ಪ್ರತಿಷ್ಠಿತ ಪೆಪ್ಸಿ ಬ್ರಾಂಡ್ ಗೆ ರಾಯಭಾರಿಯಾದ ಕೆಜಿಎಫ್ ಹೀರೋ ಯಶ್ | ಸಲ್ಮಾನ್ ಕೈನಿಂದ ಜಾರಿದ ಪೆಪ್ಸಿ!!!

ಈಗಾಗಲೇ 2022ರಲ್ಲಿ ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌‌ನ ಅಂಬಾಸಿಡರ್ ಆಗಿ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರು ಮಿಂಚಿದ್ದರು. ಪ್ರಸ್ತುತ 2023 ರಲ್ಲಿ ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌‌ನ ಅಂಬಾಸಿಡರ್ ಆಗಿ ನೇಮಕ ಆಗಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಸಲ್ಮಾನ್ ಕೈಯಿಂದ ಯಶ್ ಕೈಗೆ ಬಂದಿರುವುದನ್ನು ನೋಡಿ ಯಶ್ ಅಭಿಮಾನಿಗಲು ಸಂತಸ ಹಂಚಿಕೊಳ್ಳುತ್ತಿದ್ದಾರೆ. ಯಶ್ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ.

 

ಈಗಾಗಲೇ ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದ್ದು ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಕೆಜಿಎಫ್ -2 ಕೂಡ ಒಂದು. ಕೆಜಿಎಫ್ 2 ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿತ್ತು. ಆದರೆ ಸಿನಿಮಾಗೂ ಮೊದಲು ಯಶ್ ಪೆಪ್ಸಿ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌‌ನ ಅಂಬಾಸಿಡರ್ ಆಗಿ ಕೆಜಿಎಫ್ ಹೀರೋ , ರಾಕಿಂಗ್ ಸ್ಟಾರ್ ಯಶ್ ನೇಮಕಗೊಂಡ ಬೆನ್ನಲ್ಲಿ
ಸದ್ಯ ಪೆಪ್ಸಿ ಜಾಹೀರಾತಿನ ಒಂದು ತುಣುಕು ಹಂಚಿಕೊಂಡಿದ್ದಾರೆ. ‘ಐ ಲವ್ ಯೂ ಪೆಪ್ಸಿ’ ಎಂದು ಪೆಪ್ಸಿ ಬಾಟಲ್‌ಗೆ ಕಿಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.

https://www.instagram.com/reel/CnyXOd6gEHS/?utm_source=ig_web_copy_link

ಜೊತೆಗೆ ಪ್ರತಿಷ್ಠಿತ ಬ್ರಾಂಡ್‌ನ ಅಂಬಾಸಿಡರ್ ಆಗಿರುವ ಬಗ್ಗೆ ರಾಕಿಂಗ್ ಸ್ಟಾರ್ ಸಂತಸ ಹಂಚಿಕೊಂಡಿದ್ದಾರೆ. ‘ನಾನು ಪೆಪ್ಸಿ ಬ್ರಾಂಡ್ ಜೊತೆ ತೊಡಗಿಕೊಂಡಿರುವುದು ಮತ್ತು ಪೇಪ್ಸಿ ಬ್ರಾಂಡ್‌ನ ಫೇಸ್ ಆಗಿ ಅವರೊಂದಿಗೆ ಸೇರಲು ತುಂಬಾ ಖುಷಿ ಪಡುತ್ತೇನೆ ಎಂದಿದ್ದಾರೆ. ಜನರಿಗೆ ನನ್ನ ಹೊಸ ಸಿನಿಮಾ ನೋಡುವ ಮುನ್ನ ಹೊಸ ವರ್ಷದ ಆರಂಭವನ್ನು ಹೊಸ ಬೆಳವಣಿಗೆಯೊಂದಿಗೆ ಹಂಚಿಕೊಂಡಿದ್ದೇನೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಇನ್ನು ಯಶ್ ಶೇರ್ ಮಾಡಿರುವ ಪೋಸ್ಟ್‌ಗೆ ಅಭಿಮಾನಿಗಳು ಹಲವು ಪಾಸಿಟಿವ್ ಪೋಸ್ಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರು ಯಶ್ ಅವರನ್ನು ಹಾಡಿ ಹೊಗಳಿದ್ದಾರೆ.

Leave A Reply

Your email address will not be published.