ಸ್ನೇಹಿತರೇ ನಿಮಗೊಂದು ಬೆಸ್ಟ್ ಚಾಲೆಂಜ್ | ಈ ಆಸ್ಟ್ರಿಚ್ ಗಳ ಮಧ್ಯೆ ಒಂದು ಛತ್ರಿ ಇದೆ, ಹುಡುಕ ಬಲ್ಲಿರಾ?
ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ನೋಡಲು ಸಿಗುತ್ತವೆ. ಅದು ಯಾವುದೋ ಪ್ರಾಣಿ-ಪಕ್ಷಿಗಳದ್ದಾಗಿಬಹುದು. ವಸ್ತುಗಳನ್ನು ಪತ್ತೆ ಹಚ್ಚುವ ಕೆಲಸವಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ, ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ಗಮನೀಡುತ್ತೇವೆ ಎಂಬ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ಭಿನ್ನತೆ ಎದುರಾಗುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇದೀಗ ನೀವು ಕೂಡ ನಿಮ್ಮ ಜಾಣ್ಮೆ ಪರೀಕ್ಷೆಗೆ ರೆಡಿನಾ??? ನೀವು ಮಾಡಬೇಕಾದ ಕೆಲಸ ಏನಪ್ಪಾ ಅಂದರೆ, ಅನಿಮೇಟೆಡ್ ಚಿತ್ರವು ಆಸ್ಟ್ರಿಚ್ಗಳ ಗುಂಪನ್ನು ಪ್ರದರ್ಶಿಸುತ್ತದೆ. ಆದರೆ ಚಿತ್ರ ನಡುವಲ್ಲಿ ಛತ್ರಿ ಅಡಗಿದೆ. ನೋಡುಗರ ಕಣ್ಣಿಗೆ ಮಣ್ಣೆರಚಲು ಚಿತ್ರಕಾರ ಛತ್ರಿಯನ್ನು ಜಾಣತನದಿಂದ ಅಡಗಿಸಲಾಗಿದೆ. ಓದುಗರೇ ಈ ಸವಾಲು ಬಿಡಿಸಲು ನೀವು ರೆಡಿನಾ??? ಹಾಗಿದ್ರೆ, ಈಗ ನಿಮ್ಮ ತಲೆಗೆ ಕೆಲಸ ಕೊಡುವುದಷ್ಟೇ ಬಾಕಿ.
ನಿಮ್ಮ ಸಮಯ ಈಗ ಶುರು.
ನಿಮಗೆ 10 ಸೆಕೆಂಡ್ ಕಾಲಾವಕಾಶ ನೀಡಲಾಗುತ್ತದೆ. ಕೆಲವರು ಈಗಾಗಲೇ ಉತ್ತರ ಕಂಡು ಹಿಡಿದಿದ್ದಿರಾ, ಹಾಗಿದ್ರೆ ನಿಮಗೆ ಫುಲ್ ಮಾರ್ಕ್ಸ್ ಕೊಟ್ಟು ಬಿಡಿ. ಆದರೂ ಕೆಲವರಿಗೆ ಅಡಗಿರುವ ಛತ್ರಿ ಎಲ್ಲಿದೆ ಅಂತಾ ತಿಳಿಯುತ್ತಿಲ್ಲ ಎಂದರೆ ಚಿಂತಿಸಬೇಡಿ, ನಾವು ನಿಮಗೆ ಸಣ್ಣ ಸುಳಿವು ಕೊಡ್ತೀವಿ!!
ಅಡಗಿರುವ ಛತ್ರಿಯನ್ನು ಕಂಡುಕೊಳ್ಳಲು ಮೇಲಿನ ಚಿತ್ರವನ್ನು ಚಿತ್ರದ ಬಲಭಾಗದಲ್ಲಿ ಹತ್ತಿರದಿಂದ ನೋಡುವ ಮೂಲಕ ಮತ್ತೊಮ್ಮೆ ಪ್ರಯತ್ನಿಸಿ. ನೀವು ಗುಪ್ತ ಛತ್ರಿಯನ್ನು ಆಗಲು ಗುರುತಿಸಲು ಆಗದೆ ಇದ್ದಲ್ಲಿ , ಚಿತ್ರದ ಬಲಭಾಗದ ಕೆಳಭಾಗವನ್ನು ನೋಡಿ ಮತ್ತು ನೀವು ಕಪ್ಪು ಛತ್ರಿಯನ್ನು ನೋಡಬಹುದು.