Oneplus Nord Smartwatch: ವ್ಹಾವ್ ! ಒನ್​​ಪ್ಲಸ್​ ಕಂಪೆನಿಯ ಈ ಸ್ಮಾರ್ಟ್​​ವಾಚ್ ಮೇಲೆ ರಿಯಾಯಿತಿ ಜೊತೆಗೆ ಭರ್ಜರಿ ಆಫರ್!

ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಯಾಗಿ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡಿರುವ ಕಂಪೆನಿಯೆಂದರೆ ಅದು ಒನ್​ಪ್ಲಸ್​ ಕಂಪನಿ. ಮಾರುಕಟ್ಟೆಯಲ್ಲಿ ಒನ್​ಪ್ಲಸ್​ ಕಂಪೆನಿಗಳಿಗೆ ಈಗಲೂ ಭಾರೀ ಬೇಡಿಕೆಯಿದೆ. ಈ ಕಂಪೆನಿ ಮಾರುಕಟ್ಟೆಯಲ್ಲಿ ಹೊಸ ಮಾದರಿಯಲ್ಲಿ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದೆ.

ಇದೀಗ ಒನ್​ಪ್ಲಸ್​ ಕಂಪನಿ ಕೆಲವು ಸಮಯಗಳ ನಂತರ ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​​ವಾಚ್​​ಗಳನ್ನು ಸಹ ಮಾರಾಟ ಮಾಡಲು ಆರಂಭಿಸಿದೆ. ಒನ್​ಪ್ಲಸ್​ ಕಂಪೆನಿಯ ಸಾಧನಗಳ ಬೆಲೆ ದುಬಾರಿಯಾದರೂ ಇದರ ಕಾರ್ಯ ಕ್ಷಮತೆ, ವಿನ್ಯಾಸ, ಬ್ಯಾಟರಿ ಬ್ಯಾಕಪ್ ಇವೆಲ್ಲವೂ ಉತ್ತಮ ಗುಣಮಟ್ಟದಿಂದ ಕೂಡಿದೆ.

ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ ವಿಶೇಷತೆ :

  • ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲ್ಡ್​ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ ಈ ಡಿಸ್​ಪ್ಲೇಯು 500 ನಿಟ್ಸ್​ ಬ್ರೈಟ್‌ನೆಸ್‌ ಆಯ್ಕೆಯನ್ನು ಹೊಂದಿದೆ. ಇದರಿಂದ ಬಳಕೆದಾರರು ಯಾವುದೇ ಸಮಯದಲ್ಲೂ ಇದನ್ನು ಬಳಕೆ ಮಾಡಬಹುದಾಗಿದೆ.
  • ವಿಶೆಷವಾಗಿ 105 ಫಿಟ್‌ನೆಸ್ ಮೋಡ್‌ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಹೃದಯ ಬಡಿತ, ಬಿಪಿ, ರಕ್ತದ ಆಮ್ಲಜನಕದ ಮಟ್ಟ ಮತ್ತು ಇನ್ನೂ ಹೆಚ್ಚಿನ ಆರೋಗ್ಯ ಸಂಬಂಧಿ ವಿಷಯಗಳನ್ನು ಟ್ರಾಕ್​ ಮಾಡುವ ಮೂಲಕ ಬಳಕೆದಾರರಿಗೆ ಮಾನಿಟರ್ ಮಾಡುತ್ತದೆ. ಬ್ಲೂಟೂತ್ ಆವೃತ್ತಿ 5.2 ಹೊಂದಿರುವ ಈ ವಾಚ್‌, ಆಂಡ್ರಾಯ್ಡ್‌ 6.0 ಹಾಗೂ ಐಓಎಸ್ 11 ಮತ್ತು ಇನ್ನೂ ಹೆಚ್ಚಿನ ಓಎಸ್‌ ಡಿವೈಸ್‌ಗಳಿಗೆ ಹೊಂದಿಕೆಯಾಗುತ್ತದೆ.
  • ಈ ಸ್ಮಾರ್ಟ್​​ವಾಚ್ ಅನ್ನು ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ 10 ದಿನಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಹಾಗೆಯೇ 30 ದಿನಗಳ ಸ್ಟ್ಯಾಂಡ್‌ಬೈ ಮೋಡ್​ ಅನ್ನು ಸಹ ಹೊಂದಿದೆ. ಇದರೊಂದಿಗೆ ಈ ಡಿವೈಸ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ನಿಂದ ವಿನ್ಯಾಸಗೊಳಿಸಲಾಗಿದೆ.

ಒನ್​​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್​​ ಅನ್ನು ಕಳೆದ 2022 ರ ಅಕ್ಟೋಬರ್​ನಲ್ಲಿ ಮಾರುಕಟ್ಟೆಗೆ ಪರಿಚಯ ಮಾಡಲಾಗಿದೆ. ಆ ಸಂದರ್ಭದಲ್ಲಿ ಈ ಸ್ಮಾರ್ಟ್​​ವಾಚ್​ನ ಆರಂಭಿಕ ಬೆಲೆ 4,999 ರೂಪಾಯಿ ನಿಗದಿ ಮಾಡಲಾಗಿತ್ತು. ಇಷ್ಟು ಬೆಲೆಯಿದ್ದರೂ ಈ ಸ್ಮಾರ್ಟ್​ವಾಚ್​ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿತ್ತು.
ಸದ್ಯ 4,999 ರೂಪಾಯಿಗಳ ಒನ್​​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್​​ ಅನ್ನು 4,499 ರೂಪಾಯಿಗಳ ಬೆಲೆಯೊಂದಿಗೆ ಮಾರಾಟ ಮಾಡುತ್ತಿದೆ. ಅಂದರೆ ಒನ್​ಪ್ಲಸ್​ನ ಈ ಸ್ಮಾರ್ಟ್​​ವಾಚ್​ ಮೇಲೆ 500 ರೂಪಾಯಿಗಳಷ್ಟು ದರವನ್ನು ಇಳಿಕೆ ಮಾಡಿದೆ.

ಅದಲ್ಲದೆ ಈ ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್​ ಅನ್ನು ಬ್ಯಾಂಕ್​ ಆಫರ್​ ಮೂಲಕ ಇನ್ನಷ್ಟು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ನೀವು ಒಂದು ವೇಳೆ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​ ಕಾರ್ಡ್​ ಮೂಲಕ ಖರೀದಿ ಮಾಡುವುದಾದರೆ ಈ ಸ್ಮಾರ್ಟ್​​ವಾಚ್​​ ಮೇಲೆ 500 ರೂಪಾಯಿಗಳಷ್ಟು ಆಫರ್ಸ್​ ಲಭ್ಯವಿದೆ. ಹಾಗೆಯೇ ಮೊಬಿಕ್ವಿಕ್​ ವ್ಯಾಲೆಟ್​ ಮೂಲಕ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಸಹ 500 ರೂಪಾಯಿಗಳಷ್ಟು ರಿಯಾಯಿತಿಯನ್ನು ಪಡೆಯಬಹುದು. ಈ ಎಲ್ಲಾ ಆಫರ್ಸ್​ ಮೂಲಕ ಈ ಒನ್​​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್ ಅನ್ನು ಕೇವಲ 3,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

ಒನ್​ಪ್ಲಸ್​ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​ವಾಚ್​ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಲುವಾಗಿ ಈ ಮಧ್ಯೆ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಈ ಸ್ಮಾರ್ಟ್​​ವಾಚ್​ನ ಬೆಲೆಯನ್ನು ಕಡಿಮೆ ಮಾಡಲಾಗಿದೆ ಹಾಗೂ ಇತರೆ ರಿಯಾಯಿತಿಗಳು ಸಹ ಲಭ್ಯವಿದೆ ಎಂದು ಕಂಪನಿ ಈ ಮೂಲಕ ತಿಳಿಸಿದೆ.

Leave A Reply

Your email address will not be published.