SHOCKING NEWS: ಗ್ರಾಮದ ಬಳಿ ಅರಣ್ಯದಲ್ಲಿ ದೊರಕಿತ್ತು ಒಂದು ಸುಂದರ ಸೂಟ್ ಕೇಸ್ | ಓಪನ್ ಮಾಡಿದಾಗ ಶಾಕ್ ಆದ್ರು ಪೊಲೀಸ್!

Share the Article

ಒಡಿಶಾದ ಗ್ರಾಮವೊಂದರ ಸಮೀಪದ ಅರಣ್ಯದಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್ ಕಂಡುಬಂದಿದ್ದು, ಇದನ್ನು ನೋಡಿದ ಪೊಲೀಸರು ದಂಗಾದ ಘಟನೆ ನಡೆದಿದೆ. ಹೌದು!! ಒಡಿಶಾದ ಗ್ರಾಮವೊಂದರ ಅರಣ್ಯದಲ್ಲಿ ದೊರೆತ ಸೂಟ್ ಕೇಸ್ ನೋಡಿದ ಪೋಲೀಸರು ಶಾಕ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬನ ಶವ ಕಂಡುಬಂದಿದೆ. ಈ ಘಟನೆ ಖೋರ್ಧಾ ಜಿಲ್ಲೆಯ ನಚುನಿ ಪೊಲೀಸ್​ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದ ಸಮೀಪ ಇರುವ ಅರಣ್ಯದಲ್ಲಿ ನಡೆದಿದೆ ಎನ್ನಲಾಗಿದೆ.

ಅರಣ್ಯವು ಜಿಲ್ಲೆಯ NH-16ರ ಪಕ್ಕದಲ್ಲಿರುವ ತಾರಿಣಿ ದೇವಸ್ಥಾನದ ಸಮೀಪದಲ್ಲಿದ್ದು, ರಣಪುರ್ ಬ್ಲಾಕ್ ಅಡಿಯಲ್ಲಿ ಬರುವ ಬಲಭದ್ರಪುರ ಪಂಚಾಯತ್‌ನ ಲಖಪದ ಗ್ರಾಮದ ಗಂಗಾಧರ್ ಅವರ ಪುತ್ರ ಉರುವಲು ಸಂಗ್ರಹಿಸಲು ಕಾಡಿಗೆ ತೆರಳಿದ್ದ ವೇಳೆ ಅನುಮಾನಾಸ್ಪದವಾಗಿ ಬಿದ್ದಿದ್ದ ಸೂಟ್‌ಕೇಸ್‌ ಅನ್ನು ಕೆಲ ಸ್ಥಳೀಯರು ಗಮನಿಸಿದ್ದಾರೆ. ಹೀಗಾಗಿ ಅನಾಥವಾಗಿ ಬಿದ್ದಿದ್ದ ಸೂಟ್ ಕೇಸ್ ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸೂಟ್‌ಕೇಸ್‌ ಒಡೆದು ನೋಡಿದಾಗ ಅದರಲ್ಲಿ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿಯನ್ನು ಮನೋರಂಜನ್​ ಮೋಹಪಾತ್ರ (32) ಎಂದು ಗುರುತಿಸಲಾಗಿದ್ದು, ಘಟನೆ ಕುರಿತಾಗಿ ನಾಚುಣಿ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿದ್ದಾರೆ. ಪ್ರಾಥಮಿಕ ಸಾಕ್ಷ್ಯಾಧಾರಗಳ ಅನುಸಾರ ಇದು ಕೊಲೆ ಎಂಬ ಅನುಮಾನ ದಟ್ಟವಾಗಿದೆ. ಸದ್ಯ ಸಾವಿನ ರಹಸ್ಯ ಭೇದಿಸಲು ಖಾಕಿ ಪಡೆ ಕಾರ್ಯಾಚರಣೆ ನಡೆಸಿದ್ದು, ಆದರೆ, ಮರಣೋತ್ತರ ಪರೀಕ್ಷೆ ವರದಿ ದೊರೆತ ಬಳಿಕವಷ್ಟೇ ಅಧಿಕೃತ ವಿಷಯ ತಿಳಿಯಲಿದೆ ಎಂದು ಬಲುಗಾಂವ್ ಎಸ್‌ಡಿಪಿಒ ಮಾನಸ್ ರಂಜನ್ ಬಾರಿಕ್ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.