78 ಕೋಟಿ ಆಸ್ತಿ ನಟ ಸಂಜಯ್ ದತ್ ಹೆಸರಿಗೆ ಬರೆದು ಪ್ರಾಣ ಬಿಟ್ಟ ಮಹಿಳಾ ಅಭಿಮಾನಿ !

Share the Article

ಸೆಲೆಬ್ರಿಟಿಗಳಿಗೆ ದೊಡ್ಡ ದೊಡ್ಡ ಸ್ಟಾರ್‌ ನಟ ನಟಿಯರಿಗೆ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ಹಾಗೆನೇ ಅಭಿಮಾನಿಗಳು ತಮ್ಮದೇ ಆದ ಅಭಿಮಾನವನ್ನು ಅವರವರ ಇಷ್ಟದ ನಟ-ನಟಿಯರಿಗೆ ತೋರಿಸುತ್ತಾರೆ. ಹೆಚ್ಚೆಂದರೆ ತಮ್ಮ ನೆಚ್ಚಿನ ನಟ ನಟಿಯರ ಹೆಸರಿನಲ್ಲಿ ದೇವಸ್ಥಾನ ಕಟ್ಟೋದನ್ನು ಕೂಡಾ ನೋಡಿದ್ದೇವೆ. ಸ್ಯಾಂಡಲ್‌ವುಡ್‌ ಚಿತ್ರರಂಗವನ್ನು ನೋಡಿದರೆ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌, ರವಿಚಂದ್ರನ್‌, ಶಿವಣ್ಣ ಹೀಗೆ ಹಲವಾರು ನಟ ನಟಿಯರಿಗೆ ಅಭಿಮಾನಿಗಳು ಇದ್ದು, ಇವರಿಗೋಸ್ಕರ ಏನು ಮಾಡಲು ಕೂಡಾ ಸಿದ್ಧ ಎಂಬ ಕೆಲಸವನ್ನು ಮಾಡುತ್ತಾರೆ. ಆದರೆ ಇವೆಲ್ಲವನ್ನೂ ಮೀರಿ ಇಲ್ಲೊಬ್ಬ ಅಭಿಮಾನಿ ಒಬ್ಬರು ಬರೋಬ್ಬರಿ 78ಕೋಟಿ ಆಸ್ತಿಯನ್ನು ನಟ ಸಂಜಯ್‌ದತ್‌ ಹೆಸರಿಗೆ ಬರೆದು ಪ್ರಾಣವನ್ನು ಬಿಟ್ಟಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ. ಅದೇನು ವಿಷಯ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಒಂದು ದಿನ ಸಂಜಯ್‌ ದತ್‌ ಅವರಿಗೆ ಬ್ಯಾಂಕ್‌ ಕಡೆಯಿಂದ ಹಾಗೂ ಪೊಲೀಸ್‌ ಕಡೆಯಿಂದ ಫೋನ್‌ ಬರುತ್ತೆ. ಏನು ಎಂದು ಕೇಳಿದಾಗ, 78 ಕೋಟಿ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆಯಲಾಗಿದೆ ಎಂಬ ಸುದ್ದಿ ತಿಳಿಸಲಾಗುತ್ತದೆ. ಯಾರೆಂದು ಕೇಳಿದಾಗ ನಿಶಿ ತ್ರಿಪಾಠಿ ಎನ್ನುವವರು ಈ ಆಸ್ತಿಯನ್ನು ಬರೆದಿದ್ದಾರೆ ಎಂದು. ಆದರೆ ಸಂಜಯ್‌ದತ್‌ ಅವರಿಗೆ ಎಷ್ಟೇ ನೆನಪು ಮಾಡಿಕೊಂಡರೂ ಕೂಡಾ ನೆನಪಿಗೆ ಬರುವುದಿಲ್ಲ. ಅನಂತರ ಈ ವಿಷಯವನ್ನು ಕೆದಕಿದಾಗಿ ಆಕೆ ನಿಶಿ ತ್ರಿಪಾಠಿ ಅವರು ಸಂಜಯ್‌ದತ್‌ ಅವರ ಕಟ್ಟಾ ಅಭಿಮಾನಿ ಎಂದು ತಿಳಿಯುತ್ತದೆ.

ಮುಂಬೈ ನಿವಸಿಯಾಗಿದ್ದ ಈ ನಿಶಿ ತ್ರಿಪಾಠಿ ಅವರಿಗೆ 68 ವರ್ಷ. ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುತ್ತಾರೆ. ದೊಡ್ಡ ಶ್ರೀಮಂತ ಕುಟುಂಬ ಕೂಡಾ ಹೌದು. ಗಂಡ ಇರುವುದಿಲ್ಲ, ಮಕ್ಕಳೂ ಇರುವುದಿಲ್ಲ. ವಯಸ್ಸಾದಂತಹ ತಾಯಿ ಹಾಗೂ ಅಣ್ಣತಮ್ಮಂದಿರ ಜೊತೆಯಲ್ಲಿ ನಿಶಿ ತ್ರಿಪಾಠಿ ವಾಸವಿರುತ್ತಾರೆ. ಆದರೆ ಯಾವಾಗ ಅವರು ಅನಾರೋಗ್ಯಕ್ಕೀಡಾಗುತ್ತಾರೋ ಆ ಸಮಯದಲ್ಲಿ ಅವರನ್ನು ಯಾರೂ ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಆಗ ನಿಶಿ ತ್ರಿಪಾಠಿ ಅವರಿಗೆ ಬದುಕಿನ ಬಗ್ಗೆ ಜಿಗುಪ್ಸೆ ಬರೋದಕ್ಕೆ ಶುರುವಾಗುತ್ತೆ. ಕೊನೆಯ ದಿನಗಳಲ್ಲಿ ಅನಾರೋಗ್ಯದ ಸಮಯದಲ್ಲಿ ಅವರಿಗೆ ಸಾಂತ್ವನ ಹೇಳೋರಾಗಲಿ ಅವರ ಹತ್ತಿರ ಯಾರೂ ಇರುವುದಿಲ್ಲ. ಆಗ ಅವರಿಗೆ ಅನ್ಸುತ್ತೆ, ನನ್ನ ಬಗ್ಗೆ ಇವರಿಗೆ ಯಾರಿಗೂ ಕಾಳಜಿ ಇಲ್ಲ. ಇವರಿಗೆ ಕೇವಲ ಆಸ್ತಿ ಮೇಲೆ ಮಾತ್ರ ಕಣ್ಣಿದೆ. ಈ ವಿಷಯವನ್ನು ಅವರ ತಮ್ಮ ಆಪ್ತರಲ್ಲಿ ಹೇಳಿದ್ದಾರೆ. ಹಾಗಾಗಿ ಈ ಆಸ್ತಿಯನ್ನೆಲ್ಲ ಕೊನೆಗೆ ಸಂಜಯ್‌ ದತ್‌ ಅವರ ಹೆಸರಿಗೆ ಬರೆಯುತ್ತಾರೆ. ಸಂಜಯ್‌ ದತ್‌ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಈ ಆಸ್ತಿಯನ್ನು ಉಪಯೋಗಿಸ ಬಹುದೆಂದು ಈ ವಿಲ್‌ ಅನ್ನು ಬರೆಯುತ್ತಾರೆ. ತನ್ನ ಕೊನೆಯ ದಿನಗಳಲ್ಲಿ ಈ ವಿಲ್ ಅನ್ನು ಸಂಜಯ್‌ ದತ್‌ ಅವರ ಹೆಸರಿಗೆ ಬರೆಯುತ್ತಾರೆ. ಅವರು ಸಾಯುವವರೆಗೆ ಕೂಡಾ ಈ ವಿಚಾರ ಯಾರಿಗೂ ಕೂಡಾ ಗೊತ್ತಾಗುವುದಿಲ್ಲ. ಅನಂತರ ಅವರು ಪ್ರಾಣ ಬಿಟ್ಟಾಗ ಈ ವಿಷಯ ಬಹಿರಂಗಗೊಳ್ಳುತ್ತದೆ.

ಅಪಾರ್ಟ್‌ಮೆಂಟ್‌ 15 ಕೋಟಿ, ಬ್ಯಾಂಕ್‌ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಉಳಿದಂತೆ ಸೈಟ್‌ ಎಲ್ಲವೂ ಸೇರಿ 78 ಕೋಟಿ ಆಸ್ತಿ ಸಂಜಯ್‌ದತ್‌ ಹೆಸರಲ್ಲಿರುತ್ತೆ. ಈ ಕಥೆಯನ್ನು ಕೇಳಿ ಸಂಜಯ್‌ ದತ್‌ ನಿಜಕ್ಕೂ ಶಾಕ್‌ಗೊಳ್ಳುತ್ತಾರೆ. ಈ ಪರಿ ಅಭಿಮಾನಿವನ್ನು ಸಂಜಯ್‌ ದತ್‌ ನಾನು ನೋಡೇ ಇಲ್ಲ ಎಂದು ಹೇಳುತ್ತಾರೆ. ಕೊನೆಗೆ ಅಷ್ಟೂ ಆಸ್ತಿಯನ್ನು ಸಂಜಯ್‌ ದತ್‌ ನಿಶಿ ತ್ರಿಪಾಠಿ ಅವರ ಕುಟುಂಬಸ್ಥರಿಗೆ ಟ್ರಾನ್ಸ್‌ಫರ್‌ ಮಾಡುತ್ತಾರೆ. ಅಂದಹಾಗೆ ಇಷ್ಟು ಮಾತ್ರವಲ್ಲದೇ ನಿಶಿ ತ್ರಿಪಾಠಿ ಅವರು ಇನ್ನೂ ಒಂದು ಪ್ಲ್ಯಾನ್‌ ಮಾಡಿದ್ದರಂತೆ. ಅದೇನೆಂದರೆ ಸಂಜಯ್‌ದತ್‌ ಅವರಿಗೆ ಆಸ್ತಿ ಹೆಸರಿಗೆ ಮಾಡಿದಾಗ, ಖುದ್ದು ಬ್ಯಾಂಕ್‌ ಗೆ ಹೋಗಿ ಇದೆಲ್ಲಾ ಆಸ್ತಿ ಸಂಜಯ್‌ದತ್‌ ಅವರಿಗೆ ಸಲ್ಲಬೇಕು ಎಂದು ಮುಖತಃ ಹೇಳಿಬಂದಿದ್ದರಂತೆ ಎಂದು ವರದಿಯೊಂದು ಇದೆ. ಆದರೆ ಸಂಜಯ್‌ ದತ್‌ ಇದೆಲ್ಲ ನನಗೆ ಸೇರಿದ್ದಲ್ಲ ಇದೆಲ್ಲ ಅವರ ಕುಟುಂಬಸ್ಥರಿಗೆ ಸಲ್ಲಿಕೆಯಾಗಬೇಕೆಂದು ಎಲ್ಲವನ್ನೂ ಅವರ ಮನೆಯವರಿಗೆ ಕೊಟ್ಟು ಬಿಡುತ್ತಾರೆ. ನೋಡಿದ್ರಲ್ಲ ಅಭಿಮಾನಿಗಳ ಅಭಿಮಾನ ಎಂತಹುದು ಎಂದು.

Leave A Reply