ತಮಿಳುನಾಡಿನತ್ತ ಮೋದಿಯ ಚಿತ್ತ! 2024ರ ಲೋಕಸಭಾ ಚುನಾವಣೆಯಲ್ಲಿ ತಮಿಳನಾಡಿನ ಈ ಕ್ಷೇತ್ರದಿಂದ ಮೋದಿ ಸ್ಪರ್ಧೆ?
2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಹುಟ್ಟಿದ್ದು ತಮಿಳುನಾಡು ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ಕುತೂಹಲ ಮೂಡಿದೆ. ಅಷ್ಟಕ್ಕೂ ಮೋದಿಯವರು ತಮಿಳು ನಾಡಿನಿಂದ ಸ್ಪರ್ಧಿಸೋದು ಖಚಿತವಾಗಿದೆಯೇ?
ಪ್ರಧಾನಿ ಮೋದಿ ಅವರು 2014 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ವಾರಣಾಸಿ ಮತ್ತು ಗುಜರಾತ್ನ ವಡೋದರಾ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಅದಲ್ಲದೆ, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಕೊನೆಗೆ ವಡೋದರಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ವಾರಣಾಸಿಯನ್ನು ಪ್ರತಿನಿಧಿಸಿದರು. ಅವರು 2019 ರಲ್ಲಿ ವಾರಣಾಸಿಯಿಂದ ಮರು ಆಯ್ಕೆಯಾಗಿದ್ದರು. ಆದರೀಗ ತಮಿಳುನಾಡಿನತ್ತ ಮೋದಿತ ಚಿತ್ತ ನೆಟ್ಟಿದೆಯಾ ಎಂಬುದು ಸದ್ಯದ ಪ್ರಶ್ನೆ.
ಈ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, “ಪ್ರಧಾನಿ ಮೋದಿ ಈಗ ಪ್ರಾದೇಶಿಕ ತಡೆಗೋಡೆಗಳನ್ನು ಮೀರಿದ್ದಾರೆ ಮತ್ತು ದಕ್ಷಿಣದ ರಾಜ್ಯದಲ್ಲಿ “ಒಳಗಿನವರು” ಮತ್ತು “ಹೊರಗಿನವರು” ಎಂದು ಪರಿಗಣಿಸಲ್ಪಡುವುದಿಲ್ಲ. ಮೋದಿ ಜಿ ಅವರನ್ನು ಒಳಗಿನವರಂತೆ ನೋಡಲಾಗುತ್ತಿದೆ, ವಾಸ್ತವವಾಗಿ, ಕಳೆದ ತಿಂಗಳ ತಮಿಳು ಸುದ್ದಿಗಳನ್ನು ನೋಡಿದರೆ, ಯಾರೋ ಒಬ್ಬರು ಮೋದಿ ಜಿ ತಮಿಳುನಾಡಿನಿಂದ ಹೋರಾಡುತ್ತಿದ್ದಾರೆ ಎಂಬ ವದಂತಿಯನ್ನು ಪ್ರಾರಂಭಿಸಿದ್ದಾರೆ. ನೀವು ಹೋದಲ್ಲೆಲ್ಲಾ ಜನರು ಪ್ರಧಾನಿ ಮೋದಿ ತಮಿಳುನಾಡಿನಿಂದ ಸ್ಪರ್ಧಿಸುತ್ತಾರೆಯೇ ಎಂದೇ ಕೇಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಅಲ್ಲದೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, “ರಾಮನಾಥಪುರಂನಿಂದ ಅವರು ಸ್ಪರ್ಧೆ ಮಾಡಬಹುದು ಎನ್ನುವ ಚರ್ಚೆ ಆಗುತ್ತಿದೆ. ಇವೆಲ್ಲವೂ ವದಂತಿಗಳು ಮಾತ್ರ. ಜನರ ನಡುವೆ ವಿಚಾರ ಮಾತ್ರ ಚರ್ಚೆಯಲ್ಲಿದೆ. ತಮ್ಮ ಮಾತುಕತೆಗಳಲ್ಲಿ ಅವರು ಮೋದಿ ಜಿ ಸ್ಪರ್ಧಿಸಬೇಕೆಂದು ಬಯಸಿದ್ದಾರೆ. ಮೋದಿ ಜೀ ಅವರನ್ನು ಭಾರತದ ಯಾವುದೇ ಭಾಗದಲ್ಲೂ ಕೂಡ ಹೊರಗಿನವರಾಗಿ ನೋಡೋದಿಲ್ಲ. ನಮ್ಮವರನ್ನಾಗಿಯೇ ನೋಡಲಾಗುತ್ತಿದೆ’ ಎಂದು ಹೇಳಿದ್ದಾರೆ.
2024 ರ ಚುನಾವಣೆ ವಿಭಿನ್ನವಾಗಿರುತ್ತದೆ ಎಂದ ಅವರು ಪ್ರಧಾನಿ ಮೋದಿಯವರು “ಹೊರಗಿನವರು” ಮತ್ತು ಪ್ರಾದೇಶಿಕ ಅಸ್ಮಿತೆಯಂತಹ ಮನಸ್ಥಿತಿಯನ್ನ ತೊಲಗಿಸಿದ್ದಾರೆ ಎಂದು ಹೇಳಿದ್ದಾರೆ. ‘ಜಾತಿ ಅಸ್ಮಿತೆ, ತಮಿಳು ಮೂಲದ ಅಸ್ಮಿತೆ ಮತ್ತು ಬಹಳಷ್ಟು ವಿಷಯಗಳು ಜನರ ಮನಸ್ಸಿನಲ್ಲಿ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುತ್ತವೆ. ಮೋದಿಜಿ ಎಲ್ಲವನ್ನೂ ಮೀರಿದ ವ್ಯಕ್ತಿಯಾಗಿದ್ದಾರೆ. ಎಂದು ಒತ್ತಿ ಹೇಳಿದರು.