, ಕಂಪ್ಯೂಟರ್ ಜ್ಞಾನ, ಪ್ರಸ್ತುತ ಆರ್ಥಿಕ ವಿದ್ಯಮಾನ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದಿರಬೇಕು. ಈ ಪ್ರಕ್ರಿಯೆಯಲ್ಲಿ ಆಯ್ಕೆ ಆದವರಿಗೆ ಸಂದರ್ಶನ ಮಾರ್ಚ್ ನಲ್ಲಿ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಮೇಲೆ ತಿಳಿಸಿದ ಮಾಹಿತಿ ತಿಳಿದುಕೊಂಡು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ