ಕೇರಳಕ್ಕೆ ಕಾಲಿಟ್ಟ ಕಾಂತಾರ ನಾಯಕ | ಮಾಲಿವುಡ್ ಸ್ಟಾರ್ ಜೊತೆ ಡಿವೈನ್ ಸ್ಟಾರ್ ಗೆ ಬಿಗ್ ಆಫರ್ !

ಎಲ್ಲೆಡೆ ಅಬ್ಬರಿಸಿ ಬೀಗಿದ ‘ಕಾಂತಾರ’ ಸಿನಿಮಾ ಭರ್ಜರಿ ಹಿಟ್ ಆದ ಬಳಿಕ ನಟ ನಟಿಯರಿಗೆ ಅವಕಾಶದ ಬಾಗಿಲು ಎಲ್ಲರನ್ನು ಅರಸಿಕೊಂಡು ಬರುತ್ತಿವೆ. ರಿಷಬ್ ಶೆಟ್ಟಿ ಸಿನಿಮಾದ ನಾಯಕಿ ಸಪ್ತಮಿ ಗೌಡ ಈಗಾಗಲೇ ಬಾಲಿವುಡ್ ಸಿನಿಮಾ ಅವಕಾಶ ಗಿಟ್ಟಿಸಿಕೊಂಡಿದ್ದು ಅಲ್ಲದೇ ತನ್ನ ನಟನೆಯ ಬಾಲಿವುಡ್ ನಲ್ಲಿ ಕೂಡಾ ತನ್ನ ಪ್ರಭೆ ಬೀರಲು ಅಣಿಯಾಗಿದ್ದಾರೆ. ಬಣ್ಣದ ಲೋಕದಲ್ಲಿ ಈಗಾಗಲೇ ಹಲವು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡ ರಿಷಬ್ ಕಾಂತಾರ ಸಿನಿಮಾದ ಮೂಲಕ ರಾತ್ರೋ ರಾತ್ರಿ ನೇಮ್ ಫೇಮ್ ಗಳಿಸಿ ಡಿವೈನ್ ಸ್ಟಾರ್ ಪಟ್ಟ ಮುಡಿಗೇರಿ ಸಿಕೊಂಡಿದ್ದು, ಸದ್ಯ ಎಲ್ಲ ಚಿತ್ರರಂಗದಿಂದ ಆಫರ್ ಗಳು ಶೆಟ್ರನ್ನ ಹುಡುಕಿಕೊಂಡು ಬರುತ್ತಿವೆ.

 

ರಿಷಬ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ಬಾಲಿವುಡ್ ಸೇರಿದಂತೆ ಬೇರೆ ಚಿತ್ರರಂಗ ಹಾಗೂ ಸ್ಯಾಂಡಲ್ವುಡ್ನ ಕೆಲವು ನಿರ್ಮಾಪಕರಿಂದಲೂ ರಿಷಬ್ ಶೆಟ್ಟಿಗೆ ಆಫರ್ ಗಳು ಅರಸಿಕೊಂಡು ಬರುತ್ತಿವೆ. ಆದರೆ ರಿಷಬ್ ಈ ಕುರಿತು ಚಿಂತಿಸಿ ಪ್ರಾಜೆಕ್ಟ್ಗಳನ್ನು ಚೂಸ್ ಮಾಡಿಕೊಳ್ಳುತ್ತಿದ್ದಾರೆ.ಅಷ್ಟೆ ಅಲ್ಲದೇ, ಮಲಯಾಳಂ ಚಿತ್ರರಂಗದ ಸ್ಟಾರ್ ನಟರೊಬ್ಬರೊಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ.

ಮಲಯಾಳಂ ಸ್ಟಾರ್ ನಟ ಮೊಹನ್ಲಾಲ್ ‘ಮಲೈಕೊಟ್ಟೈ ವಾಲಿಬನ್’ ಹೆಸರಿನ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಲಿಜು ಜೋಸೆಫ್ ನಿರ್ದೇಶಿಸುತ್ತಿರುವ ‘ಮಲೈಕೊಟ್ಟೈ ವಾಲಿಬನ್’ ಸಿನಿಮಾದಲ್ಲಿ ಭಾರತದ ಹಲವು ಚಿತ್ರರಂಗದ ಸ್ಟಾರ್ ನಟರು ಕೂಡ ನಟಿಸಲಿದ್ದಾರೆ ಎನ್ನಲಾಗಿದ್ದು, ಈ ಸಿನಿಮಾದಲ್ಲಿ ತಮಿಳಿನ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ನಟಿಸಲಿದ್ದಾರೆ. ಇವರ ಜೊತೆಗೆ ಸಾಥ್ ನೀಡಲು ತಮಿಳಿನ ಜೀವಾ ಅವರು ಕೂಡ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ.ಆದರೆ, ಈಗಾಗಲೇ ಬಾಲಿವುಡ್ ಅಲ್ಲದೇ ಇನ್ನಿತರ ಚಿತ್ರರಂಗದ ಆಫರ್ ಬಂದ ಸಂದರ್ಭದಲ್ಲಿ ರಿಷಬ್ ಶೆಟ್ಟಿಯವರು ಕನ್ನಡಕ್ಕೆ ಮೊದಲ ಆದ್ಯತೆ ಎಂದು ಹಲವಾರು ಸಂದರ್ಶನದ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲಿವುಡ್ಗೆ ಶೆಟ್ರು ಎಂಟ್ರಿ ಕೊಡೋದು ಡೌಟು ಎನ್ನುವುದು ಸದ್ಯ ಕೇಳಿಬರುತ್ತಿರುವ ಮಾತು. ಸದ್ಯ ಕಾಂತಾರ ಸಿನಿಮಾದ ಗೆಲುವಿನ ಬಳಿಕ ಕನ್ನಡದ ಕಾಂತಾರ 2 ಸಿನಿಮಾದ ಕಡೆಗೆ ಹೆಚ್ಚು ತೊಡಗಿಸಿಕೊಳ್ಳುವ ಸಾಧ್ಯತೆ ಕೂಡ ಇದೆ.

‘ಮಲೈಕೊಟ್ಟೈ ವಾಲಿಬನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ಆಫರ್‌ ಬಂದಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಕನ್ನಡದ ದಾನಿಶ್ ಸೇಠ್ ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ದೊಡ್ಡ ಮೊತ್ತದ ಬಜೆಟ್ನ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾದ ಪ್ಲಾನಿಂಗ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ಸಿನಿಮಾ ಭಾರಿ ಬಜೆಟ್ನಲ್ಲಿ ನಿರ್ಮಾಣವಾಗಿ, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗುವುದು ಪಕ್ಕಾ ಎನ್ನುವ ಸುದ್ಧಿ ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ಮರಾಠಿ ಚಿತ್ರರಂಗದ ಜನಪ್ರಿಯ ನಟಿ ಸೊನಾಲಿ ಕುಲಕರ್ನಿ ನಾಯಕಿಯಾಗಿ ಬಣ್ಣ ಬಣ್ಣ ಹಚ್ಚಲಿದ್ದಾರೆ. ಬೆಂಗಾಲಿ ನಟಿ ಕತಾ ನಂದಿ ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ರಿಷಬ್ ಶೆಟ್ಟಿ ಮುಂದೆ ಹಲವು ಆಯ್ಕೆಗಳಿದ್ದು, ‘ಕಾಂತಾರ 2’ ಸಿನಿಮಾದ ಕಡೆಗೆ ಹೆಚ್ಚು ಗಮನ ವಹಿಸುತ್ತಿದ್ದಾರೆ ಎನ್ನಲಾಗಿದೆ.

‘ಕಾಂತಾರ’ ಸಿನಿಮಾ ದೊಡ್ಡ ಹಿಟ್ ಆದಂತೆ ‘ಕಾಂತಾರ 2’ ಸಿನಿಮಾವನ್ನು ಕೂಡ ಅದೇ ಮಾದರಿಯಲ್ಲಿ ನಿರ್ಮಿಸಲು ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಸಿನಿಮಾದ ಕತೆ ಬರವಣಿಗೆ ಹಂತದಲ್ಲಿದ್ದು ಮುಂದಿನ ಮಳೆಗಾಲದಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ‘ಕಾಂತಾರ 2’ ಸಿನಿಮಾವು ‘ಕಾಂತಾರ’ ಸಿನಿಮಾದಲ್ಲಿ ನಡೆದ ಕತೆಗಿಂತಲೂ ಹಿಂದೆ ನಡೆದ ಕತೆಯ ಎಲೆಯಲ್ಲಿ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಏನೇ ಆದರೂ ರಿಷಬ್ ಶೆಟ್ಟಿ ಕನ್ನಡ ಹಾಗೂ ಕನ್ನಡ ಚಿತ್ರರಂಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಸ್ಪಷ್ಟವಾಗಿದ್ದು ಹೀಗಾಗಿ, ಮಾಲಿವುಡ್ ಕಡೆಗೆ ಗಮನ ವಹಿಸೋದು ಅನುಮಾನ ಎನ್ನಲಾಗುತ್ತಿದ್ದು, ಆದರೆ ಈ ಕುರಿತ ಶೆಟ್ರ ನಿರ್ಣಯ ಏನು ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.