Bats : ಬಾವಲಿಯ ಶುಭ ಅಶುಭದ ಬಗೆಗಿನ ಕಿರು ಮಾಹಿತಿ | ಮನೆಯೊಳಗೆ ಬಾವಲಿ ಬಂದರೆ ಒಳ್ಳೆಯದೋ ಕೆಟ್ಟದೋ?
ನಮ್ಮಲ್ಲಿ ಶುಭ, ಅಶುಭಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಂಬಿಕೆ, ಮೂಢ ನಂಬಿಕೆಗಳಿವೆ. ಮಾನವ ಹಾಗೂ ಈ ಪ್ರಾಣಿ- ಪಕ್ಷಿಗಳ ನಡುವೆ ಒಂದಕ್ಕೊಂದು ಸಂಬಂಧವಿದೆಯಂತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಾಣಿಗಳು ಮತ್ತು ಪಕ್ಷಿಗಳ ಹಠಾತ್ ಆಗಮನವು ಮಾನವನ ಭವಿಷ್ಯದ ಘಟನೆಗಳ ಆಗು-ಹೋಗುಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಕೆಲವೊಂದು ಜೀವಿಗಳು ಮನೆಯೊಳಗೆ ಬಂದರೂ ಇಂತಹದ್ದೇ ನಂಬಿಕೆಗಳು ಚರ್ಚೆಗೆ ಬರುತ್ತವೆ. ಬಾವಲಿಗಳ ವಿಷಯದಲ್ಲೂ ನಮ್ಮಲ್ಲಿ ಇಂತಹದ್ದೇ ಸಾಕಷ್ಟು ಶಕುನದ ನಂಬಿಕೆಗಳಿವೆ. ಈ ಬಾವಲಿ ಮಿತ್ರ ಕಾಣಸಿಗೋದು ರಾತ್ರಿ ಮಾತ್ರ. ಹಳೆ ಗುಹೆಗಳು, ಪಾಳು ಬಿದ್ದ ಮನೆ, ದೈತ್ಯ ಮರಗಳು ಬಾವಲಿಗಳ ವಾಸಸ್ಥಾನ. ಆದರೆ ಈ ಬಾವಲಿಗಳೇನಾದರೂ ಮನೆಯೊಳಗೆ ಬಂದರೆ ಜನಮಂದಿಯೆಲ್ಲ ಇದು ಅಪಶಕುನದ ಸೂಚನೆ ಎಂದು ನಂಬುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ.
ಮನೆಯಲ್ಲಿ ಬಾವಲಿಗಳ ಉಪಸ್ಥಿತಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಬಾವಲಿಯು ಹಗಲಿನಲ್ಲಿ ಕಾಣುವುದಿಲ್ಲ, ಆದ್ದರಿಂದ ಇದನ್ನು ರಾತ್ರಿ ಹಕ್ಕಿ ಎಂದೂ ಕರೆಯುತ್ತಾರೆ. ಮನೆಗೆ ಬಾವಲಿಗಳ ಬರುವುದರಿಂದ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ವಾಸವಾಗುತ್ತದೆ. ಇದರಿಂದಾಗಿ ಮನೆಯಲ್ಲಿ ವಾಸಿಸುವ ಜನರ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ ಮತ್ತು ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ. ಇದರೊಂದಿಗೆ, ಇವುಗಳು ದೆವ್ವಗಳಂತೆ ತಲೆಕೆಳಗಾಗಿ ನೇತಾಡುವ ಕಾರಣ ಕೆಲವು ಕೆಟ್ಟ ಸುದ್ದಿಗಳ ಆಗಮನವನ್ನು ಸಹ ಸೂಚಿಸುತ್ತವೆ.
ಕೆಲವೊಮ್ಮೆ ಬಾವಲಿಗಳು ಮನೆಯೊಳಗೆ ಹಾರಾಡುತ್ತಿರುತ್ತವೆ. ಈ ರೀತಿಯಾಗಿ ಬಾವಲಿಗಳು ಮನೆಗೆ ಪ್ರವೇಶಿಸುವುದರಿಂದ ಆರ್ಥಿಕ ನಷ್ಟಗಳು ಉಂಟಾಗುತ್ತದೆ. ಅಲ್ಲದೆ, ನಿರಂತರವಾಗಿ ಮನೆಯಲ್ಲಿ ಬಾವಲಿಗಳು ಹಾರಾಡುತ್ತಿದ್ದರೆ ಮನೆಯ ಯಜಮಾನನು ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಬಾವಲಿಗಳು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಇದರಿಂದ ಮನೆಯಲ್ಲಿ ಅಶಾಂತಿ, ಅಪಶ್ರುತಿಗಳು ಪ್ರಾರಂಭವಾಗುತ್ತವೆ ಎಂದು ನಂಬಲಾಗುತ್ತದೆ.
ಬಾವಲಿಗಳು ಮನೆಯೊಳಗೆ ಪ್ರವೇಶಿಸುವುದರಿಂದ ಸಂಸಾರದಲ್ಲಿ ವಿರಸ ಉಂಟಾಗುತ್ತದೆ. ಗಂಡ ಮತ್ತು ಹೆಂಡತಿಯ ನಡುವೆ ಸಂತೋಷದ ಬದಲಾಗಿ ಕಹಿ ಸೃಷ್ಟಿಯಾಗುತ್ತದೆ. ಜೊತೆಗೆ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಇವುಗಳ ಆಗಮನವು ಆರೋಗ್ಯಕ್ಕೂ ನಾನಾ ಸಮಸ್ಯೆಗಳನ್ನು ತರುತ್ತದೆ. ಬಾವಲಿಗಳು ಪ್ರವೇಶಿಸುವ ಮನೆಯಲ್ಲಿ ರೋಗಗಳು ವೇಗವಾಗಿ ಹರಡುತ್ತವೆ ಎಂಬ ನಂಬಿಕೆಯು ಇದೆ. ಬಾವಲಿಗಳ ವಿಷಯದಲ್ಲಿ ನೋಡುತ್ತಾ ಹೋದರೆ ಇಂತಹ ಹಲವಾರು ನಂಬಿಕೆಗಳು ಕಾಣಸಿಗುತ್ತವೆ.