ಕೇಂದ್ರ ಸರ್ಕಾರದ ಈ ಯೋಜನೆಯಿಂದ ನಿಮಗೆ ದೊರೆಯುತ್ತೆ ಪ್ರತಿ ತಿಂಗಳು ರೂ. 20,000 ಪಿಂಚಣಿ!
ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳು ಜನಸಾಮಾನ್ಯರಿಗೆ ಉಪಯುಕ್ತವಾಗಿದೆ. ಜನರು ವಯಸ್ಕರಾಗಿರುವಾಗಲೂ ಹಣದ ಅವಶ್ಯಕತೆ ಹೆಚ್ಚಿರುತ್ತದೆ. ಹಾಗೇ ವೃದ್ಧಾಪ್ಯದಲ್ಲೂ ಅದರ ಅವಶ್ಯಕತೆ ಸಾಕಷ್ಟಿದೆ. ಹಾಗಾಗಿ ಕೇಂದ್ರ ಸರ್ಕಾರ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಹೆಸರು ರಾಷ್ಟ್ರೀಯ ಪಿಂಚಣಿ ಯೋಜನೆ ಎಂದಾಗಿದ್ದು, ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 20,000 ರೂ. ಪಿಂಚಣಿ ಲಭ್ಯವಾಗಲಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು 2004 ರಲ್ಲಿ ಸರ್ಕಾರಿ ನೌಕರರಿಗಾಗಿ ಪ್ರಾರಂಭಿಸಲಾಗಿದ್ದು, ಬಳಿಕ 2009 ರಲ್ಲಿ, ಈ ಯೋಜನೆಯನ್ನು ಎಲ್ಲಾ ವರ್ಗಗಳಿಗೂ ವಿಸ್ತರಿಸಲಾಯಿತು. ಈ ಯೋಜನೆಯ ಅಡಿಯಲ್ಲಿ, ಕೆಲಸದ ಅವಧಿಯಲ್ಲಿ 40% ಮೊತ್ತವನ್ನು ವರ್ಷಾಶನದಲ್ಲಿ ಹೂಡಿಕೆ ಮಾಡಬೇಕು. ವರ್ಷಾಶನದ ಮೊತ್ತದಿಂದಲೇ ಪಿಂಚಣಿ ಪಡೆಯಲು ಸಾಧ್ಯ.
ರಾಷ್ಟ್ರೀಯ ಪಿಂಚಣಿ ಯೋಜನೆಯ ಪ್ರಯೋಜನಗಳೇನು ?
- ಈ ಯೋಜನೆಯ ಅಡಿಯಲ್ಲಿ ನೀವು ರೂ.1000 ದಿಂದ ಹೂಡಿಕೆ ಮಾಡಲು ಪ್ರಾರಂಭಿಸಬಹುದು.
- ಹಾಗೇ ಈ ಯೋಜನೆಯ ಲಾಭವನ್ನು 18 ರಿಂದ 70 ವರ್ಷ ವಯಸ್ಸಿನವರು ಪಡೆಯಬಹುದಾಗಿದೆ.
- ಅಂತಿಮ ವಿಡ್ರಾವಾಲ್ ಮೇಲೆ 60% ಮೊತ್ತ ಟ್ರ್ಯಾಕ್ಸ್ ಫ್ರೀ ಆಗಿರಲಿದೆ.
- NPS ಖಾತೆಯಲ್ಲಿನ ಕಾಂಟ್ರೀಬ್ಯುಶನ್ ಮಿತಿ 14 ಪ್ರತಿಶತ ಆಗಿದೆ.
- ಹಾಗೂ ವರ್ಷಾಶನ ಖರೀದಿಯಲ್ಲಿ ಹೂಡಿಕೆ ಮಾಡಿದ ಮೊತ್ತ ತೆರಿಗೆ ವಿನಾಯಿತಿಯನ್ನು ಪಡೆಯುತ್ತದೆ.
ನೀವು 20 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿದರೆ, ನಿಮ್ಮ ಕೆಲಸದ ನಿವೃತ್ತಿಯ ತನಕ ನೀವು ಹೂಡಿಕೆ ಮಾಡುವ ಹಣ 5.4 ಲಕ್ಷದಷ್ಟು ಸಂಗ್ರಹವಾಗುತ್ತದೆ. ಇದರ ಮೇಲೆ 9 ರಿಂದ 12 ಪರ್ಸೆಂಟ್ ರಿಟರ್ನ್ ಇರುತ್ತದೆ. ಹಾಗಾಗಿ ಈ ಹೂಡಿಕೆ 1.05 ಕೋಟಿಯಷ್ಟಾಗುತ್ತದೆ. 40 ಶೇ ದಷ್ಟು ಕಾರ್ಪಸ್ ಅನ್ನು ಒಂದು ವರ್ಷಕ್ಕೆ ಪರಿವರ್ತಿಸಿದರೆ, ಈ ಮೊತ್ತ 42.28 ಲಕ್ಷ ರೂ. ಆಗುತ್ತದೆ. ಹಾಗೆಯೇ ಶೇಕಡಾ 10 ರ ವಾರ್ಷಿಕ ದರದಂತೆ, ಪ್ರತಿ ತಿಂಗಳು 21,140 ರೂ ಪಿಂಚಣಿ ಪಡೆಯಬಹುದು. ಈ ಯೋಜನೆ ವೃದ್ಧಾಪ್ಯದಲ್ಲಿ ಸಹಕಾರಿಯಾಗಲಿದೆ.