RTC Download :ಮೊಬೈಲ್‌ನಲ್ಲಿ ಪಹಣಿ ತೆಗಯುವ ರೀತಿ ಅತೀ ಸುಲಭ ವಿಧಾನದಲ್ಲಿ, ಇಲ್ಲಿದೆ ಓದಿ!
ಸರ್ವೆ ಡಿಪಾರ್ಟೆಂಟ್ ಕಡೆಯಿಂದ ಬಿಡುಗಡೆ ಮಾಡಿರುವಂತಹ ಉತಾರ ಅಥವಾ ಪಹಣಿ ಉಚಿತವಾಗಿ ತೆಗೆದುಕೊಳ್ಳುವುದು ಹೇಗೆ ಎಂಬ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು.ಪಹಣಿಯಲ್ಲಿರುವಂತ ಕೆಲವು ಮುಖ್ಯಾಂಶಗಳು ಹೀಗಿವೆ.
ಸರ್ವೇ ಸಂಖ್ಯೆ, ಹಿಸ್ಸಾ, ಮಣ್ಣು, ಯಾವ ಬೆಳೆಯನ್ನು ಬೆಳೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದರ ಜೊತೆಗೆ ಮುಖ್ಯವಾಗಿ ಆ ಜಮೀನಿನ ಮೇಲೆ ಯಾವುದಾದರೂ ಸಾಲವನ್ನು ಪಡೆದುಕೊಂಡಿದ್ದರೆ ಪಾಣಿಯ ಮೂಲಕ ತಿಳಿಯಲಿದೆ. ಯಾವುದೇ ರೀತಿಯಾದಂತಹ ಭೂಮಿಯ ಡಿನ್ನೂಟ್ ಕೋರ್ಟಿನಲ್ಲಿ ಇದ್ದರೆ ಪಹಣಿಯಲ್ಲಿ ಗೊತ್ತಾಗುತ್ತದೆ. ಆದರೆ, ಕೋರ್ಟ್ ಸ್ಟೇ ಮಾಡಿದ್ದಲ್ಲಿ ಅದರ ಕಾರಣ ಮಾತ್ರ ಗೊತ್ತಾಗದು.
ಸರ್ವೇ ಸಂಖ್ಯೆ ಅದರ ಭೌತಿಕ ಗುರುತಿಸುವಿಕೆಗಾಗಿ ಒಂದು ನಿರ್ದಿಷ್ಟ ಭೂಮಿಗೆ ಒಂದು ವಿಶಿಷ್ಟ ಸಂಖ್ಯೆಯನ್ನು ನಿಗದಿಪಡಿಸಲಾಗಿರುತ್ತದೆ. ಆರ್ ಟಿ ಸಿ ಯಲ್ಲಿ ಹಿಸ್ಸಾ ಎಂಬುದು ಸರ್ವೆ ಸಂಖ್ಯೆಯ ಉಪ ಸಂಖ್ಯೆ ಬಹು ಮಾಲೀಕ ಆರ್‌ಟಿಸಿಯಲ್ಲಿ ವಿಭಜನೆ ಆದಲ್ಲಿ ಹೊಸ ಹಿಸ್ಟಾ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ಉದಾಹರಣೆಗೆ, ಸಮೀಕ್ಷೆ ಸಂಖ್ಯೆ 20 20/1, 20/2 ಮತ್ತು 20/3 ಆಗುತ್ತದೆ, ಅಲ್ಲಿ 1.2.3 ಅನ್ನು ಹಿಸ್ಸಾ ಸಂಖ್ಯೆ ಎನ್ನಲಾಗುತ್ತದೆ.
ಈ ಪಾಣಿಯಲ್ಲಿ ನಿಮಗೆ ನಿಮ್ಮ ಸರ್ವೇ ನಂಬರ್, ವಿಸ್ತೀರ್ಣ, ಕಾಥಸಂಖ್ಯೆ ಮತ್ತು ಎಷ್ಟು ಜನ ವಾರಲ್ದಾರ್ ಇದ್ದಾರೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು. http://www.landrecords.karnataka.gov.in ಭೇಟಿ ನೀಡಿ ಮಾಹಿತಿ ಪಡೆಯಬಹುದು. ಈ ಬಳಿಕ ಹಳೆ ವರ್ಷದ ಪಹಣಿ ಅಥವಾ ಸದರಿ ವರ್ಷದ ಪಹಣಿ ಮೇಲೆ ಕ್ಲಿಕ್ ಮಾಡಬೇಕು. ಈ ಪ್ರಕ್ರಿಯೆಯ ಬಳಿಕ ನಿಮ್ಮ ಜಿಲ್ಲೆ, ತಾಲೂಕು,ಹೊಬಳಿ,ಗ್ರಾಮವನ್ನು ಆಯ್ಕೆ ಮಾಡಿ ಸರ್ವೆ ನಂಬರ್ ಹಾಕಿ “Go” ಮೇಲೆ ಕ್ಲಿಕ್ ಮಾಡಬೇಕು. ಈ ಬಳಿಕ ಸರ್ ನಾಕ್,ಹಿಸ್ಸಾ ನಂಬರ್,ಅವಧಿ ಮತ್ತು ವರ್ಷ ಆಯ್ಕೆ ಮಾಡಿ, “ವಿವರಗಳನ್ನು ಕರೆತರು” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಉತಾರ “ವೀಕ್ಷಣೆ ” ಮಾಡಲು ಸಾಧ್ಯವಾಗುತ್ತದೆ.
ಈ ಆನ್ಸೆನ್ ಪಾಣೆಯಿಂದ ಆಗುವ ಪ್ರಯೋಜನದ ಬಗ್ಗೆ ಗಮನಿಸಿದರೆ, ಪ್ರತಿಯೊಬ್ಬರೂ ಭೂಮಿಯನ್ನು ಖರೀದಿ ಮಾಡುವ ಮುನ್ನ ಪಾಣಿಯನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಬೇಕಾಗುತ್ತದೆ. ಕೆಲವೊಮ್ಮೆ ಈ ಸಂದರ್ಭದಲ್ಲಿ ಮೋಸ ಆಗುವ ಪ್ರಮೇಯ ಕೂಡ ಇದ್ದು, ಹೀಗಾಗಿ, ನಕಲಿ ಪಾಣಿಯನ್ನು ಮಾರಾಟಗಾರರು ತೋರಿಸಿದಲ್ಲಿ ಅವರು ಕೊಟ್ಟಿರುವಂತಹ ಪಾಣಿಯನ್ನು ಮೇಲೆ ನೀಡಿರುವ ಲಿಂಕಿನ ಮೇಲೆ ಪ್ರೆಸ್ ಮಾಡಿಕೊಂಡು ಪಾಣೆಯನ್ನು ತೆಗೆದುಕೊಂಡು ಪರೀಕ್ಷಿಸಬಹುದು.