ಬರೀ ಆಶ್ವಾಸನೆ ಕೊಡುವ ಸಿಎಂ ಆಗ್ಬೇಡಿ ಎಂದ ಕಾಗಿನೆಲೆ ಈಶ್ವರಪುರಿ ಸ್ವಾಮೀಜಿ! ಸಿಟ್ಟಿಗೆದ್ದು ಶ್ರೀಗಳ ಕೈಯಿಂದ ಮೈಕ್ ಕಿತ್ತುಕೊಂಡ ಬೊಮ್ಮಾಯಿ!!
ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಮೀಜಿ ವಿರುದ್ಧ ವೇದಿಕೆಯಲ್ಲೇ ಸಿಡಿಮಿಡಿಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಅನುದಾನ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಗರಂ ಆದ ಸಿಎಂ ಬಸವರಾಜ ಬೊಮ್ಮಾಯಿ ಸ್ವಾಮೀಜಿಯಿಂದ ಮೈಕ್ ಕಿತ್ತುಕೊಂಡಿದ್ದಾರೆ.
ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಇರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಲೋಕಾರ್ಪಣೆ ಸಂದರ್ಭದಲ್ಲಿ ವೇದಿಕೆಯಲ್ಲಿ ಹಾಜರಿದ್ದ ಕಾಗಿನೆಲೆಯ ಈಶ್ವನಂದಪುರಿ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿವೃದ್ಧಿ ವಿಚಾರದಲ್ಲಿ ಟಾಂಗ್ ನೀಡಿದರು. ಈ ವೇಳೆ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಕಾಗಿನೆಲೆ ಸ್ವಾಮೀಜಿ ವಿರುದ್ಧ ಗರಂ ಆಗಿದ್ದಾರೆ.
ಗರುಡಾಚಾರ್ ಪಾಳ್ಯದಲ್ಲಿ ಇರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಾಗಿನೆಲೆಯ ಈಶ್ವರಾನಂದಪುರಿ ಸ್ವಾಮೀಜಿ ಅವರು ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ, ನೀವು ಬೆಂಗಳೂರಿನ ಪ್ರವಾಹಕ್ಕೆ ಕೇವಲ ಆಶ್ವಾಸನೆ ಕೊಡುವ ಮುಖ್ಯಮಂತ್ರಿ ಆಗಬಾರದು ಎಂದು ಹೇಳಿದರು. ಈ ವೇಳೆ ಸಿಟ್ಟುಗೊಂಡ ಬೊಮ್ಮಾಯಿ ಅವರು ಸ್ವಾಮೀಜಿ ಕೈಯಿಂದ ಮೈಕ್ ಕಸಿದುಕೊಂಡು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು ‘ನಾನು ಆಶ್ವಾಸನೆ ಕೊಡುವ ಮುಖ್ಯಮಂತ್ರಿಯಲ್ಲ, ಹೇಳಿದ ರೀತಿಯೇ ನಡೆದುಕೊಳ್ಳುವ ಮುಖ್ಯಮಂತ್ರಿ. ನನ್ನಿಂದ ಆದ್ರೆ ಕೊಡ್ತೇನೆ ಎಂದು ಹೇಳುವೆ, ಇಲ್ಲದಿದ್ದರೆ ಆಗಲ್ಲ ಎನ್ನುವೆ. ನಾನು ಆಶ್ವಾಸನೆ ಕೊಡುವ ಸಿಎಂ ಅಲ್ಲ ಎಂದು ಗರಂ ಆಗಿಯೇ ಬೊಮ್ಮಾಯಿ ಉತ್ತರಿಸಿದರು. ಬಳಿಕ ಸ್ವಾಮಿಜಿಯವರು ‘ನಾವು ಹೇಳಲು ಹೊರಟಿದ್ದು ಬೇರೆ ವಿಚಾರ, ಅಷ್ಟರಲ್ಲಿ ನೀವು ಮೈಕ್ ತೆಗೊಂಡ್ರಿ, ನೀವು ಎಲ್ಲಾ ಮುಖ್ಯಮಂತ್ರಿಗಳ ಹಾಗೆ ಅಲ್ಲ, ನಿಮ್ಮ ಕಾರ್ಯವೈಖರಿಯನ್ನು ನಾವೆಲ್ಲರೂ ಮೆಚ್ಚಿದ್ದೇವೆ’ ಎಂದು ಸಮಜಾಯಿಷಿ ನೀಡಿದ್ರು.