ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಹಾಗಿದ್ರೆ ಚಿಂತೆ ಬೇಡ, ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ
ಅಡುಗೆ ಅದೆಷ್ಟೇ ರುಚಿಯಾಗಿ ಮಾಡಿದ್ದರೂ ಉಪ್ಪು ಹೆಚ್ಚಾದರೆ ಮಾಡಿದ ಅಡುಗೆ ಕೆಡುತ್ತದೆ. ಉಪ್ಪು ಕಡಿಮೆಯಾದರೆ ಇನ್ನಷ್ಟು ಸೇರಿಸಬಹುದು. ಆದರೆ ಉಪ್ಪು ಹೆಚ್ಚಾದರೆ ಏನು ಮಾಡಲು ಸಾಧ್ಯವಿಲ್ಲ. ಅದರಿಂದ ತೆಗೆಯೋದಂತು ಅಸಾಧ್ಯ. ಹಾಗಾದ್ರೆ ಏನು ಮಾಡಬಹುದು? ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾದ್ರೆ ಅದಕ್ಕೆ ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ. ಅಡುಗೆಯಲ್ಲಿ ಹೆಚ್ಚಾದ ಉಪ್ಪನ್ನು ಸರಿದೂಗಿಸಿ.
ಆಲೂಗಡ್ಡೆ :
ಹಸಿ ಆಲೂಗಡ್ಡೆಯನ್ನು ಕತ್ತರಿಸಿ, ನಂತರ ಅದನ್ನು ಉಪ್ಪು ಹೆಚ್ಚಾದ ಅಡುಗೆಯಲ್ಲಿ ಸೇರಿಸಿ, ಆದರೆ ಆಲೂಗೆಡ್ಡೆ ಹಾಕುವಾಗ ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಹಾಕಿ. ಇದು ನಿಮ್ಮ ಆಹಾರದಲ್ಲಿರುವ ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತದೆ. ಹಾಗೆಯೇ, ಈ ಆಲೂಗೆಡ್ಡೆಯನ್ನು ಕೇವಲ 20 ನಿಮಿಷಗಳ ಕಾಲ ಆಹಾರದ ಮೇಲೆ ಬಿಡಿ, ನಂತರ ತೆಗೆಯಿರಿ. ಸೂಪ್, ನಾರು ಮುಂತಾದವುಗಳಲ್ಲಿ ಈ ಟ್ರಿಕ್ ಸಹಕಾರಿಯಾಗಿದೆ. ಇದಲ್ಲದೆ ಬೇಯಿಸಿದ ಆಲೂಗೆಡ್ಡೆಯನ್ನು ಸಹ ಉಪ್ಪು ಹೆಚ್ಚಾದ ಆಹಾರಕ್ಕೆ ಸೇರಿಸಿದರೆ, ರುಚಿ ಸರಿಯಾಗುತ್ತದೆ.
ಸಕ್ಕರೆ:
ಸಕ್ಕರೆ ಅಥವಾ ಮೇಪಲ್ ಸಿರಪ್‌ನಂತಹ ಸಿಹಿಕಾರಕವನ್ನು ಉಪ್ಪಾದ ಅಡುಗೆಯಲ್ಲಿ ಸೇರಿಸಿ. ಸಿಹಿ ಮತ್ತು ಉಪ್ಪು ಒಂದು ಒಳ್ಳೆಯ ಕಾಂಬಿನೇಷನ್ ಆಗಿದೆ. ಸಕ್ಕರೆಯು ಆಹಾರದಲ್ಲಿನ ಉಪ್ಪನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ.
ನಿಂಬೆ ರಸ:
ಉಪ್ಪಾದ ಅಡುಗೆಗೆ ನಿಂಬೆ ರಸ ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿದರೆ ಇದು ಉಪ್ಪಿನಂಶವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಟೊಮೆಟೊ ಸಾಸ್ ಅಥವಾ ಟೊಮೆಟೊ ಪೇಸ್ಟ್‌ನಂತಹ ಟೊಮೆಟೊ ಉತ್ಪನ್ನಗಳು ಸಹ ಉಪ್ಪಿನಾಂಶವನ್ನು ಕಡಿಮೆ ಮಾಡುತ್ತದೆ.
ಡೈರಿ ಉತ್ಪನ್ನಗಳು:
ಡೈರಿಯು ಸಕ್ಕರೆಯ ಅಂಶವನ್ನು ಹೊಂದಿರುತ್ತದೆ. ಇದು ಉಪ್ಪಿನ ರುಚಿಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಓಟ್ಸ್ ಹಾಲು ಅಥವಾ ತೆಂಗಿನ ಹಾಲು ಮುಂತಾದ ಡೈರಿ ಉತ್ಪನ್ನಗಳಲ್ಲದ ಹಾಲುಗಳನ್ನು ಸಹ ಉಪ್ಪಾದ ಅಡುಗೆಗೆ ಸೇರಿಸಬಹುದು. ಅಲ್ಲದೆ, ಆಹಾರದಲ್ಲಿ ಹೆಚ್ಚಿರುವ ಉಪ್ಪನ್ನ ಕಡಿಮೆ ಮಾಡಲು, ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನೂ ಸೇರಿಸಬಹುದು.
ಹಿಟ್ಟು :
ಮೈದಾಹಿಟ್ಟು ಹೆಚ್ಚಿನ ಉಪ್ಪನ್ನು ಹೀರಿಕೊಳ್ಳಲು ಸಹಕಾರಿಯಾಗಿದೆ. ನಿಮ್ಮ ಆಹಾರದ ಗಾತ್ರದ ಆಧಾರದ ಮೇಲೆ ಮೈದಾ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ, ಉಪ್ಪು ಹೆಚ್ಚಿರುವ ಆಹಾರದಲ್ಲಿ ಇದನ್ನು ಹಾಕಿ. 20 ರಿಂದ 30 ನಿಮಿಷಗಳ ನಂತರ ತೆಗೆದುಬಿಡಿ.