ಸೋನಿ ಪರಿಚಯಿಸಿದೆ ವಿಶ್ವದ ಮೊದಲ PTZ ಕ್ಯಾಮೆರಾ | ಇದರ ವಿಶೇಷತೆ ತಿಳಿದರೆ ಖುಷಿ ಪಡ್ತೀರ!!!

ಕ್ಯಾಮೆರಾ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ ಎಂದರೆ ಸೋನಿ ಕಂಪೆನಿ. ಭಾರತದ ಕ್ಯಾಮೆರಾ ಮಾರುಕಟ್ಟೆಯಲ್ಲಿ ಸೋನಿ ಕ್ಯಾಮೆರಾಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದೀಗ ಹೊಸದೊಂದು ಕ್ಯಾಮೆರಾ ಬಿಡುಗಡೆಯಾಗಿದ್ದು, ಈ ಕ್ಯಾಮೆರಾವನ್ನು ಸೋನಿ ILME-FR7 ಎಂದು ಹೆಸರಿಸಲಾಗಿದೆ. ವಿಶ್ವದಲೇ ಮೊದಲ PTZ ಕ್ಯಾಮೆರಾ ಇದಾಗಿದೆ.

ಹೌದು, ಸೋನಿ ಕಂಪೆನಿಯು ಹೊಸ ಸೋನಿ ILME-FR7 ಕ್ಯಾಮೆರಾವನ್ನು ಪರಿಚಯಿಸಿದ್ದು, ಇದರಲ್ಲಿರುವ ಫೀಚರ್ಸ್‌ ನಿಮಗೆ ಸಿನೀಮಿಯ ಅನುಭವವನ್ನು ನೀಡಲಿದೆ. ಈ ಕ್ಯಾಮೆರಾ ಸಿನಿಮಾ ಲೈನ್ FR7 ಇಂಟೆರ್ ಚೇಂಜೇಬಲ್ ಲೆನ್ಸ್‌ ಅನ್ನು ಒಳಗೊಂಡಿದೆ. ಇನ್‌ಬಿಲ್ಟ್‌ ಪ್ಯಾನ್,ಟಿಲ್ಟ್, ಜೂಮ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಈ ಕ್ಯಾಮೆರಾ ಇಲ್ಯುಮಿನೇಟೆಡ್ 35mm ಫುಲ್‌ ಫ್ರೇಮ್‌ CMOS ಇಮೇಜ್‌ ಸೆನ್ಸಾರ್‌ ಅನ್ನು ಹೊಂದಿದೆ. ಕ್ಯಾಮೆರಾದಲ್ಲಿ ಇಂಟಿಗ್ರೇಟೆಡ್‌ BIONZ XR ಇಂಜಿನ್ ಪಿನ್‌ಪಾಯಿಂಟ್ ಸಹ ನೀಡಲಾಗಿದೆ.

ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಕೂಡಿದ ವಿಶ್ವದ ಮೊದಲ PTZ ಕ್ಯಾಮೆರಾ ಎನಿಸಿಕೊಂಡಿರುವ ಸೋನಿ ILME-FR7 ಕ್ಯಾಮೆರಾ, ಸೋನಿಯ ಇ-ಮೌಂಟ್ ಲೆನ್ಸ್ ಅನ್ನು ಹೊಂದಿದ್ದು, ಜಿ ಮಾಸ್ಟರ್ ಸರಣಿಯಂತಹ ಇತರ ಇ-ಮೌಂಟ್ ಲೆನ್ಸ್‌ಗಳೊಂದಿಗೆ ಕೆಲಸ ಮಾಡುವುದಕ್ಕೆ ಕೂಡ ಅವಕಾಶ ನೀಡಿದೆ. ಇನ್ನುಳಿದಂತೆ ಈ ಕ್ಯಾಮೆರಾ 10.3MP ಯೊಂದಿಗೆ, ಕ್ಯಾಮರಾ ವಿಶಾಲ 15+ ಸ್ಟಾಪ್ ಅಕ್ಷಾಂಶವನ್ನು ಹೊಂದಿದೆ. ಆದರಿಂದ ಈ ಕ್ಯಾಮೆರಾದಲ್ಲಿ ಪ್ಯಾನ್/ಟಿಲ್ಟ್/ಜೂಮ್ ಫಂಕ್ಷನ್‌ ಅನ್ನು ದೂರದಿಂದಲೇ ನಿರ್ವಹಿಸಬಹುದಾಗಿದೆ.

ಸೋನಿಯ ಈ ಕ್ಯಾಮೆರಾ ಸೋನಿಯ RM-IP500 ರಿಮೋಟ್ ಕಂಟ್ರೋಲರ್‌ಗೆ ಸೆಟ್‌ ಆಗಲಿದೆ. ಇದರಲ್ಲಿರುವ ಪ್ಯಾನ್ ಮತ್ತು ಟಿಲ್ಟ್ ಚಲನೆಗಳು ಕೂಡ ಬದಲಾಗಲಿವೆ. ಇದರೊಂದಿಗೆ ಈ ಕ್ಯಾಮೆರಾ ಡೈರೆಕ್ಷನ್‌, ಜೂಮ್, ಫೋಕಸ್ ಸೇರಿದಂತೆ 100ಕ್ಕೂ ಹೆಚ್ಚು ಕ್ಯಾಮೆರಾ ಪ್ಲೇ ಪ್ರಿವ್ಯೂಗಳನ್ನು ಬೆಂಬಲಿಸಲಿದೆ.

ಇದರಲ್ಲಿರುವ ರಿಯಲ್‌ ಟೈಂ ಐ ಎಎಫ್ ಮತ್ತು ಟ್ರ್ಯಾಕಿಂಗ್‌ ಬಳಕೆದಾರರಿಗೆ ಸಾಕಷ್ಟು ಉಪಯುಕ್ತವಾಗಲಿದೆ. ಹಾಗೆಯೇ ಈ ಕ್ಯಾಮೆರಾದಲ್ಲಿ ಇಂಟಿಗ್ರೇಟೆಡ್ BIONZ XR ಇಂಜಿನ್ ಪಿನ್‌ಪಾಯಿಂಟ್ ನೀಡಲಾಗಿದ್ದು, ಐ ಫೋಕಸ್‌ ಡಿಟೆಕ್ಷನ್‌ನಲ್ಲಿ ಸಹಾಯ ಮಾಡಲಿದೆ. ಸೋನಿ FR7 ಕ್ಯಾಮೆರಾ S-ಸಿನಿಟೋನ್ ಪ್ರಿಸೆಟ್‌, 4K 120p 6 ಸ್ಲೋ ಮೋಷನ್‌, Cine EI ಮೋಡ್ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ.

ಇನ್‌ಬಿಲ್ಟ್‌ ವೆಬ್ ಅಪ್ಲಿಕೇಶನ್ ಕಂಪ್ಯೂಟರ್ ಮೂಲಕ ಕಂಟ್ರೋಲ್‌ ಮಾಡಬಹುದು. ಅಲ್ಲದೆ, ಇದು ಮಲ್ಟಿ ಕ್ಯಾಮೆರಾ ಮಾನಿಟರಿಂಗ್‌ಗೆ ಬೆಂಬಲಿಸಲಿದೆ. ಕ್ಯಾಮೆರಾದಲ್ಲಿ HDMI ಟೈಪ್ A ಮತ್ತು 12G-SDI ಕನೆಕ್ಟರ್‌ಗಳನ್ನು ನೀಡಲಾಗಿದೆ. ಇವುಗಳ ಜೊತೆಗೆ RTSP, SRT, ಮತ್ತು NDI |HX 10 ಸ್ಟ್ರೀಮಿಂಗ್ ಪ್ರೋಟೋಕಾಲ್‌ಗಳಿಗೆ ಬೆಂಬಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಸೋನಿ ಕಂಪೆನಿಯ ಈ ಹೊಸ ಕ್ಯಾಮೆರಾ ಇದೇ ಜನವರಿ 31 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಪ್ರಸ್ತುತ ಈ ಕ್ಯಾಮೆರಾದ ಬೆಲೆಯ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ. ಸೇಲ್‌ ಡೇಟ್‌ ಹತ್ತಿರವಾಗ್ತಿದ್ದ ಹಾಗೇ ಇದರ ಬೆಲೆ ವಿವರ ಬಹಿರಂಗವಾಗಲಿದೆ ಎಂದು ಹೇಳಲಾಗಿದೆ.

Leave A Reply

Your email address will not be published.