Airtel Recharge : ರಾಜ್ಯದ ಏರ್ಟೆಲ್ ಗ್ರಾಹಕರಿಗೆ ಬಿಗ್ ಶಾಕ್ !
ಟೆಲಿಕಾಂ ಕಂಪನಿ ಜನತೆಗೆ ಅನುಕೂಲ ಆಗುವಂತೆ ಹಲವಾರು ಆಫರ್ ನೀಡುತ್ತಲಿದೆ. ಹಲವಾರು ನೆಟ್ ವರ್ಕ್ ಗಳು ಒಂದಕ್ಕೊಂದು ತಾನು ಮೇಲು ತಾನು ಮೇಲು ಎಂದು ಸ್ಪರ್ಧೆ ಏರ್ಪಡಿಸುತ್ತಿದೆ.
ಈಗಾಗಲೇ ಭಾರ್ತಿ ಏರ್ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ದೇಶದಲ್ಲಿ ಮೊಬೈಲ್ ರೀಚಾರ್ಜ್ ಬೆಲೆಗಳನ್ನು ಏರಿಸುವ ಬಗ್ಗೆ ಮಾತನಾಡಿದ್ದರು. ಇತ್ತೀಚಿಗೆ ದಾವೋಸ್ನಲ್ಲಿ ಮನಿ ಕಂಟ್ರೋಲ್ ತಂಡದೊಂದಿಗೆ ಮಾತನಾಡಿರುವ ಸುನಿಲ್ ಮಿತ್ತಲ್ ಅವರು, ‘ದೇಶದಲ್ಲಿ ಪ್ರಸ್ತುತ ಟೆಲಿಕಾಂ ಸುಂಕಗಳು ಸಮರ್ಥನೀಯವಾಗಿಲ್ಲ. ಪ್ರತಿ ಬಳಕೆದಾರರಿಂದ ತಿಂಗಳಿಗೆ ಸರಾಸರಿ ಆದಾಯವು 300 ರೂಪಾಯಿಗಳನ್ನು ಮುಟ್ಟಬೇಕಿದ್ದು ಭಾರತದ ಟೆಲಿಕಾಂ ಸೂಕ್ತವಾದ ಬೆಲೆ ವ್ಯವಸ್ಥೆ ಹೊಂದುವ ಅಗತ್ಯವಿದೆ. ದೇಶದ ಗ್ರಾಹಕರು ಪ್ರತಿ ತಿಂಗಳು 300 ರೂಪಾಯಿಗೆ 60GB ವರೆಗೆ ಬಳಸುತ್ತಿರುವುದು ಅತ್ಯಂತ ಅಗ್ಗವಾಗಿದೆ ಎಂದು ಸುನಿಲ್ ಮಿತ್ತಲ್ ಅವರು ಅಭಿಪ್ರಾಯ ನೀಡುವ ಮೂಲಕ ಬೆಲೆ ಏರಿಕೆ ಬಗ್ಗೆ ಸುಳಿವು ನೀಡಿದ್ದರು.
ಹೌದು ಈಗಾಗಲೇ ಏರ್ ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇಟ್ಟುಕೊಳ್ಳಲು ಈ ಮೊದಲು ಇದ್ದ 99 ರೂ.ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ವ್ಯಾಲಿಡಿಟಿಯಲ್ಲಿ 200 MBಯ ಅತ್ಯಂತ ಸೀಮಿತ ಡೇಟಾವನ್ನು ಒದಗಿಸುತ್ತಿತ್ತು. ಆದರೆ ಈ ಯೋಜನೆಯು ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ.
ಏರ್ಟೆಲ್ ತನ್ನ ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಹೆಚ್ಚಿಸುವ ಸಲುವಾಗಿ ತನ್ನ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದ್ದು ಇತ್ತೀಚಿಗಷ್ಟೇ ಹರಿಯಾಣ ಮತ್ತು ಒಡಿಶಾದಲ್ಲಿ ತರಲಾಗಿದ್ದ ಬೆಲೆ ಏರಿಕೆ ಬದಲಾವಣೆಯನ್ನು ಕರ್ನಾಟಕ ಸೇರಿದಂತೆ ಏಳು ಪ್ರದೇಶಗಳಲ್ಲಿ ಜಾರಿಗೆ ತಂದಿದೆ. ಇದರಿಂದಾಗಿ ರಾಜ್ಯದಲ್ಲಿ ಏರ್ಟೆಲ್ ಬಳಕೆದಾರರು ಇನ್ಮುಂದೆ 57% ಹೆಚ್ಚಿನ ಬೆಲೆಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.
ದೇಶದಾದ್ಯಂತ ಏರ್ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇಟ್ಟುಕೊಳ್ಳಲು 99 ರೂ. ಪ್ರೀಪೇಡ್ ಯೋಜನೆಯು ಲಭ್ಯವಿತ್ತು. ಆದರೆ ಹರಿಯಾಣ ಮತ್ತು ಒಡಿಶಾ ವಲಯಗಳಲ್ಲಿ ಏರ್ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇರಿಸಿಕೊಳ್ಳಲು ಕನಿಷ್ಠ ಮೊತ್ತ 155 ರೂ. ರೀಚಾರ್ಜ್ ಮಾಡಿಸಬೇಕು ಎಂದು ತಿಳಿದುಬಂದಿತ್ತು. ಇದೀಗ ಇದೇ ರೀತಿಯ ಬೆಲೆ ಏರಿಕೆಯ ಬದಲಾವಣೆಯನ್ನು ಕರ್ನಾಟಕ, ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಈಶಾನ್ಯ ಭಾಗ, ರಾಜಸ್ಥಾನ, ಮತ್ತು ಯುಪಿ-ಪಶ್ಚಿಮ ಪ್ರದೇಶಗಳಲ್ಲಿ ಸಹ ಜಾರಿಗೆ ತರಲಾಗಿದೆ.
ಏರ್ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇಟ್ಟುಕೊಳ್ಳಲು ಈ ಮೊದಲು ಇದ್ದ 99 ರೂ.ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ವ್ಯಾಲಿಡಿಟಿಯಲ್ಲಿ 200 MBಯ ಅತ್ಯಂತ ಸೀಮಿತ ಡೇಟಾವನ್ನು ಒದಗಿಸುತ್ತಿತ್ತು. ಆದರೆ, ಈ ಯೋಜನೆಯು ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಈಗ ಏರ್ಟೆಲ್ ಪರಿಚಯಿಸಿರುವ ಹೊಸ 155 ರೂ. ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ಅನಿಯಮಿತ ಧ್ವನಿ, 1GB ಡೇಟಾ ಮತ್ತು 300 ಎಸ್ಸೆಮ್ಮೆಸ್ಗಳನ್ನು ನೀಡುತ್ತದೆ. 99 ರೂ.ಗೆ ಹೋಲಿಸಿದರೆ ಇಲ್ಲಿ ಕನಿಷ್ಠ ರೀಚಾರ್ಜ್ ಮೌಲ್ಯದಲ್ಲಿ ಶೇಕಡಾ 57ರಷ್ಟು ಏರಿಕೆಯಾಗಿದೆ ಮತ್ತು ಕೈಗೆಟುಕುವ ಬೆಲೆಯು ಹೆಚ್ಚು ಪ್ರಾಮುಖ್ಯ ಹೊಂದಿರುವ ಗ್ರಾಹಕರ ವಿಭಾಗದಲ್ಲಿ ಇದನ್ನು ಪಟ್ಟಿ ಮಾಡಲಾಗಿದೆ.
ಪ್ರಸ್ತುತ ಜಿಯೋ ದೇಶದಲ್ಲಿ ಅತ್ಯಧಿಕ ಬಳಕೆದಾರರನ್ನು ಹೊಂದಿದ್ದರೂ ಸಹ ದೇಶದ ಜನತೆಯಿಂದ ಸರಾಸರಿ ಹೆಚ್ಚು ಲಾಭವನ್ನು ಏರ್ಟೆಲ್ ಪಡೆಯತ್ತಿದೆ. ಕಳೆದ ತ್ರೈಮಾಸಿಕದ ಕೊನೆಯಲ್ಲಿ, ಏರ್ಟೆಲ್ ಪ್ರತಿ ತಿಂಗಳು ಬಳಕೆದಾರರಿಂದ ಪಡೆಯುತ್ತಿರುವ ಆದಾಯ 190 ರೂ. ಆಗಿದ್ದರೆ, ಜಿಯೊ 177.2 ರೂ. ಸರಾಸರಿ ಆದಾಯವನ್ನು ಪಡೆಯತ್ತಿದೆ. ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪೆನಿ ವೊಡಾಫೋನ್ ಕೇವಲ 131 ರೂ. ಆದಾಯ ಪಡೆಯುತ್ತಿದೆ. ಸರಾಸರಿ ಆದಾಯದಲ್ಲಿ ಪ್ರಸ್ತುತ 200 ರೂ.ಗೆ ಹತ್ತಿರವಿರುವ ಏರ್ಟೆಲ್ ಇದೀಗ ಈ ಮೊತ್ತವನ್ನು 300 ರೂ.ಗೆ ಏರಿಸುವ ಗುರಿ ಇಟ್ಟಿದೆ.
ಪ್ರಸ್ತುತ ದೇಶದ ಟೆಲಿಕಾಂ ಕಂಪೆನಿಗಳು ಪ್ರತಿ ಬಳಕೆದಾರರಿಂದ ಪಡೆಯುತ್ತಿರುವ ಸರಾಸರಿ ಆದಾಯದಲ್ಲಿ ಏರ್ಟೆಲ್ ಈಗಲೂ ಅಗ್ರಸ್ಥಾನದಲ್ಲಿದೆ. ಇದೀಗ ಭಾರತೀಯ ಟೆಲಿಕಾಂ ಲೋಕದ ನಿರೀಕ್ಷಿಯಂತೆಯೇ ಏರ್ಟೆಲ್ ಇಂದು ತನ್ನ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆ ಹೆಚ್ಚಿಸುವ ಮೂಲಕ ರಾಜ್ಯದ ಜನತೆಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.