ಫೈರ್ ಬೋಲ್ಟ್ ಪರಿಚಯಿಸಿದೆ ಅತಿ ಕಡಿಮೆ‌ಬೆಲೆಯ ಸ್ಮಾರ್ಟ್ ವಾಚ್ ! ಸೂಪರ್, ವಂಡರ್ ಫುಲ್

ಸ್ಮಾರ್ಟ್’ಯುಗದಲ್ಲಿ ಜನರು ಸ್ಮಾರ್ಟ್ ಕಾಣಲು ಕೈಗೆ ಸ್ಮಾರ್ಟ್’ವಾಚ್ ಗಳನ್ನೇ ಕಟ್ಟಿಕೊಳ್ಳುತ್ತಾರೆ. ಇತ್ತೀಚಿಗೆ ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್​​ವಾಚ್​​ಗಳಿಗೆ ಬೇಡಿಕೆಯಿದ್ದಷ್ಟು ಬೇರೆ ಯಾವ ಸಾಧನಗಳಿಗೂ ಇಲ್ಲ ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವಂತಹ ಫೀಚರ್ಸ್​ ಆಗಿರಬಹುದು. ಜನಪ್ರಿಯ ಸ್ಮಾರ್ಟ್​​ವಾಚ್​ ಕಂಪೆನಿಗಳಲ್ಲಿ ಒಂದಾದ ಫೈರ್​​ಬೋಲ್ಟ್​ ಇದೀಗ ತನ್ನ ಮತ್ತೊಂದು ಹೊಸ ಫೈರ್ ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಇದು 120ಕ್ಕೂ ಹೆಚ್ಚೂ ಸ್ಪೋರ್ಟ್ಸ್​​ ಫೀಚರ್​ಗಳನ್ನು ಒಳಗೊಂಡಿದೆ. ಇನ್ನೂ ಹಲವಾರು ಹೊಸ ಫೀಚರ್ಸ್​ಗಳನ್ನು ಹೊಂದಿದ್ದು, ಇದರ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ.

 

ಫೈರ್-ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್ ವಾಚ್ 1.39 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 240×240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್ವಾಚ್ ನಲ್ಲಿ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ನೀಡಲಾಗಿದ್ದು, ಫೋನ್ ಕಾಲ್‌ಗಳನ್ನು ಕಂಟ್ರೋಲ್ ಮಾಡುವ ಅವಕಾಶ ಕೂಡ ಲಭ್ಯವಾಗಲಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಪ್ರಮಾಣೀಕೃತ ವಾಟರ್‌ ರೆಸಿಸ್ಟೆನ್ಸಿಯನ್ನು ಇದು ಹೊಂದಿದೆ.

ಫೈರ್ ಬೋಲ್ಟ್ ಅಲ್ಟ್ರಾ ವಾಚ್‌ ಆರೋಗ್ಯದ ದೃಷ್ಟಿಯಿಂದ, ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌, ಸ್ಲಿಪಿಂಗ್‌ ಟ್ರ್ಯಾಕರ್, ರಕ್ತದ ಆಮ್ಲಜನಕದ ಲೆವೆಲ್ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಅಲ್ಲದೆ, ಈ ಸ್ಮಾರ್ಟ್ ವಾಚ್ ರನ್ನಿಂಗ್, ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್ ಸೇರಿದಂತೆ ಒಟ್ಟು 123 ಸ್ಪೋರ್ಟ್ಸ್ ಮೋಡ್‌ಗಳನ್ನು ಬೆಂಬಲಿಸಲಿದೆ.

ಜೊತೆಗೆ ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿಯಂತಹ ವಾಯ್ಸ್ ಅಸಿಸ್ಟೆಂಟ್ ಗಳಿಗೆ ಕೂಡ ಬೆಂಬಲವನ್ನು ನೀಡಲಿದೆ. ಇದರಿಂದ ಸ್ಮಾರ್ಟ್‌ವಾಚ್‌ನಲ್ಲಿ AI ವಾಯ್ಸ್ ಅಸಿಸ್ಟೆಂಟ್ ಅನ್ನು ಬಳಸಬಹುದಾಗಿದೆ. ಈ ಸ್ಮಾರ್ಟ್‌’ವಾಚ್ ಕಪ್ಪು, ನೀಲಿ, ಕೆಂಪು, ಬೂದು, ಗುಲಾಬಿ ಮತ್ತು ಟೀಲ್ ಎಂಬ ಒಟ್ಟು ಆರು ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.

ಸ್ಮಾರ್ಟ್’ವಾಚ್ ಇನ್‌ಬಿಲ್ಟ್ ಗೇಮ್‌ಗಳೊಂದಿಗೆ ಬರಲಿದ್ದು, ಬಳಕೆದಾರರು ಸ್ಮಾರ್ಟ್‌ವಾಚ್‌ನಲ್ಲಿ ಗೇಮಿಂಗ್ ಅನುಭವವನ್ನು ಕೂಡ ಪಡೆಯಬಹುದು. ಇನ್ನು ಸ್ಮಾರ್ಟ್‌ವಾಚ್ ಸಿಂಗಲ್ ಚಾರ್ಜ್‌ನಲ್ಲಿ ಏಳು ದಿನಗಳ ಬಾಳಿಕೆಯನ್ನು ನೀಡಲಿದೆ. ಇದನ್ನು ಫುಲ್ ಚಾರ್ಜ್ ಮಾಡುವುದಕ್ಕೆ ಸುಮಾರು 120 ನಿಮಿಷಗಳ ಅವಶ್ಯಕತೆಯಿದೆ ಎಂದು ಫೈರ್‌ಬೋಲ್ಟ್ ಕಂಪೆನಿ ಹೇಳಿಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ನಲ್ಲಿ 100+ ಕ್ಲೌಡ್ ವಾಚ್ ಫೇಸ್‌ಗಳನ್ನು ನೀಡಲಾಗಿದ್ದು, ಸ್ಮಾರ್ಟ್ UI ಇಂಟರ್ಫೇಸ್ ಅನ್ನು ಹೊಂದಿದೆ. ಇದರಿಂದ ಕ್ಯಾಮೆರಾ ಮತ್ತು ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನು ಕೂಡ ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಲಾಂಚ್ ಆಗಿರುವ ಫೈರ್-ಬೋಲ್ಡ್ ಟಾಕ್ ಅಲ್ಟ್ರಾ ಸ್ಮಾರ್ಟ್ ವಾಚ್ 1,999 ರೂ. ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ವಾಚ್ ಅನ್ನು ಕಂಪೆನಿಯ ಅಧಿಕೃತ ಇ-ಕಾಮರ್ಸ್ ವೆಬ್‌ಸೈಟ್ ಮತ್ತು ಪ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಮೂಲಕ ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ.

Leave A Reply

Your email address will not be published.