Bank Holidays in February : ಬ್ಯಾಂಕ್ ಗ್ರಾಹಕರೇ ಫೆಬ್ರವರಿ ತಿಂಗಳಲ್ಲಿ ಈ ದಿನಗಳಂದು ಬ್ಯಾಂಕ್ ಗೆ ಭೇಟಿ ನೀಡಬೇಡಿ | ರಜೆ ಲಿಸ್ಟ್ ಇಲ್ಲಿದೆ !
ಇನ್ನೇನು ಕೆಲವೇ ದಿನಗಳಲ್ಲಿ ಫೆಬ್ರವರಿ ತಿಂಗಳು ಆರಂಭವಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ಕೂಡ ತಪ್ಪಿಸಿದೆ. ಆದರೂ ಕೂಡ ಕೆಲವೊಂದು ಅನಿವಾರ್ಯ ಕಾರ್ಯಗಳಿಗೆ ಬ್ಯಾಂಕ್ಕೆ ಭೇಟಿ ನೀಡಬೇಕಾದ ಪ್ರಸಂಗಗಳು ಎದುರಾಗುತ್ತವೆ. ಆಗ ಬ್ಯಾಂಕ್ಗಳಿಗೆ ರಜೆ ಇದ್ದರೆ ಅದರ ಅರಿವಿಲ್ಲದೆ ಬ್ಯಾಂಕ್ಕೆ ಭೇಟಿ ನೀಡಿ ಸಮಯ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸಲು ರಜಾ ದಿನಗಳ ಬಗ್ಗೆ ತಿಳಿದುಕೊಂಡರೆ ಒಳಿತು.
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್ಗಳು ಬಂದ್ ಆಗಲಿದೆ.
ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಒಂದು ರಾಜ್ಯದಲ್ಲಿ ಬ್ಯಾಂಕ್ ರಜೆ ಇದ್ದರೆ, ಇನ್ನೊಂದು ರಾಜ್ಯದಲ್ಲಿ ಬ್ಯಾಂಕ್ ರಜೆ ಇರದಿರುವ ಸಾಧ್ಯತೆ ಕೂಡ ಇದೆ. ಸದ್ಯ ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜೆಯ ಕ್ಯಾಲೆಂಡರ್ ಅನುಸಾರ, ಮುಂದಿನ ತಿಂಗಳು 10 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.
ಫೆಬ್ರವರಿ 5 ರಂದು ಹಜರತ್ ಅಲಿ ಜಯಂತಿ, ಗುರು ರವಿದಾಸ್ ಜಯಂತಿ ಇದ್ದು ರಜೆ ಇರಲಿದೆ.
ಫೆಬ್ರವರಿ 11 ರಂದು ಎರಡನೇ ಶನಿವಾರದ ಕಾರಣ ರಜೆ ಇರಲಿದೆ.
ಫೆಬ್ರವರಿ 12 ಭಾನುವಾರ ರಜೆ ಇರಲಿದೆ.
ಫೆಬ್ರುವರಿ 15 ರಂದು ಬ್ಯಾಂಕ್ ರಜೆ ಇದ್ದು, ಈ ದಿನ ಮಣಿಪುರದಲ್ಲಿ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲ.
ಫೆಬ್ರವರಿ 18 ರಂದು ಮಹಾ ಶಿವರಾತ್ರಿಯ ಹಬ್ಬದ ನಿಮಿತ್ತ ರಜೆ ಇರಲಿದೆ.
ಫೆಬ್ರವರಿ 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಇದ್ದು, ಬ್ಯಾಂಕ್ ರಜೆ ಇರಲಿದೆ.
ಫೆಬ್ರವರಿ 20 ರಂದು ಅರುಣಾಚಲ ಪ್ರದೇಶ, ಮಿಜೋರಾಂನ ಬ್ಯಾಂಕ್ ಗಳಿಗೆ ರಜೆ ಇರಲಿದೆ.
ಫೆಬ್ರವರಿ 21 ರಂದು ಸಿಕ್ಕಿಂನಲ್ಲಿ ಬ್ಯಾಂಕ್ ರಜಾದಿನವಾಗಿದೆ.
ಫೆಬ್ರವರಿ 25ರಂದು ನಾಲ್ಕನೇ ಶನಿವಾರದ ರಜೆ ಇರಲಿದೆ.
ಫೆಬ್ರವರಿ 26 ಭಾನುವಾರ ಬ್ಯಾಂಕ್ ರಜೆ ಇದೆ.
ಈ ಸಂದರ್ಭಗಳಲ್ಲಿ ಬ್ಯಾಂಕ್ ರಜೆ ಇದ್ದರೂ ಸಹಿತ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಸದುಪಯೋಗ ಪಡಿಸಿಕೊಳ್ಳಬಹುದು. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಇತ್ಯಾದಿಗಳ ಮೂಲಕ ಬ್ಯಾಂಕಿಂಗ್ ಸೇವೆಗಳ ಪ್ರಯೋಜನ ದೊರೆಯಲಿದೆ. ಆದರೆ ಬ್ಯಾಂಕ್ ಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇದ್ದಲ್ಲಿ ರಜಾ ದಿನಗಳ ಬಗ್ಗೆ ತಿಳಿದಿರುವುದು ಒಳ್ಳೆಯದು. ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದಿದ್ದರೆ ಅನ್ಯಥಾ ಓಡಾಡುವ ಜೊತೆಗೆ ಸಮಯ ವ್ಯರ್ಥವಾಗುವುದು ತಪ್ಪುತ್ತದೆ.