ವಿಚಿತ್ರ ಆದರೆ ಸತ್ಯ | ಕಾರು ಅಥವಾ ಬೈಕಿನಲ್ಲಿ ಪ್ರಯಾಣ ಮಾಡುವಾಗ ನಾಯಿ ಅಟ್ಟಿಸಿಕೊಂಡು ಬರುತ್ತದೆಯೇ? ಇದಕ್ಕೊಂದು ಇಂಟೆರೆಸ್ಟಿಂಗ್ ಕಾರಣ ಇಲ್ಲಿದೆ!

ಸಾಮಾನ್ಯವಾಗಿ, ನಾವು ರಸ್ತೆಯ ಮೇಲೆ ಸಂಚರಿಸುತ್ತಿರುವಾಗ ನಾಯಿಗಳು ವಾಹನವನ್ನು ಹಿಂಬಾಲಿಸುವುದು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅಥವಾ ಯಾರಾದರೂ ವಾಹನವನ್ನು ಚಲಾಯಿಸುವಾಗ ಅವರ ಹಿಂದೆ ನಾಯಿಗಳು ಬೊಗಳುತ್ತಾ ಓಡಿಸುವುದನ್ನು ನೋಡಿರುತ್ತೀರಿ. ಹಾಗಂತ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರುವುದಿಲ್ಲ. ಆದರೆ, ನಾಯಿಗಳು ಕಾರುಗಳು ಅಥವಾ ಬೈಕುಗಳ ಹಿಂದೆ ಏಕೆ ಹೋಗುತ್ತವೆಂಬುವುದು ನಿಮಗೆ ಗೊತ್ತಾದರೆ ಆಶ್ಚರ್ಯ ಚಕಿತರಾಗುವುದಂತು ಖಂಡಿತ. ಹಾಗಾದರೆ ಬನ್ನಿ ವಾಹನಗಳ ಹಿಂದೆ ಓಡುವ ನಾಯಿಗಳ ಹಿಂದೆ ಇರುವ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

 

ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ನಾಯಿಗಳು ಅವರಿಗೆ ಬೊಗಳುತ್ತದೆ. ಏಕೆಂದರೆ ನಾಯಿಯು ಅವರನ್ನು ಅಪರಿಚಿತರಂತೆ ಭಾವಿಸುತ್ತದೆ ಮತ್ತು ಅವರನ್ನು ನಂಬುವುದಿಲ್ಲ. ಅಂತೆಯೇ ತನ್ನ ಏರಿಯಾದಲ್ಲಿ ಜನರು ಓಡಿಸುವ ವಾಹನಗಳ ಹಿಂದೆ ಎಂದಿಗೂ ಹೋಗುವುದಿಲ್ಲ. ಏಕೆಂದರೆ, ನಾಯಿಗಳು ತಮ್ಮ ಮೂತ್ರದಿಂದ ಈ ಪ್ರದೇಶದ ವಾಹನಗಳ ಟೈರ್ ಗಳನ್ನು ವಾಸನೆಯ ಮೂಲಕ ಗುರುತಿಸುತ್ತವೆ, ಅದಕ್ಕಾಗಿಯೇ ಅವರು ಹೋಗುವಾಗ ಈ ಪ್ರದೇಶದ ವಾಹನಗಳನ್ನು ಅನುಸರಿಸುವುದಿಲ್ಲ ಬೇರೆ ವಾಹನಗಳ ಹಿಂದೆಯೇ ಓಡುತ್ತದೆ.

ನಾಯಿಗಳು ಸಾಮಾಜಿಕ ಜೀವಿಗಳು. ಇವುಗಳಲ್ಲಿ ಒಂಟಿತನವು ಕಾಡಿದಾಗ ಜನರನ್ನು ಬೊಗಳುವುದರ ಮೂಲಕ ಅಥವಾ ವಾಹನಗಳನ್ನು ಬೆನ್ನಟ್ಟುವ ಮೂಲಕ ತಮ್ಮ ಸಮಯವನ್ನು ಕಳೆಯುತ್ತದೆ. ವಾಹನದ ಟೈರ್‌ನ ಚಲನೆಯು ನಾಯಿಗಳನ್ನು ಆಕರ್ಷಿಸುತ್ತದೆ. ಚಕ್ರವು ತಿರುಗುತ್ತಿರುವುದನ್ನು ನೋಡಿದಂತೆ ಅವುಗಳನ್ನು ಹಿಡಿಯಬೇಕೆಂಬ ತನ್ನ ಬೇಟೆಯ ಬುದ್ಧಿ ಪ್ರೇರಿಪಿಸುತ್ತದೆ. ಆಗ ವಾಹನಗಳ ಹಿಂದೆ ಓಡುತ್ತದೆ. ಅಲ್ಲದೆ, ಕೆಲವು ವಾಹನಗಳು ದೊಡ್ಡ ಶಬ್ದಗಳೊಂದಿಗೆ ಬಂದಾಗ, ನಾಯಿಗಳನ್ನು ತಕ್ಷಣ ಎಚ್ಚರಿಸಲಾಗುತ್ತದೆ ಅದಕ್ಕೆ ಸಿಟ್ಟುಗೊಂಡು ಆ ವಾಹನಗಳ ಹಿಂದೆ ಬೀಳುತ್ತವೆ.

ನಾಯಿಗಳು ಕೆಲವೊಮ್ಮೆ ತಮ್ಮ ಸ್ವಂತ ಖುಷಿಗಾಗಿಯು ವಾಹನಗಳ ಹಿಂದೆ ಹೋಗುತ್ತವೆ. ನಾಯಿಗಳು ವಾಹನಗಳನ್ನು ಬೆನ್ನಟ್ಟುವುದು ಸಾಕಷ್ಟು ಅಪಘಾತಗಳಿಗೆ ಕಾರಣವಾಗಬಹುದು. ನಾಯಿಗಳು ಬೆನ್ನಟ್ಟಿದಾಗ, ವಾಹನಗಳನ್ನು ವೇಗವಾಗಿ ಓಡಿಸುತ್ತಿರುತ್ತಾರೆ, ಹಠಾತ್ ಬ್ರೇಕ್ ಹಾಕಲಾಗುತ್ತದೆ ಇದರಿಂದಾಗಿ ಗಾಡಿಯಲ್ಲಿರುವ ಜನರು ಕೆಳಗೆ ಬಿದ್ದು ಅಪಘಾತಕ್ಕೆ ಒಳಗಾಗುತ್ತಾರೆ ಅಥವಾ ನಾಯಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Leave A Reply

Your email address will not be published.