Urfi Javed-Shah Rukh Khan: ಕಿಂಗ್‌ ಖಾನ್‌ಗೆ ಎರಡನೇ ಪತ್ನಿಯಾಗಲು ಹೊರಟ ಉರ್ಫಿ ಜಾವೇದ್‌ | ಬಾಲಿವುಡ್‌ ಬಾದ್ ಶಹ ನೀಡಿದ ಉತ್ತರವೇನು ?

Share the Article

ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಮಾತ್ರವಲ್ಲದೆ ತನ್ನ ಸಂಪಾದನೆಯ ಕಾರಣದಿಂದ ಕೂಡ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ ಉರ್ಫಿ ಜಾವೇದ್ (Urfi Javed) ಅವರ ಕ್ರಷ್ ಯಾರು ಎನ್ನುವ ಸೀಕ್ರೆಟ್ ರಿವಿಲ್ ಆಗಿದೆ.

ತಮ್ಮ ಔಟ್‌ಫಿಟ್‌(Outfit)ಗಳ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುವುದು ಸಹಜ. ಈ ನಡುವೆ ಎಫ್​ಐಆರ್ ಕಾಟ ಮತ್ತೊಂದೆಡೆ ಟ್ರೊಲ್ ತಲೆ ಬಿಸಿ ಬೆನ್ನು ಬಿಡದೇ ಕಾಡುತ್ತಿದೆ. ಅಷ್ಟೇ ಅಲ್ಲದೆ ಉರ್ಫಿ ಜಾವೇದ್ ಅವರು ಮುಂಬೈನಲ್ಲಿ ಪ್ರತಿದಿನ ಕ್ಯಾಮೆರಾ ಕಣ್ಣಿನಲ್ಲಿ ಹೆಚ್ಚು ಫೋಕಸ್ ಆಗಿ, ಹೆಚ್ಚಿನವರ ಹಾಟ್ ಟಾಪಿಕ್ ಆಗಿರುವ ಏಷ್ಟೋ ಪಡ್ಡೆ ಹುಡುಗರು ತಲೆ ಕೆಡಿಸಿಕೊಳ್ಳುವಂತೆ ಮಾಡೋದು ಕಾಮನ್. ಯಾರೇನೇ ಟ್ರೋಲ್ ಮಾಡಿದರು ಕೂಡ ಕ್ಯಾರೇ ಎನ್ನದೆ ಟ್ರೊಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ. ಹೀಗೆ ಮಾಧ್ಯಮದ ಮುಂದೆ ನಟಿ ಹೇಳಿಕೊಂಡಿರುವ ರಹಸ್ಯ ಈಗ ಜೋರಾಗಿ ಸದ್ದು ಮಾಡುತ್ತಿದೆ.

ಬಾಲಿವುಡ್ ಬಾದ್ ಶಾ , ಶಾರುಖ್ ಬಗ್ಗೆ ನಟಿ ಯನ್ನು ಪ್ರಶ್ನೆ ಕೇಳಲಾದ ಸಂದರ್ಭ ಸೀಕ್ರೆಟ್ ಒಂದು ಬಟ್ಟಾ ಬಯಲಾಗಿದೆ. ಬಾಲಿವುಡ್ ನಟ ಶಾರುಖ್ ಸಿಕ್ಕರೆ ಹೇಗೆ ಪ್ರತಿಕ್ರಿಯೆ ನೀಡುತ್ತಿರಾ ಎಂದು ವ್ಯಕ್ತಿಯೊಬ್ಬರು ಉರ್ಫಿ ಜಾವೇದ್​ಗೆ ಪ್ರಶ್ನೆ ಮಾಡಿದ್ದು, ಇದಕ್ಕೆ ಉರ್ಫಿ ಜಾವೇದ್ ಕೊಟ್ಟ ಉತ್ತರ ಕೇಳಿದರೆ ನೀವು ದಂಗಾಗೋದು ಪಕ್ಕಾ!!!

ಐ ಲವ್ ಯೂ ಶಾರುಖ್ ಎಂದು ಹೇಳಿಕೊಂಡಿದ್ದು, ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ ಎಂದು ಹೇಳುತ್ತೇನೆ ಎಂದು ಉರ್ಫಿ ಜಾವೇದ್ ಹೇಳಿಕೊಂಡಿದ್ದಾರೆ. ಹೀಗಾಗಿ, ಉರ್ಫಿ ಕೂಡಾ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ ದೊಡ್ಡ ಫ್ಯಾನ್ ಅನ್ನೋ ವಿಚಾರ ರಟ್ಟಾಗಿದೆ. ಇನ್ನು ಈ ಮಾತನ್ನು ಶಾರುಕ್ ಖಾನ್ ಕೇಳಿದರೆ ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಬಾದ್ ಶಾ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಅದೆಷ್ಟೇ ಟ್ರೊಲ್ ಗಳು ಉರ್ಫಿ ಬೆನ್ನು ಹತ್ತಿ ಬಂದರೂ ಕೂಡ ಉರ್ಫಿ ಅವರನ್ನು ಬೆಂಬಲಿಸುವ ಅಭಿಮಾನಿಗಳು ಕೂಡ ದೊಡ್ದ ಸಂಖ್ಯೆಯಲ್ಲಿ ಇದ್ದಾರೆ ಅನ್ನೋದು ವಿಶೇಷ.

Leave A Reply

Your email address will not be published.