ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಒಂದೇ ಒಂದು ಹಲ್ಲಿ ಕೂಡಾ ಕಾಣೋಕೆ ಸಿಗಲ್ಲ!
ಹಲ್ಲಿ ಎಂದಾಕ್ಷಣ ಹೆದರುವವರೇ ಹೆಚ್ಚು. ಮನೆಯ ಗೋಡೆಯ ಮೇಲೆ, ಮೇಲ್ಛಾವಣಿಯ ಮೇಲೆ ಎಲ್ಲೆಂದರಲ್ಲಿ ಹಲ್ಲಿ ಇರುವುದು ಸರ್ವೇ ಸಾಮಾನ್ಯ. ಹಲ್ಲಿಗಳು ತುಂಬಾ ವಿಷಪೂರಿತವಾದುದು. ಆದ್ದರಿಂದ ಯಾರೇ ಆದರೂ ಅದರ ಸಂಪರ್ಕಕ್ಕೆ ಬಂದ ಕೂಡಲೇ ಸ್ನಾನ ಮಾಡಬೇಕು ಎನ್ನುತ್ತಾರೆ.
ಹಲ್ಲಿ, ಜಿರಳೆ ಇವುಗಳಿಂದ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರಲ್ಲೂ ಮನೆಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಅವರಿಗೆ ಇವುಗಳಿಂದ ಆರೋಗ್ಯದ ಸಮಸ್ಯೆ ಜಾಸ್ತಿ. ಹಲ್ಲಿ ಯನ್ನು ಮನೆಯಿಂದ ಓಡಿಸಲು ಹರಸಾಹಸ ಪಡುವ ನಿಮಗೆ ಇಲ್ಲಿದೆ ಸುಲಭ ಉಪಾಯ.
- ಮನೆಯಲ್ಲಿ ಬೇಡವಾದ ಕಸ ಆಹಾರವನ್ನು ಹೊರಗೆ ಎಸೆದು ಬಿಡಿ ಯಾಕೆಂದರೆ ಇದರಿಂದ ತಮ್ಮ ಸಂತತಿಯನ್ನು ಹೆಚ್ಚು ಮಾಡಿ ಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಬೇರೆ ಬೇರೆ ಕೀಟಗಳು, ಚಿಟ್ಟೆಗಳು, ಜಿರಳೆಗಳು ಜೊತೆಗೆ ಇರುವೆಗಳು ಕೂಡ ನಿಮ್ಮ ಮನೆ ಯಲ್ಲಿ ಹೆಚ್ಚಾಗುತ್ತವೆ.
- ಟೇಬಲ್ ಫ್ಯಾನ್ ಬಳಿ ಈರುಳ್ಳಿ ಬೆಳ್ಳುಳ್ಳಿ ಇಟ್ಟು ಬಿಡಿ ಯಾಕೆಂದರೆ ಹಲ್ಲಿಗಳಿಗೆ ಈರುಳ್ಳಿ ಬೆಳ್ಳುಳ್ಳಿ ಆಗಿ ಬರುವುದಿಲ್ಲ.
- ಕೋಣೆ ತಾಪಮಾನ ತಗ್ಗಿಸಿ. ಅತಿಯಾಗಿ ತಂಪಾಗಿರುವಂತಹ ಜಾಗಗಳಲ್ಲಿ ಹಲ್ಲಿಗಳು ಇರುವುದು ಕಡಿಮೆ. ಮನೆಯಲ್ಲಿ ಹವಾನಿಯಂತ್ರಕವಿದ್ದರೆ ಆಗ ನೀವು ಇದನ್ನು 22 ಡಿಗ್ರಿಯಲ್ಲಿಟ್ಟು ತಂಪು ಮಾಡಿ. ಇದರಿಂದ ಹಲ್ಲಿಯು ಖಂಡಿತವಾಗಿಯೂ ಅಲ್ಲಿಂದ ಓಡಿ ಹೋಗುವುದು
- ಕ್ಯಾಬಿನೆಟ್ ಅನ್ನು ದಿನ ದಿನ ಸ್ವಚ್ಛ ಗೊಳಿಸಿ. ಸಾಧ್ಯವಾದರೆ ಅವುಗಳ ಮೇಲೆ ನ್ಯೂಸ್ ಪೇಪರ್ ಹಾಕಿ ಅದರ ಮೇಲೆ ವಸ್ತುಗಳನ್ನು ಇರಿಸಿ. ಇದರಿಂದ ಮರ ಹಾಳಾಗುವುದು ತಪ್ಪುತ್ತದೆ ಮತ್ತು ಕ್ಯಾಬಿನೆಟ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಜೊತೆಗೆ ಹಲ್ಲಿಗಳ ಕಾಟ ಕೂಡ ತಪ್ಪುತ್ತದೆ.
- ನ್ಯಾಪ್ತಲಿನ್ ಬಾಲ್ ಬಳಸಿ ಇದು ಕೇವಲ ಪಲ್ಲಿಗಳನ್ನು ಮಾತ್ರವಲ್ಲ ಯಾವುದೇ ರೀತಿಯ ಕೀಟ ಗಳನ್ನು, ಜಿರಳೆಗಳನ್ನು ಸಹ ಮನೆಯಿಂದ ಹೊರ ಹೋಗುವಂತೆ ಮಾಡುತ್ತದೆ. ಆದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ, ಅವರ ಕೈಗೆ ಸಿಗದಂತೆ ಇರಿಸುವುದು ಉತ್ತಮ.
- ಪೆಪ್ಪರ್ ಸ್ಪ್ರೇ ಹಾಕುವುದರಿಂದ ಇದು ಹಲ್ಲಿಗಳ ದೇಹದ ಮೇಲೆ ಉರಿ ಕಂಡುಬರುವಂತೆ ಮಾಡುತ್ತದೆ ಮತ್ತು ಇದರಿಂದ ಪಲ್ಲಿಗಳು ದೂರ ಉಳಿಯುತ್ತವೆ.
- ಸೊಳ್ಳೆ ನಿವಾರಕ ದ್ರಾವಣವು ಹೆಚ್ಚಾಗಿ ಪ್ರತಿಯೊಬ್ಬರ ಮನೆಯಲ್ಲೂ ಇರುವುದು. ಹೀಗಾಗಿ ಇದನ್ನು ಬಳಸಿದರೆ ಹಲ್ಲಿಗಳನ್ನು ದೂರ ಮಾಡಬಹುದು. ಇದನ್ನು ಹಾಗೆ ಸ್ಪ್ರೇ ಮಾಡಬಹುದು ಅಥವಾ ಹಚ್ಚಿದರೆ ಆಗ ಹಲ್ಲಿಗಳು ದೂರ ಓಡುವುದು. ಇದರ ರಾಸಾಯನಿಕದ ವಾಸನೆಯಿಂದಾಗಿ ಹಲ್ಲಿಗಳು ದೂರ ಓಡಿ ಹೋಗುವುದು.
- ಎಗ್ ಶೆಲ್ ನಿಂದ ಬಿಡುಗಡೆಯಾಗುವ ವಾಸನೆ ಪಲ್ಲಿಗಳಿಗೆ ಸ್ವಲ್ಪವೂ ಆಗಿ ಬರುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ನಿಮ್ಮ ಬಳಿ ಒಂದು ವೇಳೆ ಖಾಲಿ ಮೊಟ್ಟೆ ಇದ್ದರೆ ಅದನ್ನು ನೀವು ನಿಮ್ಮ ಮನೆಯಲ್ಲಿ ಸಾಮಾನ್ಯ ವಾಗಿ ಪಲ್ಲಿಗಳು ಓಡಾಡುವ ಜಾಗಗಳಲ್ಲಿ ಇರಿಸಿ. ಹಲ್ಲಿ ಯಾವುದೇ ರೀತಿಯಿಂದಲೂ ಹಾನಿ ಉಂಟು ಮಾಡುವುದಿಲ್ಲ . ಆದರೆ ಹಲ್ಲಿ ನಿಮಗೆ ಇಷ್ಟವೇ ಇಲ್ಲವೆಂದಾದರೆ ಆಗ ನೀವು ಈ ಮೇಲಿನ ಸೂತ್ರಗಳನ್ನು ಅನುಸರಿಸಿಕೊಂಡು ಹಲ್ಲಿಗಳನ್ನು ಮನೆಯಿಂದ ದೂರ ಮಾಡಬಹುದು. ಹಾಗೂ ಇದರ ಭಯದಿಂದ ಸಹ ತಪ್ಪಿಸಕೊಳ್ಳಬಹುದಾಗಿದೆ.