Viral Video : ಅರೇ ಇದೇನು ಚಮತ್ಕಾರ | ಕೇವಲ ಚಮಚದಿಂದಲೇ ಹೇರ್‌ ಕಟ್‌ ಮಾಡಿದ ಅಪ್ಪ | ಆಶ್ವರ್ಯಗೊಂಡ ನೆಟ್ಟಿಗರು!

ಅಯ್ಯೋ ಈಗಿನ ಕಾಲವೇ ವಿಚಿತ್ರ. ಹಾಗಿದ್ದ ಮೇಲೆ ನಾವು ಕೆಲವೊಂದು ವಿಚಿತ್ರಗಳನ್ನು ನಮ್ಮ ಕಣ್ಣಾರೆ ನೋಡಲೇ ಬೇಕು. ಅಂತಹ ಘಟನೆಗಳ ಸತ್ಯಾ ಸತ್ಯತೆ ಕೆಲವೊಮ್ಮೆ ತಿಳಿಯದೇ ಹಾಗೆ ಮೌನವಾಗಿಯೇ ಉಳಿದಿದೆ. ಹೌದು ಇಲ್ಲೊಬ್ಬನಿಗೆ ಚಾಕು, ಕತ್ತರಿ, ಟ್ರಿಮ್ಮರ್​ ಇದೆಲ್ಲ ಬೇಡವಂತೆ. ಒಂದು ಚಮಚ ಸಾಕು ನನ್ನ ಮಗನ ಕೂದಲು ಕತ್ತರಿಸಲು ನೋಡಿ ಹೇಗೆ ಮ್ಯಾಜಿಕ್ ಮಾಡುತ್ತೇನೆ ಎನ್ನುತ್ತಿದ್ದಾನೆ.

 

ಈ ಅಪ್ಪ ಮಗ ಅಮೆರಿಕದಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿ ಕುಳಿತುಕೊಂಡೇ ಜಗತ್ತಿನ ಮಂದಿ ತಮ್ಮತ್ತ ತಿರುಗಿ ನೋಡುವಂತೆ ಹಾಗೆ ಮ್ಯಾಜಿಕ್ ಮಾಡಿದ್ದಾರೆ.

ಚಮಚದ ಬದಿಯಿಂದ ಈತ ಸರಾಗವಾಗಿ ಮಗನ ಕೂದಲನ್ನು ಕತ್ತರಿಸುವುದನ್ನು ನೋಡುತ್ತಿದ್ದರೆ ಅದು ಚಮಚ ಎಂದು ನಂಬಲು ಆಗುವುದೇ ಇಲ್ಲ. ಏನೇ ಆಗಲಿ ಅಪ್ಪ ಕೇವಲ ಒಂದು ಚಮಚದಿಂದ ಕೂದಲು ಕಟ್ ಮಾಡುವಾಗ ಖುಷಿಯಿಂದಲೇ ರಿಯಾಕ್ಟ್ ಮಾಡಿದ್ದಾನೆ.

https://www.instagram.com/reel/Cnj8Vz4qiCL/?utm_source=ig_web_copy_link

ಹೌದು ಈ ನೀವೂ ಸಹ ನೋಡಿದಾಗ ಆಶ್ಚರ್ಯ ಪಡದೇ ಇರಲು ಸಾಧ್ಯವಿಲ್ಲ. ಸದ್ಯ ಈ ವಿಡಿಯೋ ಅನ್ನು 6 ಮಿಲಿಯನ್​ ಜನರು ನೋಡಿದ್ದಾರೆ. ಅನೇಕರು ಒಳ್ಳೆಯ ಟ್ಯಾಲೆಂಟ್ ​ ಎಂದಿದ್ದಾರೆ. ಇನ್ನೂ ಕೆಲವರು ಎದ್ದು ಬಿದ್ದು ನಕ್ಕಿದ್ದಾರೆ. ಆದ್ರೂ ಜನರಿಗೆ ಈ ವೀಡಿಯೋ ನೋಡಿ ಕಂಪ್ಯೂಸ್ ಆಗಿರೋದಂತೂ ಖಂಡಿತ. ಏನೇ ಆಗಲಿ ಇಂತಹ ಅಸಾಧ್ಯ ವಾದ ಸಂಗತಿಯನ್ನು ಸಾಧ್ಯ ಮಾಡಿದ ಈತನಿಗೆ ಭೇಷ್ ಎನ್ನಲೇ ಬೇಕು.

Leave A Reply

Your email address will not be published.