ಬಿ-ಟೌನ್‌ ಸೆಲೆಬ್ರಿಟಿಗಳ ದುಬಾರಿ ಮದುವೆ | ಬೆಲೆ ಬಾಳುವ ಉಡುಗೊರೆಗಳನ್ನು ಪಡೆದ ಜೋಡಿಯರ ಲಿಸ್ಟ್‌ ಇಲ್ಲಿದೆ

ಬಿಟೌನ್‌ನ ದುಬಾರಿ ಮದುವೆಗಳು ಸಾಮಾನ್ಯ ಜನರನ್ನು ನಿಬ್ಬೆರಗಾಗಿಸುವುದು ಸಹಜ. ಅವರ ಉಡುಗೆ ತೊಡುಗೆಯಿಂದ ಹಿಡಿದು ಪ್ರತಿಯೊಂದು ಪಕ್ಕಾ ಸ್ಟೈಲ್‌, ಫ್ಯಾಷನ್‌ ನಿಂದ ಕೂಡಿರುತ್ತದೆ. ಹಾಗೆನೇ ಈ ಸ್ಟಾರ್‌ ನಟ ನಟಿಯರ ಮದುವೆಗೆ ದೊರಕುವ ಉಡುಗೊರೆಗಳು ಕೂಡಾ ಬಹಳ ಸದ್ದು ಮಾಡುತ್ತದೆ. ಹೌದು, ಇಲ್ಲಿ ನಾವು ಇವತ್ತು ನಿಮಗೆ ಬಿ-ಟೌನ್‌ನ ದುಬಾರಿ ಮದುವೆಯ ಉಡುಗೊರೆಗಳನ್ನು ಪಡೆದುಕೊಂಡ ಜೋಡಿಗಳ ಬಗ್ಗೆ ಹೇಳಲಿದ್ದೇವೆ.

 

ಅರ್ಪಿತಾ ಖಾನ್‌ ಮತ್ತು ಆಯುಷ್‌ ಶರ್ಮಾ : ದಬಾಂಗ್‌ ಸಲ್ಮಾನ್‌ಖಾನ್‌ ನ ತಂಗಿ ಅರ್ಪಿತಾ ಖಾನ್‌. 2014ರಲ್ಲಿ ಅರ್ಪಿತಾ ಮದುವೆಯಾಯಿತು. ಈ ಮದುವೆಯ ಥೀಮ್‌ ಹೇಗಿತ್ತೆಂದರೆ ರಾಜಮನೆತನದ ರೀತಿಯಲ್ಲಿ ನಡೆಯಿತು. ಈ ಮದುವೆಗೆ ಸಲ್ಮಾನ್‌ ದುಬಾರಿ ಬೆಲೆಬಾಳುವ ಫಲಕ್ನುಮಾ ಅರಮನೆಯನ್ನು ( The Taj Falakumna Palace) ಬುಕ್‌ ಮಾಡಿದ್ದರು. ಇದರ ಜೊತೆಗೆ ತಮ್ಮ ಸಹೋದರಿಗೆ ಐಷರಾಮಿ ಉಡುಗೊರೆಯನ್ನು ಕೂಡಾ ನೀಡಿದ್ದಾರೆ. ಸಲ್ಮಾನ್‌ ಖಾನ್‌ ಬಾಂದ್ರಾದಲ್ಲಿ ನವವಿಹಾತರಿಗೆ 3BHK ಫ್ಲಾಟ್‌ನ್ನು ಬುಕ್‌ ಮಾಡಿದ್ದು, ಇದರ ಬೆಲೆ ಬರೋಬ್ಬರಿ ಹದಿನಾರು ಕೋಟಿ ರೂ. ಅಷ್ಟು ಮಾತ್ರವಲ್ಲದೇ ನಾಲ್ಕು ಕೋಟಿ ರೂಪಾಯಿ ಮೌಲ್ಯದ ರೋಲ್ಸ್‌ ರಾಯ್‌ ಫ್ಯಾಂಟಮ್‌ ಕಾರನ್ನು ಕೂಡಾ ಉಡುಗೊರೆಯಾಗಿ ನೀಡಿದ್ದರು.

ಪ್ರಿಯಾಂಕಾ ಮತ್ತು ನಿಕ್‌ ಜೋನಸ್‌ : 2018ರಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ರಾಜಮನೆತನ ಉಮೈದ್‌ ಭವನ ಪ್ಯಾಲೇಸ್‌ನಲ್ಲಿ ಇವರ ಮದುವೆ ನಡೆದಿತ್ತು. ಅಷ್ಟು ಮಾತ್ರವಲ್ಲದೇ ಮದುವೆಯ ನಂತರ ಈ ಜೋಡಿ ತಮ್ಮ ಸ್ನೇಹಿತರಿಗಾಗಿ ಹಲವಾರು ಕಡೆಗಳಲ್ಲಿ ದುಬಾರಿ ಪಾರ್ಟಿಗಳನ್ನು ಕೂಡಾ ಆಯೋಜಿಸಿದ್ದರು. ಪ್ರಿಯಾಂಕ ಅವರು ಸ್ನೋಫ್ಲೇಕ್‌ ಕಿವಿಯೋಲೆಗಳನ್ನು ಪಡೆದಿದ್ದು ಇದರ ಬೆಲೆ ಭಾರತದ ಅಂದಾಜು 55.46 ಲಕ್ಷ ರೂಪಾಯಿದ್ದಾಗಿದೆ.

ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ : ಅಂದ ಹಾಗೆ ಬಿಟೌನ್‌ನ ಮೋಸ್ಟ್‌ ವಾಂಟೆಂಡ್‌ ಜೋಡಿ ಎಂದರೆ ತಪ್ಪಾಗಲಾರದು. ನಟನೆಯ ಉತ್ತುಂಗದ ಶಿಖರದಲ್ಲಿರುವಾಗಲೇ ಆಲಿಯಾ ಭಟ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಾಂದ್ರಾದ ಮನೆಯಲ್ಲಿ ಇವರ ಮದುವೆ ನಡೆದಿತ್ತು. ಸಿದ್ದಾರ್ಥ್‌ ಮಲ್ಹೋತ್ರ ( ಆಲಿಯಾ ಭಟ್‌ ಮಾಜಿ ಪ್ರಿಯಕರ ) ಅವರು ಮೂರು ಲಕ್ಷ ರೂಪಾಯಿ ಮೌಲ್ಯದ ವರ್ಸೇಸ್‌ ಬ್ರ್ಯಾಂಡ್‌ನ ಹ್ಯಾಂಡ್‌ ಬ್ಯಾಗ್‌ ನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ವದಂತಿ ಇದೆ. ಇದರ ಜೊತೆಗೆ ಆಲಿಯಾ ಭಟ್‌ ಗೆ ಪ್ರಿಯಾಂಕಾ ಚೋಪ್ರಾ ಅವರಿಂದ ಒಂಭತ್ತು ಲಕ್ಷ ರೂಪಾಯಿ ಮೌಲ್ಯದ ವಜ್ರದ ನೆಕ್ಲೇಸ್‌ ನೀಡಿದ್ದಾರೆ ಎಂದು ಕೂಡಾ ವರದಿಯಾಗಿತ್ತು. ಆಲಿಯಾ- ರಣಬೀರ್‌ ಅವರ ಬೆಸ್ಟ್‌ ಫ್ರೆಂಡ್‌ ಅಯಾನ್‌ ಮುಖರ್ಜಿ ಈ ಜೋಡಿಗೆ Audi Q8ನ್ನು ಉಡುಗೊರೆಯಾಗಿ ನೀಡಿದ್ದಾರೆ. ರಣವೀರ್‌ ಸಿಂಗ್‌ ರಣಬೀರ್‌ಗೆ ಕವಾಸಕಿ ನಿಂಜಾ H2 R ನ್ನು ಮದುವೆಯ ಉಡುಗೊರೆಯಾಗಿ ನೀಡಿದ್ದರು.

ಕತ್ರಿನಾಕೈಫ್‌ ಮತ್ತು ವಿಕ್ಕಿ ಕೌಶಲ್‌ : 2021ರಲ್ಲಿ ಈ ಜೋಡಿ ವಿವಾಹವಾದರು. ಹೆಚ್ಚಿನ ಬಾಲಿವುಡ್‌ ಸೆಲೆಬ್ರಿಟಿ ಈ ಜೋಡಿ ಮದುವೆಯಲ್ಲಿ ಹಾಜರಿರದಿದ್ದರೂ ಈ ಜೋಡಿಗೆ ಅನೇಕ ದುಬಾರಿ ಮದುವೆಯ ಉಡುಗೊರೆಗಳು ದೊರಕಿದೆ. ಮುಖ್ಯವಾಗಿ ಸಲ್ಮಾನ್‌ ಖಾನ್‌ ನವದಂಪತಿಗಳಿಗೆ ಮೂರು ಕೋಟಿ ಮೌಲ್ಯದ ರೇಂಜ್‌ ರೋವರ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂದು ವರದಿಯಾಗಿತ್ತು. ಹೃತಿಕ್‌ ರೋಷನ್‌ ಮೂರು ಲಕ್ಷ ಮೌಲ್ಯದ BMW G310 R ಬೈಕ್‌ ನ್ನು ನೀಡಿದ್ದಾರೆ ಎಂದು ವರದಿಯಾಗಿತ್ತು. ವರದಿಗಳ ಪ್ರಕಾರ, ಕತ್ರಿಕಾ ಕೈಫ್‌ ಅವರ ಮಾಜಿ ಗೆಳೆಯ ರಣಬೀರ್‌ ಕಪೂರ್‌ ಅವರು 2.7 ಕೋಟಿ ಬೆಲೆಬಾಳುವ ವಜ್ರದ ನೆಕ್ಲೇಸ್‌ನ್ನು ಗಿಫ್ಟ್‌ ಆಗಿ ನೀಡಿದ್ದಾರೆ ಎಂದು ಹೇಳಲಾಗಿದೆ. ಶಾರುಖ್‌ ಖಾನ್‌ ‘ಝೀರೋ’ ಸಹನಟನಿಗೆ 1.5 ಲಕ್ಷ ರೂ. ಮೌಲ್ಯದ ದುಬಾರಿ ಪೇಂಟಿಂಗ್ ನೀಡಿದ್ದರು. ಅನುಷ್ಕಾ ಶರ್ಮಾ ಕತ್ರಿನಾ ಅವರಿಗೆ ಆರು ಲಕ್ಷ ಬೆಲೆಬಾಳೂವ ಡೈಮಂಡ್‌ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಿದ್ದರು.

Leave A Reply

Your email address will not be published.