Pm Kisan Scheme: ನಿಮ್ಮ ಹಳ್ಳಿಯಲ್ಲಿ ಯಾರಿಗೆ ಎಷ್ಟು ಕಂತಿನ ಹಣ ಜಮೆ ಆಗಿದೆ ಅನ್ನೋದು ತಿಳಿಯೋದು ಹೇಗೆ?
ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 13ನೇ ಕಂತಿಗಾಗಿ ರೈತರು ಎದುರು ನೋಡುತ್ತಿದ್ದಾರೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.
2019ರ ಫೆಬ್ರವರಿಯಲ್ಲಿ ಜಾರಿ ಮಾಡಿದ ಅನುಸಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದಾಗಿದ್ದು, ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ರೈತರ ಖಾತೆಗೆ ಬಿಡುಗಡೆ ಮಾಡಿದ್ದು, ಈ ಯೋಜನೆಯ ಭಾಗವಾಗಿ ಇದುವರೆಗೆ 10 ಕೋಟಿಗೂ ಹೆಚ್ಚು ರೈತರು 12 ಕಂತುಗಳನ್ನು ಪಡೆದಿದ್ದಾರೆ. ಈ ಮೊತ್ತವನ್ನು ಪ್ರತಿ 4 ತಿಂಗಳಿಗೊಮ್ಮೆ ಪ್ರತಿ ವ್ಯಕ್ತಿಗೆ 2,000 ರೂ.ನಂತೆ ಮೂರು ಕಂತುಗಳಲ್ಲಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.ಇದರ ಜೊತೆಗೆ ಯೋಜನೆಯ ಭಾಗವಾಗಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದೆ.
ಪಿಎಂ ಕಿಸಾನ್ ನಿಧಿ ಸನ್ಮಾನ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಇದೀಗ, ಈ ಯೋಜನೆಯ ಅಧಿಕೃತ ಜಾಲತಾಣದಲ್ಲಿ ನಿಮಗಾಗಿ ಹೊಸ ಆಯ್ಕೆಗಳನ್ನು ಸರ್ಕಾರವು ಪ್ರಾರಂಭಿಸಿದೆ. ಈ ಮಾಹಿತಿ ತಿಳಿದುಕೊಳ್ಳಲು ತಾವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು ಇಲ್ಲವೇ ಈ https://pmkisan.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
ನಿಮ್ಮ ಹಳ್ಳಿಯಲ್ಲಿ ಯಾರ್ಯಾರಿಗೆ ಎಷ್ಟು ಕಂತಿನ ಪಿ ಎಮ್ ಕಿಸಾನ್ ಹಣವು ಜಮಾವಾಗಿದೆ ಎಂದು ತಿಳಿಯೋದು ಹೇಗೆ??
ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಹೊಸ ಆಪ್ಪನ್ ಗಳನ್ನು ಅಳವಡಿಸಲಾಗಿದ್ದು ಇದರಿಂದ ರೈತರಿಗೆ ವೆಬ್ ಸೈಟ್ ಉಪಯೋಗ ಮತ್ತಷ್ಟು ಸರಳವಾಗಲಿದೆ.
ವೆಬ್ ಸೈಟ್ ಕೆಳಗಡೆ ಇರುವ ಪೇಮೆಂಟ್ಸ್ ಸಕ್ಸಸ್ ಎಂಬ ಆಪ್ಪನ್ ಕಂಡುಬರುತ್ತದೆ. ಅದರಲ್ಲಿ ಇಯರ್(2022-23) ಆಯ್ಕೆ ಮಾಡಬೇಕಾಗಿದ್ದು, ಸದರಿ ಕಂತಿನ ಅನುದಾನದ ತಿಂಗಳುಗಳನ್ನು ಆಯ್ಕೆ ಮಾಡಬೇಕು. ಅಂದರೆ ಆಗಸ್ಟ್ ಟು ನವೆಂಬರ್ ಎಂದು ಸೆಲೆಕ್ಟ್ ಮಾಡಬೇಕು.( ಆಗಸ್ಟ್ ನಿಂದ ನವೆಂಬರ್ ವರೆಗೆ) ಎಂಬ ಆಯ್ಕೆಯನ್ನು ಒತ್ತಬೇಕು.
ಈ ಸಂದರ್ಭದಲ್ಲಿ ಒಂದು ಬೇರೆ ಸೈಟ್ ಓಪನ್ ಆಗಲಿದ್ದು, ಅದರಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿಕೊಂಡು ಸಬ್ಮಿಟ್ ಕೊಡಬೇಕು. ಹೀಗೆ ಮಾಡಿದ್ದಲ್ಲಿ ನಿಮ್ಮ ಗ್ರಾಮದ ಎಲ್ಲ ಫಲಾನುಭವಿಗಳ ಮಾಹಿತಿ ಲಭ್ಯವಾಗಲಿದೆ. ಯಾರಿಗೆ ಎಷ್ಟೆಷ್ಟು ಕಂತಿನ ಹಣ ಜಮೆ ಆಗಿದೆ. ಅದರಲ್ಲಿ ನಿಮ್ಮ ಹೆಸರನ್ನು ಹುಡುಕಿ ನಿಮಗೆ ಎಷ್ಟು ಕಂತಿನ ಅನುದಾನ ಬಂದಿದೆ ಎಂಬುದನ್ನು ಪರಿಶೀಲನೆ ನಡೆಸಬಹುದು.
12ನೇ ಕಂತಿನ ಪಿಎಂ ಕಿಸಾನ್ ಸನ್ಮಾನ್ ನಿಧಿ ಹಣವು ಬ್ಯಾಂಕ್ ಖಾತೆಗೆ ಬದಲಾಗಿ ಆಧಾರ್ ಕಾರ್ಡಿಗೆ ಬರುತ್ತದೆ, ಎರಡು ಮೂರು ಬ್ಯಾಂಕ್ ಖಾತೆಯನ್ನು ಹೊಂದಿರುವ ರೈತರಿಗೆ ಯಾವ ಖಾತೆಗೆ ಹಣ ಜಮಾ ಆಗುತ್ತದೆ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು. ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ ರೈತರಿಗೆ ಮಾಡಿರುವಂತಹ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ಕೇಂದ್ರ ಸರ್ಕಾರದಿಂದ ಬರುತ್ತದೆ. ಅದೇ ರೀತಿಯಾಗಿ ರಾಜ್ಯ ಸರ್ಕಾರದಿಂದ 4000 ಬರುತ್ತದೆ. ಈಗ 12 ಕಂತಿನ ಹಣವು ಬರಲು ಬಾಕಿಯಿದ್ದು, ಈ ಬಾರಿ ರೈತರಿಗೆ ನೇರವಾಗಿ ಬ್ಯಾಂಕ್ ಖಾತೆ ಬದಲಿಗೆ ಆಧಾರ್ ಕಾರ್ಡ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ ಎನ್ನಲಾಗಿದೆ.
ಬ್ಯಾಂಕಿನ ಖಾತೆಗೆ ಹಣವು ಯಾವಾಗ ಜಮಾ ಆಗುವ ಕುರಿತು ಮಾಹಿತಿ ಅರಿಯುವ ವಿಧಾನ ಹೀಗಿದೆ:
ಕೆಳಗಿನ ಲಿಂಕ್ ಓಪನ್ ಮಾಡಬೇಕು. https://pmkisan.gov.in/BeneficiaryStatus.aspx
ಬಳಿಕ, Farmers corner “ಫಾರ್ಮರ್ ಕಾರ್ನರ್” ನಲ್ಲಿ “Beneficiaries status” ಮೇಲೆ ಕ್ಲಿಕ್ ಮಾಡಬೇಕು. ನಂತರ, ಮೊಬೈಲ್ ನಂಬರ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಅನ್ನು ನೋಂದಾಯಿಸಬೇಕು. ಆ ಬಳಿಕ, ಕ್ಯಾಪ್ಟ ( Captcha ) ಮೇಲೆ ಪ್ರೆಸ್ ಮಾಡಿ get data ಮೇಲೆ ಕ್ಲಿಕ್ ಮಾಡಬೇಕು.
ನೀವು ಮೊಬೈಲ್ ನಂಬರ್ ಹಾಕಲು ಸಮಸ್ಯೆ ಉಂಟಾದರೆ, ಫಾರ್ಮಸ್ ರಿಜಿಸ್ಟ್ರೇಷನ್ ಐಡಿಯನ್ನು (Farmer Registration )ಬಳಸಿ ನೀವು ಮಾಹಿತಿಯನ್ನು ತೆಗೆದುಕೊಳ್ಳಬಹುದು. ಒಂದು ವೇಳೆ, ನಿಮಗೆ ಫಾರ್ಮರ್ ರಿಜಿಸ್ಟ್ರೇಷನ್ ಐಡಿ ತಿಳಿದಿಲ್ಲ ಎಂದಾದರೆ ಚಿಂತಿಸಬೇಕಾಗಿಲ್ಲ. Cick here to know your registration ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಅನ್ನು ನೋಂದಾಯಿಸಿದರೆ ನಿಮಗೆ ಫಾರ್ಮರ್ ರೆಜಿಸ್ಟ್ರೇಷನ್ ಐಡಿ ಲಭ್ಯವಾಗುತ್ತದೆ.