Weight Loss Tips : ಬೆಳ್ಳಂಬೆಳಗ್ಗೆ ಬರೀ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿಂದರೆ ತೂಕ ಕಡಿಮೆಯಾಗುವುದು ಖಂಡಿತ!
ಹಲವಾರು ಜನರು ತೂಕ ಕಡಿಮೆ ಮಾಡಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿರುತ್ತಾರೆ. ಆದರೆ ತೂಕವನ್ನು ಹೀಗೂ ಇಳಿಸಿಕೊಳ್ಳಬಹುದು. ಹೇಗೆ? ಹೇಗೆಂದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿದರೆ ಸಾಕು 7 ದಿನಗಳಲ್ಲಿ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.
ಸೇಬು ಹಣ್ಣು : ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣು ತಿನ್ನುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಆಪಲ್ ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ತೂಕ ಇಳಿಸಲು ಈ ಸೇಬುಹಣ್ಣು ಸಹಕಾರಿಯಾಗಿದೆ.
ಬಾಳೆಹಣ್ಣು : ಬಾಳೆಹಣ್ಣನ್ನು ಬೆಳಗ್ಗಿನ ಸಮಯ ಖಾಲಿ ಹೊಟ್ಟೆಯಲ್ಲಿ ತಿನ್ನೋದ್ರಿಂದ ತೂಕ ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾದ ಹಲವು ಪೋಷಕಾಂಶಗಳು ಇದೆ. ಹಾಗಾಗಿ ನೀವು ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದರೆ ಇದರ ಸೇವನೆ ಉತ್ತಮ.
ಕಿತ್ತಳೆ : ಕಿತ್ತಳೆ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದಾಗಿದೆ.
ಪಪ್ಪಾಯಿ : ಸೇಬು ಹಣ್ಣು ಮಾತ್ರವಲ್ಲದೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸಿ. ಇದರಿಂದ ತೂಕದಲ್ಲಿ ಇಳಿಕೆಯಾಗುತ್ತದೆ. ಪಪ್ಪಾಯಿಯಲ್ಲಿ ನಾರಿನಂಶವು ಹೇರಳವಾಗಿದ್ದು, ತೂಕ ಕಡಿಮೆಯಾಗಲು ಸಹಕಾರಿಯಾಗಿದೆ.
ಕಿವಿ : ಕಿವಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ಇದು ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಲಿದೆ. ಅದಕ್ಕೆಂದು ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಿ.