Weight Management: ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಹೆಚ್ಚಾಗುತ್ತೆ ತೂಕ
ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆ ಅನ್ನೋದು ಸರ್ವೇ ಸಾಮಾನ್ಯ ಅನ್ನುವ ಸ್ಥಿತಿಗೆ ಬಂದಿದೆ. ಅಲ್ಲದೆ ಕಳಪೆ ಆಹಾರ, ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಕೂಡ ಕಾಣಸಿಕೊಳ್ಳುತ್ತಿದೆ. ಇದರಿಂದ ದೇಹವನ್ನು ರಕ್ಷಿಸಲು ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ ಮತ್ತು ಅನಿವಾರ್ಯ ಆಗಿದೆ.
ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ಹರಸಾಹಸ ಪಡುತ್ತಿದ್ದಾನೆ ಅಂದರೆ ತಪ್ಪಾಗಲಾರದು. ಬಿಡುವಿಲ್ಲದ ಸ್ಪರ್ಧಾತ್ಮಕ ಬದುಕಿನಲ್ಲಿ ಕೆಲವೊಂದು ಸಣ್ಣ ಸಮಸ್ಯೆಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬ ಗೊಂದಲ ನಿಮಗೆ ಕಾಡಬಹುದು. ಇದರ ಜೊತೆ ಆಧುನಿಕ ಜಗತ್ತಿನಲ್ಲಿ ದೈಹಿಕ ಚಟುವಟಿಕೆಗಳು ತೀರಾ ಬಹಳಷ್ಟು ಕಡಿಮೆಯಾಗಿವೆ. ಜೊತೆಗೆ ಕಲಬೆರಕೆ ಇಲ್ಲದ ಆಹಾರ ದೊರೆಯುವುದು ಅತ್ಯಂತ ವಿರಳವಾಗಿದೆ. ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಸಿಹಿ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅಪಧಮನಿಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಪ್ರಸ್ತುತ ಮನುಷ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವ ವಿಚಾರ.
ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ಹಾಗಿರುವಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಡುಗೆ ಮನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು.
ಡಯೆಟ್ ಎನ್ನುವ ಹೆಸರಲ್ಲಿ ಆಹಾರವನ್ನು ನೀವೇ ನಷ್ಟ ಮಾಡಿಕೊಳ್ಳುವುದು ನಿಮಗೆ ತಿಳಿದಿರುವುದಿಲ್ಲ. ಅಂದರೆ ತೂಕ ಇಳಿಕೆ ಆರೋಗ್ಯಕರವಾಗಿ ಹಾಗೂ ಹಂತ ಹಂತವಾಗಿ ನಡೆಯಬೇಕು. ತೂಕ ಇಳಿಸಲು ಸರಿಯಾದ ಆಹಾರ ಕ್ರಮಗಳು, ವ್ಯಾಯಾಮ ಬಹಳ ಮುಖ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ವೇಟ್ ಲಾಸ್ ಡ್ರಿಂಕ್ಸ್ ಅಥವಾ ಇನ್ಯಾವುದೋ ಪ್ರಾಡಕ್ಟ್ ಬಳಸಿ ತೂಕ ಇಳಿಸುವುದಕ್ಕಿಂತ ನಮ್ಮ ಮನೆಯಲ್ಲಿ ನಾವು ತಿನ್ನುವ ಆಹಾರ ಬದಲಾವಣೆ ಮಾಡುವುದು ಸೂಕ್ತ.
ಅಡುಗೆ ಮನೆಯನ್ನು ಈ ರೀತಿಯಾಗಿ ಬದಲಾವಣೆ ಮಾಡಿಕೊಳ್ಳಿ ಎಲ್ಲಾ ಸಮಸ್ಯೆಗಳಿಗೆ ನಿಧಾನವಾಗಿ ಪರಿಹಾರ ಸಿಗಲಿದೆ.
- ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದನ್ನು ಸಾಧ್ಯ ಆದಷ್ಟು ನಿಲ್ಲಿಸುವುದು ಉತ್ತಮ. ಒಂದು ಸಲಿ ಬಳಸಿದ ಜಿಡ್ಡು ಎಣ್ಣೆ ಯನ್ನು ಮತ್ತೇ ಉಪಯೋಗಿಸದಿರಿ.
- ಯಾವುದೇ ತಿಂಡಿ ಸೇವಿಸಲು ನಿಮಗೆ ಜಾಮ್ ಆಯ್ಕೆ ಆಗಿದೆ. ಇದರ ಬದಲಿಗೆ ಬೇರೆ ಚಟ್ನಿ ವಗೇರ ಪದಾರ್ಥವನ್ನು ಸಿದ್ದಪಡಿಸಿ. ಹೌದು ಮಾರ್ಕೆಟ್ ನಲ್ಲಿ ಸಿಗುವ ಜಾಮ್ ಗೆ ಆರ್ಟಿಫಿಶಿಯಲ್ ಫ್ಲೇವರ್ ಮತ್ತು ಕಲರ್ ಗಳನ್ನು ಹಾಕಿರುತ್ತಾರೆ. ಜಾಮ್ ನಲ್ಲಿ ಅಧಿಕ ಸಕ್ಕರೆ ಅಂಶ ಇರುವುದರಿಂದ ಇದು ತೂಕವನ್ನು ಏರಿಸುತ್ತದೆ. ಹಾಗಾಗಿ ತೂಕ ಇಳಿಸುವವರು ನಿಮ್ಮ ಅಡುಗೆಮನೆಯಲ್ಲಿ ಜಾಮ್ ಇಡಬೇಡಿ.
- ಫ್ರಿಜ್ ನಲ್ಲಿ ವೆರೈಟಿ ಕೂಲ್ ಡ್ರಿಂಕ್ಸ್ ಇಡುವುದನ್ನು ಈ ಕೂಡಲೇ ನಿಲ್ಲಿಸಿ. ಈ ಡ್ರಿಂಕ್ಸ್ ನಲ್ಲಿರುವ ಕ್ಯಾಲೊರಿ ತೂಕವನ್ನು ಹೆಚ್ಚಿಸುತ್ತವೆ. ಇದು ಹಾರ್ಮೋನ್ ಇಂಬಾಲೆನ್ಸ್ ಮತ್ತು ಇನ್ಸುಲಿನ್ ಪ್ರತಿರೋಧಕಕ್ಕೂ ಕಾರಣವಾಗುತ್ತದೆ. ಸಕ್ಕರೆಯ ರೂಪದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬು ದೇಹಕ್ಕೆ ಹೋಗುತ್ತದೆ. ಕೂಲ್ ಡ್ರಿಂಕ್ಸ್ ಬದಲು ಮಣ್ಣಿನ ಮಡಕೆಯಲ್ಲಿ ನೀರು ಶೇಕರಿಸಿ ಕುಡಿಯುವುದು ಸೂಕ್ತ.
- ಅಧಿಕ ತೂಕದ ಸಮಸ್ಯೆ ಇರುವವರಿಗೆ ಸಕ್ಕರೆ ಒಳ್ಳೆಯದಲ್ಲ. ಪ್ರತಿನಿತ್ಯ ಹೆಚ್ಚು ಸಕ್ಕರೆ ಬಳಸುವುದರಿಂದ ಶರೀರದಲ್ಲಿ ಕ್ಯಾಲೊರಿ ಹೆಚ್ಚುತ್ತದೆ. ಇದರಿಂದ ತೂಕವೂ ಹೆಚ್ಚುತ್ತದೆ. ಸಕ್ಕರೆ ಹಾರ್ಮೋನುಗಳ ಅಸಮತೋಲನ, ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ.
- ಮೈದಾ, ಸಕ್ಕರೆ ಮತ್ತು ಎಣ್ಣೆಯನ್ನು ಬಳಸಿ ತಯಾರಿಸುವ ಬಿಸ್ಕತ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ತೂಕವನ್ನು ಹೆಚ್ಚಿಸುತ್ತದೆ. ಬಿಸ್ಕತ್ ನಿಂದ ದೂರವಿದ್ದಷ್ಟು ಆರೋಗ್ಯ ವೃದ್ಧಿ ಜೊತೆ ತೂಕ ಕಡಿಮೆ ಮಾಡಬಹುದು.
- ಮೈದಾ ಹಿಟ್ಟು ಜಾಸ್ತಿ ಬಳಸದಿರುವುದು ಉತ್ತಮ. ಮೈದಾ ಬೇಗನೆ ಜೀರ್ಣ ಆಗದೇ ಇರುವುದರಿಂದ ನಿಮ್ಮ ಜೀರ್ಣ ಶಕ್ತಿ ಕುಂದಿಸಬಹುದು.
- ಮೀನು ಮಾಂಸ ಮಿತವಾಗಿ ಸೇವಿಸುವುದು ಉತ್ತಮ. ಫ್ರಿಜ್ ನಲ್ಲಿ ವಾರಗಟ್ಟಲೆ ಮಾಂಸ ಶೇಕರಿಸಿ ಪ್ರತಿದಿನ ಬಿಸಿ ಮಾಡಿ ತಿನ್ನುವುದು ಬಹಳ ಅಪಾಯಕಾರಿ. ಬೇಡದ ಬೊಜ್ಜು ನಿಮ್ಮ ದೇಹದಲ್ಲಿ ಉತ್ಪತ್ತಿ ಆಗುತ್ತದೆ.
- ಹೋಟೆಲ್ ಆಹಾರ ಯಾವುದೇ ಇರಲಿ ನಮ್ಮ ಅರೋಗ್ಯವನ್ನು ಒಂದಲ್ಲಾ ಒಂದು ರೀತಿಯಲ್ಲಿ ಘಾಸಿ ಗೊಳಿಸುತ್ತದೆ. ಆದ್ದರಿಂದ ಹೋಟೆಲ್ ಫುಡ್ ಗೆ ಗುಡ್ ಬೈ ಹೇಳುವುದು ಉತ್ತಮ. ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ.
- ಇನ್ನು ಚಿಪ್ಸ್, ಸಿಹಿ ತಿಂಡಿ, ಕ್ರೀಮ್ ಚಾಕಲೇಟ್ ಇವುಗಳನ್ನು ಅತಿಯಾಗಿ ಅಡುಗೆ ಕೋಣೆಯಲ್ಲಿ ಶೇಖರಿಸಿಟ್ಟು ಪದೇ ಪದೇ ತಿನ್ನುತ್ತಾ ಟಿವಿ ನೋಡುವ ಅಭ್ಯಾಸವನ್ನು ಇವತ್ತಿನಿಂದಲೇ ಕಡಿಮೆ ಮಾಡುತ್ತ ಬರುವುದು ಸೂಕ್ತ.
- ಯಾವುದೇ ಪದಾರ್ಥ ಮಾಡಲು ನೀವೇ ಸಿದ್ಧ ಪಡಿಸಿದ ಸಾಂಬಾರು ಪದಾರ್ಥ ಉಪಯೋಗಿಸಿ ಇದರಿಂದ ಉತ್ತಮ ರುಚಿ ಮತ್ತು ಆರೋಗ್ಯ ಪಡೆಯಬಹುದು.
ಈ ರೀತಿಯಾಗಿ ಅಡುಗೆ ಮನೆಯ ವಿಚಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ ಮತ್ತೇ ನೋಡಿ ನಿಮ್ಮ ದೇಹದಲ್ಲಿ ಮಹತ್ತರವಾದ ಬದಲಾವಣೆ ಆಗಲಿದೆ.