ರೊಟ್ಟಿ ತಟ್ಟುತ್ತಾ ಹಾಡಿದ ಮಹಿಳೆ! ನಟ ಸೋನು ಸೂದ್ ಫುಲ್ ಫಿದಾ ಜೊತೆಗೆ ಬಿಗ್ ಆಫರ್

Share the Article

ತೆರೆಮರೆಯಲ್ಲಿ ಇರುವ ಹಲವಾರು ಕಲಾವಿದರಿಗೆ ಸರಿಯಾದ ಅವಕಾಶ ಸಿಗದೇ ಇರುವ ಕಾರಣ ತಮ್ಮ ಪ್ರತಿಭೆಯ ಅನಾವರಣ ಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇಲ್ಲೊಬ್ಬಳು ರೊಟ್ಟಿ ಮಾಡುತ್ತಾ ಹಾಡಿದ ಹಾಡು ನಟ ಸೋನು ಸೂದ್ ಅವರ ಮನಸು ಗೆದ್ದಿದೆ.

ಟ್ವಿಟರ್‌ನಲ್ಲಿ ಮುಖೇಶ್ ಎಂಬ ಬಳಕೆದಾರರು ಮಹಿಳೆ ಹಾಡಿರುವ ವಿಡಿಯೋ ಶೇರ್‌ ಮಾಡಿದ್ದು ಇದರಲ್ಲಿ ತಾಯಿ ತನ್ನ ಮಗಳ ಹಾರೈಕೆಯ ಮೇಲೆ ಹಾಡುತ್ತಿದ್ದಾರೆ. ಮಹಿಳೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದು, ರೊಟ್ಟಿ ತಟ್ಟುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ.

ಆಕೆಯ ಮಗಳು ತನ್ನ ತಾಯಿಯನ್ನು ಹಾಡು ಹಾಡಲು ಕೇಳುತ್ತಾಳೆ. ಸ್ವಲ್ಪ ಹಿಂಜರಿಕೆಯ ನಂತರ, ಮಹಿಳೆ ಕಿಶೋರ್ ಕುಮಾರ್ ಅವರ ಸೂಪರ್‌ ಹಿಟ್ ಹಾಡು ‘ಮೇರೆ ನೈನಾ ಸಾವನ್’ ಅನ್ನು ಹಾಡಿದರು . ಮಹಿಳೆ ಈ ಹಾಡನ್ನು ಎಷ್ಟು ಅದ್ಭುತವಾಗಿ ಹೇಳಿದ್ದಾಳೆ ಎಂದರೆ ಕೇಳುಗರು ಮಹಿಳೆಯ ಅಭಿಮಾನಿಗಳಾದರು. ಜೊತೆಗೆ ನಟ ಸೋನು ಸೂದ್ ಈ ವಿಡಿಯೋಗೆ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ನಂಬರ್‌ ಕಳುಹಿಸಿ ಈ ತಾಯಿಗೆ ಸಿನಿಮಾವೊಂದಕ್ಕೆ ಹಾಡನ್ನು ಹಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ .

https://twitter.com/Tweetmukesh/status/1618873896043941890?s=20&t=_DTAFufagQfFYCrcxAMOSQ

ಹೌದು ಬಾಲಿವುಡ್ ನಟ ಸೋನು ಸೂದ್ ಅವರು ಅನೇಕ ಬಾರಿ ಅವರು ತಮ್ಮ ಟ್ವೀಟ್‌ಗಳ ಮೂಲಕ ತಮ್ಮ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಇತ್ತೀಚೆಗಷ್ಟೇ ಹಾಡು ಹಾಡಿದ ಮಹಿಳೆಯ ನಂಬರ್ ಕೇಳಿ ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಸೋನು ಸೂದ್ ಅವರ ಈ ಉದಾರ ಮನಸಿಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಾಡಿನಿಂದ ಜನರ ಮನಸು ಖುಷಿಗೊಂಡಿದೆ.

Leave A Reply