Bajaj Qute : ದೇಶೀಯ ಮಾರುಕಟ್ಟೆಯಲ್ಲಿ ಇನ್ನು ಮುಂದೆ ವೈಯಕ್ತಿಕ ಬಳಕೆಗೆ ಸಿಗಲಿದೆ ಬಜಾಜ್‌ ಕ್ಯೂಟ್‌ | ಬೈಕ್‌ ದರದಲ್ಲಿ ಅತ್ಯಾಕರ್ಷಕ ಡಿಸೈನ್‌ನೊಂದಿಗೆ ನಿಮ್ಮ ಮುಂದೆ ಶೀಘ್ರದಲ್ಲಿ !

ಭಾರತದ ಬಹುತೇಕ ಮಧ್ಯಮ ವರ್ಗದ ಜನರು ಸಂಚರಿಸುವ ವಾಹನವೆಂದರೇ ಅದು ಆಟೋರಿಕ್ಷಾ. ಇದು ಬಹುತೇಕ ಮಂದಿಯ ಜೀವನಾಧಾರವೂ ಆಗಿದೆ. ಇದೀಗ ನೀವು ವೈಯಕ್ತಿಕ ಬಳಕೆಗೆ ಹೊಸ ಕಾರು ಕೊಂಡುಕೊಳ್ಳುವ ಯೋಚನೆ ಮಾಡಿದಲ್ಲಿ ಈ ಮಾಹಿತಿಯನ್ನು ತಿಳಿದುಕೊಲ್ಲಲೇ ಬೇಕು. ಹೌದು ಹಲವಾರು ಕಂಪನಿಯ ಕಾರುಗಳಿಗೆ ಬೇರೆ ಬೇರೆ ರೀತಿಯ ಬೆಲೆಗಳು ಇರುತ್ತವೆ. ನೀವು ಕಡಿಮೆ ಬೆಲೆಯಲ್ಲಿ ಹೊಸ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ಕೆಲವೇ ದಿನಗಳಲ್ಲಿ ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಬಜಾಜ್ ಆಟೋ ಶೀಘ್ರದಲ್ಲೇ ಕಾರು ಬಿಡುಗಡೆ ಮಾಡುತ್ತದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಆಟೋದ ಪ್ರಮುಖ ವಾಹನವಾಗಿರುವ ಬಜಾಜ್ ಕ್ಯೂಟ್ ಮತ್ತಷ್ಟು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದು ಹಿಂದಿನ ಮಾದರಿಗೆ ಹೋಲಿಸಿದರೆ 17 kg ಹೆಚ್ಚಿನ ತೂಕವನ್ನು ಹೊಂದಿರಬಹುದು ಎಂಬ ಮಾಹಿತಿ ಇದೆ.

ಸದ್ಯ ‘ಬಜಾಜ್ ಕ್ಯೂಟ್’ ಕಾರಲ್ಲ. ಇದನ್ನು ‘ಕ್ವಾಡ್ರಿಸೈಕಲ್’ ಮಾದರಿ ಅಡಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಇಂತಹ ವಾಹನಗಳನ್ನು, ಮೂರು ಚಕ್ರ ಮತ್ತು ನಾಲ್ಕು ಚಕ್ರ ವಾಹನಗಳನ್ನು ಆಧರಿಸಿ ರೆಡಿ ಮಾಡಲಾಗುತ್ತದೆ. ಕಾರು ಹಾಗೂ ಆಟೋರಿಕ್ಷಾಗಳು ಹೊಂದಿರುವ ವೈಶಿಷ್ಟ್ಯವನ್ನು ಪಡೆದಿರುತ್ತವೆ ಎಂದು ಹೇಳಬಹುದು.

ಬಜಾಜ್ ಕ್ಯೂಟ್ ವಿಶೇಷತೆ :

  • ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಬಜಾಜ್ ಕ್ಯೂಟ್ ರೂ.2.48 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ಆದರೆ, ಆನ್-ರೋಡ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಇದು ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ಹಾರ್ಡ್‌ ಟಾಪ್ ರೂಫ್ (ಕಠಿಣ ಮೇಲ್ಚಾವಣಿ), ಆಕರ್ಷಕ ಬಾಗಿಲು, ಸ್ಟೀರಿಂಗ್ ವೀಲ್ಸ್ ಮತ್ತು 2+2 ಸೀಟ್ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಅಗ್ಗದ ಬೆಲೆ ಇರುವುದರಿಂದ ಟ್ಯಾಕ್ಸಿ ಸೇವೆಗಳಿಗೆ ಇದನ್ನು ಉಪಯೋಗ ಮಾಡಲಾಗುತ್ತಿದೆ.
  • ಜೊತೆಗೆ ಇದು 216.6 ಸಿಸಿ, ಲಿಕ್ವಿಡ್ ಕೂಲ್ಡ್ DTS-i ಎಂಜಿನ್ ಹೊಂದಿದೆ. ಪೆಟ್ರೋಲ್ ಆವೃತ್ತಿಯು 13.1 PS ಗರಿಷ್ಠ ಪವರ್ ಹಾಗೂ 18.9 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, CNG ಆವೃತ್ತಿಯು 10.98 PS ಗರಿಷ್ಠ ಪವರ್ 16.1 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅದರ ಬೆಲೆಗೆ ಸರಿಹೊಂದುವಂತೆ ಕಾರ್ಯಕ್ಷಮತೆಯನ್ನು ಹೊಂದಿದೆ.
  • ಮಾರುಕಟ್ಟೆಯಲ್ಲಿ ಸಿಗುವ ಬಜಾಜ್ ಕ್ಯೂಟ್ ಇಂಧನ ದಕ್ಷತೆ ಹಾಗೂ ಮೈಲೇಜ್ ಕುರಿತು ಮಾತನಾಡುವುದಾದರೆ, ಇದರ ಪೆಟ್ರೋಲ್ ಆವೃತ್ತಿ 35kmpl ಮೈಲೇಜ್ ನೀಡಿದರೇ, CNG ಆವೃತ್ತಿ 43km/kg ಇಂಧನ ದಕ್ಷತೆಯನ್ನು ಹೊಂದಿದೆ. ಕೇವಲ 7.20 ಸೆಕೆಂಡುಗಳಲ್ಲಿ 40 kmph ವೇಗವನ್ನು ಪಡೆಯಲಿದ್ದು, 34 ಸೆಕೆಂಡುಗಳಲ್ಲಿಯೇ 70 kmph ಟಾಪ್ ಸ್ವೀಡ್ ತಲುಪಲಿದೆ. ಹೊಸ ಜಾಜ್ ಕ್ಯೂಟ್ ಬರೋಬ್ಬರಿ 400 kg ತೂಕವಿದ್ದು, ಭಾರತದಂತಹ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲಿದೆ. ಸದ್ಯ ಇದೀಗ ಬಜಾಜ್ ಕಾಂಪ್ಯಾಕ್ಟ್ RE ರೂ.2.34 – ರೂ.2.36 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 35-40 kmpl ಇಂಧನ ದಕ್ಷತೆಯನ್ನು ಹೊಂದಿದೆ. ಕಂಪನಿಯು ಈ ಆಟೋರಿಕ್ಷಾವನ್ನು ದುಡಿಯುವ ವರ್ಗಕ್ಕೆ 1,00,00 km ವಾರಂಟಿಯೊಂದಿಗೆ ನೀಡುತ್ತಿದೆ.

ಇನ್ನು ಬಜಾಜ್ ಕ್ಯೂಟ್ ಬೆಲೆಯು ತೀರಾ ಕಡಿಮೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಲು ಮುಂದಾಗುವ ಸಾಧ್ಯತೆ ಇದೆ. ಅದಲ್ಲದೆ ಅತ್ಯುತ್ತಮ ಮೈಲೇಜ್ ನೀಡುವ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಮಾಹಿತಿ ಇದೆ.

Leave A Reply

Your email address will not be published.