Reliance Jio Bumper Offer : ಗಣರಾಜ್ಯೋತ್ಸವದಂದು ರಿಲಯನ್ಸ್‌ ನಿಂದ ಭರ್ಜರಿ ಕೊಡುಗೆ |‌ ಸಿಗಲಿದೆ ಉಚಿತ ಫೋನ್

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿರುವುದು ಗೊತ್ತಿರುವ ವಿಚಾರವೇ!!! ಈ ನಡುವೆ ರಿಪಬ್ಲಿಕ್ ಡೇ ನಿಟ್ಟಿನಲ್ಲಿ ತನ್ನ ಬಳಕೆದಾರರಿಗೆ ಬಂಪರ್ ಉಡುಗೊರೆಯನ್ನು ನೀಡುತ್ತಿದೆ.

ಗಣರಾಜ್ಯೋತ್ಸವದ ಸಂಭ್ರಮ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕಂಪನಿಗಳು ನವೀನ ಆಫರ್‌ಗಳನ್ನು ಪರಿಚಯಿಸಿವೆ. ಹಲವು ಫೋನ್ ತಯಾರಕ ಕಂಪನಿಗಳು ದುಬಾರಿ ಫೋನ್‌ಗಳನ್ನು ಆಫರ್ ಬೆಲೆಗೆ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಟೆಲಿಕಾಂ ಜಗತ್ತಿನಲ್ಲಿ ತನ್ನ ಪಾರುಪತ್ಯ ಕಾಯ್ದುಕೊಂಡಿರುವ ರಿಲಯನ್ಸ್ ಜಿಯೋ ಕೂಡ ತನ್ನ ಬಳಕೆದಾರರಿಗಾಗಿ ಭರ್ಜರಿ ಕೊಡುಗೆಯನ್ನು ನೀಡುತ್ತಿದ್ದು ಗಣರಾಜ್ಯೋತ್ಸವದಂದು ಜಿಯೋ ಗ್ರಾಹಕರು 4ಜಿ ಫೋನ್ ಅನ್ನು ಉಚಿತವಾಗಿ ಮನೆಗೆ ಒಯ್ಯುವ ಸುವರ್ಣ ಅವಕಾಶ ಕಲ್ಪಿಸಿದೆ.

ತನ್ನ ಬಳಕೆದಾರರಿಗಾಗಿ ಗಣರಾಜ್ಯೋತ್ಸವದ ವಿಶೇಷ ಕೊಡುಗೆ ಪರಿಚಯಿಸಿರುವ ರಿಲಯನ್ಸ್ ಜಿಯೋ 4ಜಿ ಫೋನ್ ಅನ್ನು ಉಚಿತವಾಗಿ ನೀಡುವುದಲ್ಲದೆ ಅನಿಯಮಿತ ಕರೆ ಮತ್ತು ಹೆಚ್ಚಿನ ಡೇಟಾ ಸೌಲಭ್ಯ ಕೂಡ ಒದಗಿಸುತ್ತಿದೆ. ಇನ್ನು ಜಿಯೋದ 1999 ರೂ.ಗಳ ಯೋಜನೆಯನ್ನು ಖರೀದಿಸುವ ಗ್ರಾಹಕರಿಗೆ ಜಿಯೋ ಫೋನ್ ಉಚಿತವಾಗಿ ಪಡೆಯುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಒಂದು ವರ್ಷದ ಮಾನ್ಯತೆಯನ್ನು ಹೊಂದಿದ್ದು, ಉಚಿತ ಕರೆ, ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶದ ಜೊತೆಗೆ ವರ್ಷದವರೆಗೆ 24ಜಿಬಿ ಡೇಟಾ ಸೌಲಭ್ಯ ಲಭ್ಯವಾಗಲಿವೆ.

ಜಿಯೋ ಫೋನ್ ಇಲ್ಲವೇ ಸೆಕೆಂಡರಿ ಫೋನ್ ಖರೀದಿ ಮಾಡುವ ಯೋಜನೆ ಹಾಕಿಕೊಂಡವರು ಈ ಮಾಹಿತಿ ತಿಳಿದುಕೊಳ್ಳಲೇಬೇಕು. ಜಿಯೋಫೋನ್ ವಿಶೇಷತೆಯ ಕಡೆ ಗಮನ ಹರಿಸಿದರೆ, ಜಿಯೋಫೋನ್ 2.4 ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿದ್ದು, ಕ್ಯಾಮೆರಾ, ಮೈಕ್ರೋಫೋನ್, ಸ್ಪೀಕರ್ ಅನ್ನು ಒಳಗೊಂಡಿದೆ. ಇದಲ್ಲದೆ, ಫೇಸ್‌ಬುಕ್, ಯೂಟ್ಯೂಬ್ ಮತ್ತು ವಾಟ್ಸಾಪ್‌ನಂತಹ ಅಪ್ಲಿಕೇಶನ್‌ಗಳು ಕೂಡ ದೊರೆಯಲಿದೆ. ಇದರ ಜೊತೆಗೆ ಟಾರ್ಚ್ ಮತ್ತು ರೇಡಿಯೋ ಫೋನ್‌ನಲ್ಲಿ ಲಭ್ಯವಿದೆ

ಜಿಯೋ ಯೋಜನೆಗಳಲ್ಲಿ 1999 ರೂ.ಗಳ ಉತ್ತಮ ಯೋಜನೆ ಎಂದು ಗುರುತಿಸಿಕೊಂಡಿದೆ ಎರಡು ವರ್ಷಗಳ ಮಾನ್ಯತೆಯ ಜೊತೆಗೆ ಲಭ್ಯವಾಗುವ ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯದ ಜೊತೆಗೆ ಉಚಿತ ಸಂದೇಶ ಸೌಲಭ್ಯ ಕೂಡ ದೊರೆಯಲಿದೆ. ಇದಷ್ಟೇ ಅಲ್ಲದೇ, ಎರಡು ವರ್ಷಗಳವರೆಗೆ 48ಜಿಬಿ ಡಾಟಾ ಆಫರ್ ಜೊತೆಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಕೂಡ ಲಭ್ಯವಿದೆ.

Leave A Reply

Your email address will not be published.