ಕೋಕ-ಕೋಲಾ ಫೋನ್ ಭಾರತಕ್ಕೆ ಬಂದೇ ಬಿಡ್ತು | ಈ ಫೋನ್ ನೋಡೋಕೆ ಈ ರೀತಿ ಇದೆ !!!

ಸ್ಮಾರ್ಟ್ ಫೋನ್ ಸ್ಪರ್ಧೆ 2023ರ ಮೊದಲ ತಿಂಗಳೇ ಪ್ರಾರಂಭ ಆದಂತಿದೆ. ಸದ್ಯ ಸ್ಮಾರ್ಟ್ ಫೋನ್ ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ. ಹೌದು ಇದೀಗ ಅಮೆರಿಕಾದ ಜನಪ್ರಿಯ ದೈತ್ಯ ಪಾನೀಯ ಸಂಸ್ಥೆ ಕೋಕಕೋಲಾ ಸಹ ಈಗ ಸ್ಮಾರ್ಟ್‌ಫೋನ್‌ ವಲಯಕ್ಕೆ ಕಾಲಿಟ್ಟಿದೆ.

ಪ್ರಮುಖ ಟಿಪ್‌ಸ್ಟಾರ್‌ ಮುಕುಲ್‌ ಶರ್ಮಾ ಅವರು ತಮ್ಮ ಟ್ವಿಟ್‌ ಮೂಲಕ ಅಮೆರಿಕಾದ ಪಾನೀಯ ಸಂಸ್ಥೆ ಕೋಕ-ಕೋಲಾ ಸಹ ಸ್ಮಾರ್ಟ್‌ಫೋನ್‌ ಕ್ಷೇತ್ರಕ್ಕೆ ಪ್ರವೇಶ ಮಾಡಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕೋಕ ಕೋಲಾ ಸ್ಮಾರ್ಟ್‌ಫೋನ್ ಬ್ರಾಂಡ್‌ನೊಂದಿಗೆ ಕೈ ಜೋಡಿಸಲಿದೆ ಎಂದು ಮುಕುಲ್‌ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.

ಟಿಪ್‌ಸ್ಟಾರ್‌ ಮುಕುಲ್‌ ಶರ್ಮಾ ಕೋಕ-ಕೋಲಾದ ಬರಲಿರುವ ಹೊಸ ಫೋನ್‌ನ ವಿನ್ಯಾಸವನ್ನು ಶೇರ್ ಮಾಡಿದ್ದು, ಫೋನ್‌ ಕೆಂಪು ಬಣ್ಣದ ವೇರಿಯಂಟ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದನ್ನು ಸೂಚಿಸುತ್ತದೆ. ಇನ್ನು ಶೇರ್ ಮಾಡಿರುವ ಫೋಟೊದಲ್ಲಿ ಫೋನ್‌ ಹಿಂಭಾಗದ ಪ್ಯಾನೆಲ್‌ನಲ್ಲಿ ಕೋಕಾ-ಕೋಲಾ ಬ್ರ್ಯಾಂಡಿಂಗ್ ಅನ್ನು ದೊಡ್ಡ ಫಾಂಟ್‌ನಲ್ಲಿ ಕಾಣಿಸಿರುವುದನ್ನು ಗಮನಿಸಬಹುದು. ಅಂದಾಹಗೆ ಕೋಕಾ-ಕೋಲಾ ಸ್ಮಾರ್ಟ್‌ಫೋನ್ ಈ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಿದೆ ಎಂದು ಮುಕುಲ್‌ ಶರ್ಮಾ ಮಾಹಿತಿ ನೀಡಿದ್ದಾರೆ.

ಮುಕುಲ್‌ ಶರ್ಮಾ ಶೇರ್ ಮಾಡಿರುವ ಫೋಟೊ ಪ್ರಕಾರ, ಕೋಕ-ಕೋಲಾ ಸ್ಮಾರ್ಟ್‌ಫೋನ್‌ ಹಿಂದಿನ ಪ್ಯಾನೆಲ್‌ ಲುಕ್‌ ಆಕರ್ಷಕ ರೆಡ್‌ ಲುಕ್‌ನಲ್ಲಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿರುವುದಾಗಿ ತಿಳಿದುಬರುತ್ತದೆ. ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಷ್ ಅನ್ನು ಪಡೆದಿರಲಿದೆ.

ಅಲ್ಲದೆ ಫೋನ್ ಹಿಂಭಾಗದಲ್ಲಿ ಪಾನೀಯ ಬಾಟಲಿಗಳ ಮೇಲೆ ಇರುವಂತೆ ಕೋಕಾ-ಕೋಲಾ ಶೈಲಿಯಲ್ಲಿ ಬೃಹತ್ ಫಾಂಟ್‌ನಲ್ಲಿ ಕೋಕಾ-ಕೋಲಾ ಹೆಸರು ಪ್ರಮುಖ ಹೈಲೈಟ್‌ ಆಗಿ ಕಾಣಿಸಿಕೊಂಡಿರಲಿದೆ. ಹಾಗೆಯೇ ಕೋಕ-ಕೋಲಾ ಸ್ಮಾರ್ಟ್‌ಫೋನ್‌ ಗ್ರೇಡಿಯಂಟ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಫೋನ್‌ ಹಿಂಬದಿಯಲ್ಲಿ ಕೆಂಪು ಬಣ್ಣದ ಛಾಯೆಯು ಹೆಚ್ಚು ಗಾಢವಾಗಿ ಕಾಣುತ್ತದೆ.

ರಿಯಲ್‌ಮಿ 10 5G ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್ ಪಡೆದಿದೆ. ಜೊತೆಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದಲ್ಲದೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಪವರ್ ಇದ್ದು, ಇದು 33W ವರೆಗೆ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇನ್ನು ಕೋಕ ಕೋಲಾ ಫೋನ್ ಬಹುತೇಕ ರಿಯಲ್‌ಮಿ 10, ರಿಯಲ್‌ಮಿ C33 ಮತ್ತು ಒಪ್ಪೋ A78 ಫೋನಿನ ಕ್ಯಾಮೆರಾ ಲೆನ್ಸ್‌ಗಳೆಂತೆ ಕಂಡು ಬರುತ್ತದೆ. ಆದರೆ ಈ ಫೋನ್ ಬಹುತೇಕ ರಿಯಲ್‌ಮಿ 10 ಹೋಲುತ್ತದೆ ಎನ್ನಲಾಗಿದೆ. ಹೊಸದಾಗಿ ಬರಲಿರುವ ಈ ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ಯಾವ ರೀತಿ ಹವಾ ತೋರಿಸಲಿದೆ ಎಂದು ನೀವೇ ನೋಡಬೇಕು.

Leave A Reply

Your email address will not be published.