Tech Tips : ನಿಮಗ್ಯಾರಿಗೂ ತಿಳಿಯದ ಫೀಚರ್ಸ್‌ಗಳು ಸ್ಮಾರ್ಟ್‌ವಾಚ್‌ಗಳಲ್ಲಿ ಇದೆ | ಯಾವುದೆಲ್ಲ ? ಇಲ್ಲಿದೆ ಉತ್ತರ
ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ ಗಳು ಹೆಚ್ಚು ಬೇಡಿಕೆಯಲ್ಲಿವೆ. ಕಂಪನಿಗಳು ದಿನಕ್ಕೊಂದು ವಿಭಿನ್ನ ವೈಶಿಷ್ಟ್ಯದಿಂದ ಕೂಡಿದ ಸ್ಮಾರ್ಟ್ ವಾಚ್ ಗಳನ್ನು ಜನರಿಗೆ ಪರಿಚಯಿಸುತ್ತಿದೆ. ಅಲ್ಲದೆ, ಸ್ಮಾರ್ಟ್ ವಾಚ್ ತನ್ನ ಅದ್ಭುತ ಫೀಚರ್ಸ್ ಗಳಿಂದ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ. ಇತ್ತೀಚೆಗಂತೂ ಸ್ಮಾರ್ಟ್ ವಾಚ್ ಬಳಕೆದಾರರು ಹೇರಳವಾಗಿಬಿಟ್ಟಿದ್ದಾರೆ. ಇದಂತು ಸದ್ಯದ ಫ್ಯಾಶನ್ ಆಗಿಬಿಟ್ಟಿದೆ. ಅದರಲ್ಲೂ ಕಂಪನಿಗಳು ಹೊಸ ಹೊಸ ಟೆಕ್ನಾಲಜಿ ಮೂಲಕ ಹೊಸ ವಿನ್ಯಾಸದೊಂದಿಗೆ ಈ ಸ್ಮಾರ್ಟ್ವಾಚ್ಗಳನ್ನು ಪರಿಚಯಿಸುತ್ತಿದೆ. ಆದರೆ ಈ ಸ್ಮಾರ್ಟ್ ವಾಚ್ ನಲ್ಲಿರುವ ಫೀಚರ್ಸ್ ಗಳ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಸ್ಮಾರ್ಟ್ವಾಚ್ ಹಲವಾರು ಫೀಚರ್ಸ್ ಗಳನ್ನು ಹೊಂದಿದೆ. ಹಾಗಾದ್ರೆ ನಾವು ಬಳಕೆ ಮಾಡುವಂತಹ ಸ್ಮಾರ್ಟ್ವಾಚ್ಗಳು ಯಾವೆಲ್ಲಾ ಫೀಚರ್ಸ್ ಗಳನ್ನು ಹೊಂದಿರುತ್ತದೆ. ಹಾಗೂ ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ.
ಆ್ಯಕೆಲೆರೋಮೀಟರ್ : ಸ್ಮಾರ್ಟ್ ವಾಚ್‌ನಲ್ಲಿನ ಫೀಚರ್ಸ್ ಗಳಲ್ಲಿ ಇದೂ ಒಂದಾಗಿದ್ದು, ಆ್ಯಕೆಲೆರೋಮೀಟರ್ ಬಳಕೆದಾರರ ಚಲನೆ ಮತ್ತು ಇತರೆ ಚಟುವಟಿಕೆಯ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ. ಜೊತೆಗೆ ಇದು ದೈಹಿಕ ಚಟುವಟಿಕೆ ಮತ್ತು ಫಿಟ್‌ನೆಸ್ ಅನ್ನು ಅಳೆಯುತ್ತದೆ. ಸುಟ್ಟ ಕ್ಯಾಲೊರಿಗಳನ್ನು ಟ್ರ್ಯಾಕ್ ಮಾಡುವ ಮೂಲಕ, ಸಂಚರಿಸಿದ ಹೆಜ್ಜೆಗಳು ಮತ್ತು ಪ್ರಯಾಣದ ದೂರವನ್ನು ಇದು ಮಾನಿಟರ್ ಮಾಡಬಲ್ಲದು. ಅಲ್ಲದೆ, ಲಿಫ್ಟ್ ಟು ವೇಕ್‌ನಂತಹ ಫೀಚರ್ಸ್‌ಗಳನ್ನು ಕೂಡ ಇದು ಹೊಂದಿದೆ.
ಜಿಪಿಎಸ್ : ಜಿಪಿಎಸ್ ಅನ್ನೋದು ಒಂದು ಸ್ಥಳವನ್ನು ಗುರುತಿಸಲು ಉಪಗ್ರಹಗಳಿಂದ ಸಹಾಯವನ್ನು ಪಡೆಯುವಂತಹ ಒಂದು ವ್ಯವಸ್ಥೆಯಾಗಿದೆ. ಈ ಫೀಚರ್ಸ್ ರನ್ ಟ್ರ್ಯಾಕಿಂಗ್, ಸೈಕ್ಲಿಂಗ್ ಒಳಗೊಂಡಂತೆ ಇತರ ಹೊರಾಂಗಣ ಚಟುವಟಿಕೆಗಳಂತಹ ಫೀಚರ್ಸ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಹಾಗೇ ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನಂತಹ ಸ್ಥಳ ಆಧಾರಿತ ಸೇವೆಗಳು ಮತ್ತು ಸ್ಥಳ ಆಧಾರಿತ ನೋಟಿಫಿಕೇಶನ್‌ಗಳು ಈ ಫೀಚರ್ಸ್ ನಿಂದ ಲಭ್ಯವಾಗುತ್ತದೆ.
ಹೃದಯ ಬಡಿತ ಸೆನ್ಸಾರ್ : ಸ್ಮಾರ್ಟ್ವಾಚ್ಗಳಲ್ಲಿನ ಹೃದಯ ಬಡಿತ ಸೆನ್ಸಾರ್ ಫೀಚರ್ ಅನ್ನು ಫೋಟೋಪ್ಲೆಥಿಸ್ಮೊಗ್ರಾಮ್ (PPG) ಸೆನ್ಸಾರ್ ಎಂದು ಕೂಡ ಕರೆಯಲಾಗುತ್ತದೆ. ಈ ಫೀಚರ್ ನಾಡಿಯ ರೇಟ್ ಅನ್ನು ನಿರ್ಧರಿಸಲು ಮತ್ತು ಅದನ್ನು ದಾಖಲಿಸಲು ಸಹಕಾರಿಯಾಗಿದೆ. ಇದು ಮಣಿಕಟ್ಟಿನ ಕ್ಯಾಪಿಲ್ಲರಿಗಳ ಮೂಲಕ ರಕ್ತದ ಚಲನೆಯನ್ನು ಪತ್ತೆಹಚ್ಚಲು ಬಳಸುವ ಸೆನ್ಸಾರ್ ಆಗಿದ್ದು, ಫಿಟ್‌ನೆಸ್ ಮತ್ತು ದೈಹಿಕ ಚಟುವಟಿಕೆಯ ಮಟ್ಟವನ್ನೂ ಅಳೆಯಲು ಬಳಕೆ ಮಾಡಬಹುದಾಗಿದೆ. ಅಲ್ಲದೆ, ಇದರಿಂದ ಬಿಪಿ ಅಥವಾ ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಸೂಚನೆಗಳನ್ನು ತಿಳಿದುಕೊಳ್ಳಬಹುದು.
ಬಬಾರೋಮೀಟರ್ : ಇದರಿಂದ ನಿಮ್ಮ ದೇಹದ ಉಸಿರಾಟದ ಒತ್ತಡವನ್ನು ತಿಳಿದುಕೊಳ್ಳಬಹುದು. ಅಲ್ಲದೆ, ಬಬಾರೋಮೀಟರ್ ಫೀಚರ್ ಬಳಕೆದಾರರಿಗೆ ಹವಾಮಾನದ ವರದಿಯನ್ನೂ ತಿಳಿಸುತ್ತದೆ.
ಈ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ವಾಚ್ ಅನ್ನು ಧರಿಸಿ, ಕ್ಲೈಂಬಿಂಗ್ ಅಥವಾ ಹೈಕಿಂಗ್ ಮಾಡುವಾಗ ಎತ್ತರದಲ್ಲಿನ ಪ್ರದೇಶದ ವಾತವರಣದ ಬದಲಾವಣೆಗಳನ್ನು ಟ್ರ್ಯಾಕ್ ಮಾಡುವುದು ಸುಲಭವಾಗಲಿದೆ.
ಗೈರೋಸ್ಕೋಪ್ : ಈ ಫೀಚರ್ ನಿಂದ ಚಲನೆಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ಹಾಗೂ ನ್ಯಾವಿಗೇಷನ್‌ನಂತಹ ಫೀಚರ್ಸ್‌ಗಳನ್ನು ಈ ಸೆನ್ಸಾರ್ ಮೂಲಕ ಆನ್ ಮಾಡಬಹುದು.