PhonePe, Gpay, Paytm ವಹಿವಾಟಿಗೆ ಬಂತು ಹೊಸ ನಿಯಮ | ಇನ್ನು ಮುಂದೆ ಇಷ್ಟು ಮಾತ್ರ ಹಣ ಕಳಿಸೋಕೆ ಸಾಧ್ಯ!

ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್ ಪೇ (Google Pay), (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ.

ಹೇಳಿ ಕೇಳಿ ಡಿಜಿಟಲ್ ಯುಗ.. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಇದೀಗ, ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಕೂಡ ಯುಪಿಐ ಪೇಮೆಂಟ್ ಮಾಡಬಹುದಾಗಿದೆ.

NPCI ಮಾರ್ಗಸೂಚಿಗಳ ಅನುಸಾರ, ನೀವು UPI ಮೂಲಕ ಒಂದು ದಿನದಲ್ಲಿ 1 ಲಕ್ಷದವರೆಗಿನ ವಹಿವಾಟುಗಳನ್ನು ಮಾಡಲು ಅವಕಾಶವಿದೆ. ಈ ಮಿತಿಯು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗಬಹುದು. ಕೆನರಾ ಬ್ಯಾಂಕ್‌ನಲ್ಲಿ ದಿನದ ಮಿತಿ ಕೇವಲ 25,000 ರೂ.ಗಳಾಗಿದ್ದು, ಅದೇ ರೀತಿ ಎಸ್‌ಬಿಐನಲ್ಲಿ ದಿನದ ಮಿತಿ 1 ಲಕ್ಷ ರೂ. ಹಣ ವರ್ಗಾವಣೆ ಮಿತಿಯ ಜೊತೆಗೆ, ಒಂದು ದಿನದಲ್ಲಿ ಮಾಡಬಹುದಾದ UPI ವರ್ಗಾವಣೆಗಳ ಸಂಖ್ಯೆಯ ಮೇಲೆ ಕೂಡ ಮಿತಿಯಿದೆ ಎಂಬುದನ್ನು ಗಮನಿಸಬೇಕು.

ಪ್ರತಿ ಬ್ಯಾಂಕ್ ಯುಪಿಐ ವಹಿವಾಟುಗಳಿಗೆ ದೈನಂದಿನ ಮಿತಿಯನ್ನು ಹೊಂದಿರುವುದು ಹೆಚ್ಚಿನವರಿಗೆ ಗೊತ್ತಿರುವ ವಿಚಾರವೇ. ಆದರೆ, ಯುಪಿಐ ಮೂಲಕ ಒಂದೇ ಬಾರಿಗೆ ಎಷ್ಟು ಹಣವನ್ನು ವರ್ಗಾವಣೆ ಇಲ್ಲವೇ ಸ್ವೀಕರಿಸಲು ವಿವಿಧ ಬ್ಯಾಂಕ್‌ಗಳು ವಿಭಿನ್ನ ಮಿತಿಗಳನ್ನು ಹಾಕಲಾಗುತ್ತದೆ. ದೈನಂದಿನ UPI ವರ್ಗಾವಣೆ ಮಿತಿಯನ್ನು 20 ವಹಿವಾಟುಗಳಿಗೆ ಅಳವಡಿಸಲಾಗಿದೆ. ಮಿತಿ ಮುಗಿದ ಬಳಿಕ, ಮಿತಿಯನ್ನು ನವೀಕರಿಸಲು 24 ಗಂಟೆಗಳ ಕಾಲ ಕಾಯಬೇಕಾದ ಅವಶ್ಯಕತೆ ಇದೆ. ವಿಭಿನ್ನ UPI ಅಪ್ಲಿಕೇಶನ್‌ಗಳು ವಿಭಿನ್ನ ಮಿತಿಗಳನ್ನು ಹೊಂದಿವೆ.

Google Pay ಅಥವಾ Gpay ನೊಂದಿಗೆ ಭಾರತೀಯ ಬಳಕೆದಾರರು ದಿನವಿಡೀ UPI ಮೂಲಕ 1 ಲಕ್ಷದವರೆಗೆ ಪಾವತಿಗಳನ್ನು ಮಾಡಲು ಅವಕಾಶವಿದೆ. ನೀವು ಒಂದು ದಿನದಲ್ಲಿ ಕೇವಲ 10 ವಹಿವಾಟು ನಡೆಸಬಹುದಾಗಿದೆ. ನೀವು ಒಂದು ದಿನದಲ್ಲಿ ಗರಿಷ್ಠ 10 ಸಾವಿರದ 10 ವಹಿವಾಟುಗಳನ್ನು ಮಾಡಲು ಅವಕಾಶವಿದೆ. ಅದೇ ರೀತಿ, Paytm UPI ಮೂಲಕ, ನೀವು ಒಂದು ದಿನದಲ್ಲಿ ಕೇವಲ 1 ಲಕ್ಷ ರೂ. ಪಾವತಿಗಳನ್ನು ಮಾಡಬಹುದಾಗಿದೆ.

PhonePe ಯುಪಿಐ ಮೂಲಕ ಒಂದು ದಿನದ ಗರಿಷ್ಠ ಮೊತ್ತದ ಮಿತಿ 1 ಲಕ್ಷ ರೂ. ಆಗಿದ್ದು , ಈಗ ಈ ಅಪ್ಲಿಕೇಶನ್ ಮೂಲಕ ಒಂದು ದಿನದಲ್ಲಿ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ನಡೆಸಬಹುದು. ಇದಲ್ಲದೆ, Paytm ನಿಂದ ಒಂದು ಗಂಟೆಯಲ್ಲಿ ಕೇವಲ 20,000 ರೂ. ಪಾವತಿ ಮಾಡಲು ಅವಕಾಶವಿದೆ. ಈ ಆ್ಯಪ್ ಮೂಲಕ ನೀವು ಒಂದು ಗಂಟೆಯಲ್ಲಿ 5 ವಹಿವಾಟುಗಳನ್ನು ಮಾಡಬಹುದಾಗಿದ್ದು ಒಂದು ದಿನದಲ್ಲಿ ಕೇವಲ 20 ವಹಿವಾಟುಗಳನ್ನು ಮಾಡಬಹುದು. ಅಮೆಜಾನ್ ಪೇ ಯುಪಿಐ ಮೂಲಕ ಪಾವತಿ ಮಾಡುವ ಗರಿಷ್ಠ ಮಿತಿಯನ್ನು 1 ಲಕ್ಷಕ್ಕೆ ನಿಗದಿ ಮಾಡಲಾಗಿದೆ. Amazon Pay UPI ನಲ್ಲಿ ನೋಂದಾಯಿಸಿದ ಬಳಿಕ ಬಳಕೆದಾರರು ಮೊದಲ 24 ಗಂಟೆಗಳಲ್ಲಿ 5000 ರೂಪಾಯಿಗಳವರೆಗೆ ಮಾತ್ರ ವಹಿವಾಟು ನಡೆಸಲು ಅವಕಾಶವಿದೆ. ಇದಲ್ಲದೆ, ಬ್ಯಾಂಕ್ ಅನ್ನು ಆಧರಿಸಿ ದಿನದ ವಹಿವಾಟಿನ ಸಂಖ್ಯೆಯನ್ನು 20 ಕ್ಕೆ ನಿಗದಿ ಮಾಡಲಾಗುತ್ತದೆ.

Leave A Reply

Your email address will not be published.