ಮೀನು ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ಸುದ್ದಿ!
ಮೀನು ತಿನ್ನುವುದು ನಾಲಿಗೆ ರುಚಿಗಾಗಿ ಮಾತ್ರವಲ್ಲ, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೀನಿನಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಷಿಯಮ್, ತಾಮ್ರ ಮತ್ತು ಸತುವಿನಂತಹ ಖನಿಜಗಳು ಸಮೃದ್ಧವಾಗಿವೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಮೀನಿನಲ್ಲಿರುವ ಕೊಬ್ಬುಗಳು ಸುಲಭವಾಗಿ ಜೀರ್ಣವಾಗುತ್ತದೆ. ಹಾಗೆಯೇ ಶಕ್ತಿಯನ್ನು ನೀಡುತ್ತದೆ.
ಮೀನಿನಲ್ಲಿರುವ ಕೊಬ್ಬು ನಮ್ಮ ದೇಹದಲ್ಲಿನ ರಕ್ತದೊತ್ತಡದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳಾದ DHA ಮತ್ತು EPA ಕಣ್ಣುಗಳಿಗೆ ಒಳ್ಳೆಯದು. ಇದು ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ. ಮೀನಿನಲ್ಲಿ ವಿಟಮಿನ್ ಬಿ12, ರೈಬೋಫ್ಲಾವಿನ್, ನಿಯಾಸಿನ್, ಬಯೋಟಿಕ್ ಮತ್ತು ಥಯಾಮಿನ್ ಅಂಶಗಳು ಸಮೃದ್ಧವಾಗಿದೆ. ಮೀನು ತಿಂದರೆ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಅಸ್ತಮಾ ಮತ್ತು ಮಧುಮೇಹದಿಂದ ಬಳಲುತ್ತಿರುವವರಿಗೆ ಬಹಳ ಒಳ್ಳೆಯದು.
ಆದರೆ ಮೀನು ಸೇವಿಸಿದರೂ ಅನೇಕ ಆರೋಗ್ಯ ಸಮಸ್ಯೆಗೆ ಪರಿಹಾರದ ಜೊತೆಗೆ ಸಮಸ್ಯೆ ಉದ್ಭವಿಸುತ್ತಿವೆಯಂತೆ ಕೂಡ. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಮತ್ತು ಅಮೆರಿಕದ ಆಹಾರ ಹಾಗೂ ಔಷಧ ಆಡಳಿತದ ಜಂಟಿ ಅಧ್ಯಯನದಲ್ಲಿ, ಸರೋವರಗಳು ಮತ್ತು ನದಿಗಳ ನೀರು ಹೆಚ್ಚು ಕಲುಷಿತಗೊಂಡಿರುವುದು ಕಂಡುಬಂದಿದೆ. ಇವುಗಳಲ್ಲಿ ವಾಸಿಸುವ ಮೀನುಗಳು ಈಗ ವಿಷಕಾರಿಯಾಗುತ್ತಿದ್ದು, ಸಿಹಿನೀರಿನ ಮೀನುಗಳಲ್ಲಿ 278 ಬಾರಿ ಶಾಶ್ವತವಾಗಿ ರಾಸಾಯನಿಕ ಕಂಡುಬಂದಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಹೀಗಾಗಿ, ಇದು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. Forever ರಾಸಾಯನಿಕವನ್ನು per-and-polyfluoroalkyl ವಸ್ತು ಎಂದೂ ಕರೆಯಲಾಗುತ್ತದೆ. ಛತ್ರಿ, ರೇನ್‌ಕೋಟ್‌ಗಳು, ಮೊಬೈಲ್ ಕವರ್‌ಗಳಂತಹ ನೀರು-ನಿರೋಧಕ ಬಟ್ಟೆಗಳಲ್ಲಿ ಸಾಮಾನ್ಯವಾಗಿ ಬಳಸುವ ರಾಸಾಯನಿಕ ಇದು. ಈ ರಾಸಾಯನಿಕವು ಹಾರ್ಮೋನುಗಳು ಮತ್ತು ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ ಥೈರಾಯ್ಡ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ನಂತಹ ಸಮಸ್ಯೆಗಳು ಉಂಟಾಗುತ್ತವೆ.
ತಿಂಗಳಿಗೊಮ್ಮೆ ಮೀನುಗಳನ್ನು ಸೇವಿಸಿದರೆ, ನೀವು ತಿಂಗಳಾದ್ಯಂತ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳಿಂದ ತುಂಬಿದ ನೀರನ್ನು ಕುಡಿಯುತ್ತಿದ್ದೀರಿ ಎಂದು ಅರ್ಥೈಸಿಕೊಳ್ಳಿ. ಈ ಮಾದರಿಯು ಅಮೆರಿಕದ ಒಂದಲ್ಲ 48 ರಾಜ್ಯಗಳಲ್ಲಿ ಕಂಡುಬಂದಿದೆ. ಫಾರೆವರ್ ಕೆಮಿಕಲ್‍ನಿಂದಾಗಿ ಮಹಿಳೆಯರಿಗೆ ಗರ್ಭಪಾತವಾಗುತ್ತದೆ ಅಥವಾ ಅವರ ಹೆರಿಗೆ ಅವಧಿಗೆ ಮುನ್ನವೇ ಆಗುತ್ತದೆ. ಇದರಿಂದಾಗಿ ಅವರ ಮಕ್ಕಳ ದೇಹ ಮತ್ತು ಮನಸ್ಸು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ.