Areca Nut Price : ಏರಿತು ಅಡಿಕೆ ಧಾರಣೆ | ಎಷ್ಟು? ಇಲ್ಲಿದೆ ಸಂಪೂರ್ಣ ವಿವರ!

ಕೃಷಿಯನ್ನು ನೆಚ್ಚಿಕೊಂಡಿರುವ ಅನ್ನದಾತರಿಗೆ ಸಿಹಿ ಸುದ್ದಿ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಕೆಲವೊಂದು ಮೂಲಗಳ ಪ್ರಕಾರ, ಅಡಿಕೆ ಧಾರಣೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಕಳೆದ ವರ್ಷದ ಕೊನೆಯಲ್ಲಿ ಕುಸಿತ ಕಂಡಿದ್ದ ಅಡಿಕೆ ಧಾರಣೆ (Areca Nut Price) ಮತ್ತೆ ಚೇತರಿಕೆಯ ಹಾದಿ ಹಿಡಿದಿದ್ದು 47,000 ರೂ.ಗಡಿ ದಾಟಿದೆ.

ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ದರ ವಿವಿಧ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ತುಸು ವ್ಯತ್ಯಾಸವಿರುವುದು ಸಹಜ.ಕೆಲವೊಂದು ಮೂಲಗಳ ಪ್ರಕಾರ, ಅಡಿಕೆ ಧಾರಣೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎನ್ನಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಕ್ವಿಂಟಲ್ ರಾಶಿ ಅಡಿಕೆ ಬೆಲೆ 51,000 ರೂ. ದಾಟಿದ್ದು, ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹಳೆ ಅಡಿಕೆ ಕ್ವಿಂಟಲ್​ಗೆ 48,000 ರೂ.ನಿಂದ 54,500 ರೂ.ವರೆಗೂ ಮಾರಾಟವಾಗುತ್ತಿದೆ. ಮಂಗಳೂರಿನಲ್ಲಿ ಹೊಸ ಅಡಿಕೆ ದರ ಕ್ವಿಂಟಲ್​ಗೆ 25,876 ರೂ.ನಿಂದ 31,000 ರೂ.ವರೆಗೆ ಇದ್ದರೆ, ಪುತ್ತೂರಿನಲ್ಲಿ 32,000 ರೂ.ನಿಂದ 38,000 ರೂ.ವರೆಗೆ ಇದೆ.

ಕಳೆದ ವರ್ಷ ಭೂತಾನ್​ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದ ಬಳಿಕ ಅಡಿಕೆ ಧಾರಣೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಡಿಸೆಂಬರ್​ನಲ್ಲಿ ಕ್ವಿಂಟಲ್​ಗೆ 39,000 ರೂ.ವರೆಗೆ ದರ ಕುಸಿತ ಕಂಡಿತ್ತು. ಆದರೆ, ಇದೀಗ ಮತ್ತೆ ಚೇತರಿಕೆ ಕಂಡು ಬರುತ್ತಿದೆ. ರಾಶಿ ಅಡಿಕೆ ಕ್ವಿಂಟಲ್​ಗೆ ಭದ್ರಾವತಿಯಲ್ಲಿ 47,319 ರೂ, ಹೊಸನಗರದಲ್ಲಿ 47,349 ರೂ, ಸಾಗರದಲ್ಲಿ 46,929 ರೂ, ಶಿಕಾರಿಪುರದಲ್ಲಿ 45,900 ರೂ, ತೀರ್ಥಹಳ್ಳಿಯಲ್ಲಿ 46,899 ರೂ, ತುಮಕೂರಿನಲ್ಲಿ 45,900 ರೂ. ಇದೆ ಎಂದು ತಿಳಿದುಬಂದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕ್ವಿಂಟಲ್ ರಾಶಿ ಅಡಿಕೆಯ ದರ ಗರಿಷ್ಠ 47,299 ರೂ. ಆಗಿರುವ ಕುರಿತು ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವೆಬ್​​ಸಸೈಟ್ ಮೂಲಕ ತಿಳಿದುಬಂದಿದೆ. ಶಿವಮೊಗ್ಗದಲ್ಲಿಯೂ ಕ್ವಿಂಟಲ್ ರಾಶಿ ಅಡಿಕೆ ದರ 47,599 ರೂ. ಇದ್ದು, ಕೊಪ್ಪದಲ್ಲಿ ಕ್ವಿಂಟಲ್ ರಾಶಿ ಅಡಿಕೆ ದರ 41,119 ರೂ. ಇದೆ. ದಾವಣಗೆರೆಯ ಚನ್ನಗಿರಿಯಲ್ಲಿ 47,659 ರೂ, ದಾವಣೆಗೆರೆ ಮಾರುಕಟ್ಟೆಯಲ್ಲಿ 46,169 ರೂ, ಆಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 46,629 ರೂ ಇದೆ. ಅದೇ ರೀತಿ, ಶಿರಸಿಯಲ್ಲಿ 46,208 ರೂ, ಯಲ್ಲಾಪುರದಲ್ಲಿ 51,475 ರೂ. ಇದೆ.

Leave A Reply

Your email address will not be published.