ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ | ಹಾಲ್ ಟಿಕೆಟ್ ಕುರಿತು ಮಹತ್ವದ ಮಾಹಿತಿ ಇಲ್ಲಿದೆ!

Share the Article

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಿಗೆ ಮುಖ್ಯ ಘಟ್ಟವಾಗಿದ್ದು, ಸದ್ಯ ಪರೀಕ್ಷೆಯ ಹಾಲ್ ಟಿಕೆಟ್ ಕುರಿತು ಮುಖ್ಯ ಮಾಹಿತಿ ತಿಳಿಸಿದೆ.

ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನು ಮಂಡಳಿಯ ಪಿಯು ಎಕ್ಸಾಮ್ ಪೋರ್ಟಲ್ ನಲ್ಲಿ ಲಾಗಿನ್ ಆಗುವ ಮೂಲಕ ಡೌನ್ಲೋಡ್ ಮಾಡಿದ ಬಳಿಕ ತಿದ್ದುಪಡಿ ಮಾಡಲು ಜನವರಿ 25ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಕಾಲಾವಕಾಶ ವಿಸ್ತರಿಸಲು ಕೆಲವು ಪ್ರಾಂಶುಪಾಲರು ಮನವಿ ಮಾಡಿದ ಹಿನ್ನೆಲೆ ಅವಧಿ ವಿಸ್ತರಣೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ.

ಮಾರ್ಚ್ ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಲ್ ಟಿಕೆಟ್ ತಯಾರಿಸಲಾಗಿದ್ದು, ಪ್ರವೇಶ ಪತ್ರಗಳಲ್ಲಿ ಅಗತ್ಯ ಕಂಡುಬಂದಲ್ಲಿ ತಿದ್ದುಪಡಿ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜನವರಿ 30ರವರೆಗೆ ಅವಕಾಶ ನೀಡಿದ್ದು, ಈ ಅವಧಿ ಒಳಗೆ ತಿದ್ದುಪಡಿ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದ್ದು, ಈ ಅವಧಿ ಮತ್ತೊಮ್ಮೆ ವಿಸ್ತರಿಸುವುದಿಲ್ಲ ಎಂದು ತಿಳಿಸಿದೆ.

Leave A Reply