ವರನ ಮುಂದೆ ಮದುವೆ ವೇದಿಕೆಯಲ್ಲಿ ವಧುವಿನ ಕೆನ್ನೆ ಸವರಿದ ಸ್ನೇಹಿತ | ವರ ಮಾಡಿದ್ದೇನು ಗೊತ್ತಾ ? ವೀಡಿಯೋ ವೈರಲ್‌!

Share the Article

ಮದುವೆ ಎನ್ನುವುದು ಹೆಣ್ಣು ಗಂಡಿನ ಜೀವನದ ಪ್ರಮುಖ ಘಟ್ಟವೆಂದೆ ಹೇಳಬಹುದು. ಮದುವೆ ಕಾರ್ಯಕ್ರಮದಲ್ಲಿ ಕೆಲವೊಂದು ವೆರೈಟಿಯಾದ ದೃಶ್ಯಗಳನ್ನು ಕಾಣಬಹುದು. ಕೆಲವೊಮ್ಮೆ ವಧು ಮತ್ತು ವರರು ತಮ್ಮ ವಿಶಿಷ್ಟ ರೀತಿಯ ಎಂಟ್ರಿಯಿಂದ ಎಲ್ಲರ ಗಮನ ಸೆಳೆದರೆ, ಇನ್ನು ಕೆಲವೊಮ್ಮೆ ಮನೆ ಮಂದಿ ವಧು ವರರಿಗೆ ನೀಡುವ ಸರ್ಪೈಸ್ ಮೂಲಕ ಎಲ್ಲರನ್ನೂ ಬೆರಗಾಗಿಸುತ್ತಾರೆ. ಇನ್ನು ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ಹೀಗೂ ಇರ್ತಾರಾ!! ಎಂದು ಹುಬ್ಬೇರಿಸುವಂತೆ ಬಿಡುತ್ತದೆ. ಇಂತಹ ಅದೆಷ್ಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲೈಕು ಕಮೆಂಟುಗಳ ಸುರಿಮಳೆಯನ್ನೇ ಸುರಿಸಿದೆ. ಇದೀಗ ಈ ಸಾಲಿಗೆ ಇನ್ನೊಂದು ವೀಡಿಯೋ ಸೇರ್ಪಡೆಯಾಗಿದೆ. ಮದುವೆಯ ವೇದಿಕೆಯಲ್ಲಿ ವಧುವಿನ ಕೆನ್ನೆ ಹಿಂಡಲು ಹೋದ ಸ್ನೇಹಿತನಿಗೆ, ಕೊನೆಗೆ ಏನಾಯ್ತು ಗೊತ್ತಾ? ನೀವೆ ನೋಡಿ.

ಈ ವೀಡಿಯೋ ತುಣುಕಲ್ಲಿ ವರ ಮತ್ತು ವಧು ವೇದಿಕೆ ಮೇಲೆ ಕುಳಿತಿದ್ದಾರೆ. ಈ ವೇಳೆ ವಧು ಕುಳಿತಿದ್ದ ಕುರ್ಚಿಯ ಹಿಂದಿನಿಂದ ಬಂದ ವರನ ಸ್ನೇಹಿತನೊಬ್ಬ, ವಧುವಿನ ಕೆನ್ನೆಗೆ ಕೈಹಾಕಿ ಕೀಟಲೆ ಮಾಡಲು ಆರಂಭಿಸುತ್ತಾನೆ. ಇದರಿಂದ ವಧುವು ಸ್ವಲ್ಪ ಅಸಮಾಧಾನಗೊಂಡಂತೆ ಕಾಣುತ್ತದೆ. ಇದನ್ನು ನೋಡಿದ ವರ ತಕ್ಷಣ ಮೇಲೆದ್ದು, ಕೋಪದಿಂದ ಸ್ನೇಹಿತನನ್ನು ತನ್ನ ಹತ್ತಿರ ಎಳೆದು, ಕಪಾಳ ಮೋಕ್ಷ ಮಾಡುತ್ತಾನೆ.

https://www.instagram.com/reel/CnwadZlpial/?utm_source=ig_web_copy_link

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಆಶಿಕ್ ಬಿಲ್ಲೋಟ ಹೆಸರಿನ ಇನ್’ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೂ 45 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಅಲ್ಲದೆ, 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ವಿಡಿಯೋ ನೋಡಿದ ಸೋಶಿಯಲ್ಸ್ ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ. ಹೊಡೆಯುವ ಮೊದಲು ಎಚ್ಚರಿಕೆ ನೀಡಬೇಕಿತ್ತು ಎಂದು ನೆಟ್ಟಿಗನೊಬ್ಬ ಹೇಳಿದ್ದಾರೆ. ಮತ್ತೊಬ್ಬ, ವಿಡಿಯೋ ನೋಡಿದರೆ ಸ್ಕ್ರಿಪ್ಟೆಡ್ ಅನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.