ಇಯರ್‌ಬಡ್ಸ್‌ ಕೊಳ್ಳೋ ಪ್ಲ್ಯಾನ್ ಇದ್ರೆ ಭರ್ಜರಿ ಆಫರ್‌ ನಿಮ್ಮ ಮುಂದೆ | ಇಂದು ಖರೀದಿ ಮಾಡಿ ಕೇವಲ ರೂ.26 ಗೆ ಲಾವಾ ಪ್ರೋ ಇಯರ್‌ ಬಡ್ಸ್‌…!

ಭಾರತ ದೇಶದ ಜನತೆ 74 ನೇ ವರ್ಷದ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದಾರೆ. ಈ ವಿಶೇಷ ದಿನದಂದು TWS ನೀಡುತ್ತಿದೆ ಬಂಪರ್ ಆಫರ್. ನೀವೇನಾದ್ರೂ ಇಯರ್‌ಬಡ್ಸ್‌ ತೆಗೆದುಕೊಳ್ಳುವ ಪ್ಲಾನ್’ನಲ್ಲಿದ್ದೀರಾ? ಹಾಗಾದ್ರೆ ನೀವು ಈಗಲೇ ಖರೀದಿಸಬಹುದು. ಯಾಕೆ ಗೊತ್ತಾ? ನಿಮ್ಮ ಕೈಯಲ್ಲಿ 26. ರೂ ಇದ್ರೆ ಸಾಕು, TWS ನ ಲಾವಾ ಪ್ರೊ ಇಯರ್‌ ಫೋನ್ ನಿಮ್ಮ ಕಿವಿಯಲ್ಲಿರುತ್ತೆ!!

ಹೌದು, ಲಾವಾ ಪ್ರೋಬಡ್ಸ್‌ 21 ಟ್ರೂ ವೈರ್‌ಲೆಸ್ ಸ್ಟೀರಿಯೋ (TWS) ಇಯರ್‌ಫೋನ್‌ಗಳನ್ನು ಕಳೆದ ವರ್ಷ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಈ TWS ಇಯರ್‌ಫೋನ್‌ಗಳು ಈಗ ಹೆಚ್ಚು ರಿಯಾಯಿತಿ ದರದಲ್ಲಿ ಲಭ್ಯವಿದೆ. ಲಾವಾ ಪ್ರೊ ಬಡ್ಸ್ 21 TWS ಇಯರ್‌ಫೋನ್‌ಗಳು 12mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು ಅದು ಹೈ-ಡೆಫಿನಿಷನ್ ಧ್ವನಿಯನ್ನು ನೀಡುತ್ತದೆ. ಇದು ಬ್ಲೂಟೂತ್ 5.1 ವೈರ್‌ಲೆಸ್ ಸಂಪರ್ಕವನ್ನು ಹೊಂದಿವೆ ಮತ್ತು ಸುಗಮ ಗೇಮಿಂಗ್ ಅನುಭವಕ್ಕಾಗಿ 75ms ಅಲ್ಟ್ರಾ-ಲೋ-ಲೇಟೆನ್ಸಿ ಕಾಂಟ್ಯಾಕ್ಟ್‌ಗಳನ್ನು ಒಳಗೊಂಡಿದೆ. ಅವುಗಳನ್ನು ಭೌತಿಕ ಧ್ವನಿ ಪ್ರತ್ಯೇಕತೆ ಮತ್ತು ಶಬ್ದ ಕಡಿತವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಇಯರ್‌ಬಡ್‌ಗಳು 9 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿವೆ ಹಾಗೂ 5 ಫುಲ್‌ ಚಾರ್ಜ್‌ಗಳನ್ನು ಒದಗಿಸುವ ಚಾರ್ಜಿಂಗ್ ಕೇಸ್‌ನೊಂದಿಗೆ ಬರುತ್ತದೆ. 200 ನಿಮಿಷಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ಒದಗಿಸಲು 20 ನಿಮಿಷಗಳ ಚಾರ್ಜ್ ಸಾಕು ಎಂದು ಲಾವಾ ಹೇಳುತ್ತದೆ. ಗೂಗಲ್‌ ಅಸಿಸ್ಟೆಂಟ್‌ ಮತ್ತು ಸಿರಿ ವಾಯ್ಸ್‌ ಅಸಿಸ್ಟೆಂಟ್‌ನೊಂದಿಗೆ ಇದು ಕಾಂಪ್ಯಾಕ್ಟ್‌ ಆಗುತ್ತದೆ. ಇನ್ನು ಈ ಇಯರ್‌ಫೋನ್‌ಗಳು ಮ್ಯೂಸಿಕ್‌ ಪ್ಲೇಬ್ಯಾಕ್, ರಿಸೀವ್‌ ಮಾಡಲು ಅಥವಾ ಕಾಲ್‌ ರಿಜೆಕ್ಟ್‌ ಮಾಡಲು ಟಚ್‌ ಕಂಟ್ರೋಲ್‌ಗಳನ್ನು ಸಹ ಪಡೆಯುತ್ತವೆ.

Lava’s Probuds 21 ಇಯರ್‌ಬಡ್‌ಗಳು 20Hz ನಿಂದ 20,000Hz ವರೆಗಿನ ಫ್ರೀಕ್ವೆನ್ಸಿ ರೆಸ್ಪಾನ್ಸ್‌ ಶ್ರೇಣಿಯನ್ನು ಹೊಂದಿವೆ. ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಅವುಗಳನ್ನು IPX4 ನಲ್ಲಿ ರೇಟ್ ಮಾಡಲಾಗಿದೆ. ಕಪ್ಪು, ಬಿಳಿ, ಗ್ಲೇಸಿಯರ್ ಬ್ಲೂ, ಓಷನ್ ಬ್ಲೂ ಮತ್ತು ಸನ್‌ಸೆಟ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ TWS ಇಯರ್‌ಫೋನ್‌ಗಳನ್ನು ಭಾರತದಲ್ಲಿ ರೂ. 1,499 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

Lava Probuds 21 ನೀಡುತ್ತಿರುವ ಗಣರಾಜ್ಯೋತ್ಸವದ ಕೊಡುಗೆಯಲ್ಲಿ ಕೇವಲ ರೂ. 26 ಗೆ ಅಮೆಜಾನ್ ಮತ್ತು ಲಾವಾ ಇ-ಸ್ಟೋರ್ ಮೂಲಕ ಲಭ್ಯವಿದೆ. ಈ Lava TWS ಇಯರ್‌ಫೋನ್‌ಗಳ ಸೀಮಿತ ಕೊಡುಗೆಯು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗಲಿದೆ.

Leave A Reply

Your email address will not be published.