ಈ ಐದು ತರಹದ ಚಹಾ ಸೇವನೆ ಮಾಡಿ ನಿಮ್ಮ ದೇಹ, ಮನಸ್ಸು ಆರೋಗ್ಯವಾಗಿಡಿ !

ಟೀ… ಚಾಯ್… ಹೀಗೇ ನಾನಾ ಹೆಸರಿನಿಂದ ಕರೆಯಲ್ಪಡುವ ಪಾನೀಯವೇ “ಚಹಾ”, ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಚಹಾವನ್ನು ಇಷ್ಟಪಡದೇ ಇರುವವರು ವಿರಳ. ಮುಂಜಾನೆದ್ದು ಒಂದು ಗುಟುಕು ಚಹಾ ಕುಡಿದರೇನೇ ಕೆಲವರಿಗೆ ಸಮಾಧಾನ. ಸಂಜೆ ಎಲ್ಲಾ ಕೆಲಸ ಮುಗಿಸಿ ಚಹಾ ಕುಡಿದರೆ ಮನಸ್ಸಿಗೆ ಅದೇನೋ ನೆಮ್ಮದಿ. ಇದು ಕೇವಲ ಮನಸ್ಸಿಗೆ ಮಾತ್ರ ನೆಮ್ಮದಿ ನೀಡುವುದಲ್ಲದೆ ಆರೋಗ್ಯಕ್ಕು ಹಿತ. ಆದರೆ, ನಿಮಗೆ ಗೊತ್ತೇ? ಚಹಾದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಔಷಧೀಯಾ ಗುಣವಿದೆಯೆಂದು. ಅದಕ್ಕೆ ಟೀ ಬ್ರಾಂಡ್​ ಸಿಇಒ ಮತ್ತು ಸಂಸ್ಥಾಪಕರಾದ ಬಾಲಾ ಸರ್ದಾ ಅವರು ಹೇಳುವ ಪ್ರಕಾರ ಈ ಐದು ಚಹಾಗಳ ಸೇವನೆ ನಿಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ತರುತ್ತದೆಯಂತೆ. ಹಾಗಾಗಿ ನಾವಿಂದು ನಿಮಗೆ ಈ 5 ಚಹಾ ಏನೆಲ್ಲಾ ಆರೋಗ್ಯ ಭಾಗ್ಯವನ್ನು ನೀಡುತ್ತದೆ ಎಂಬ ಕುತೂಹಲ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಅರಿಶಿಣ ಚಹಾ:- ಕಡಿಮೆ ಕ್ಯಾಲೋರಿಯ ಜೊತೆ ಪೋಷಕಾಂಶ ಹೊಂದಿರುವ ಈ ಚಹಾದಲ್ಲಿ ಕೆಫಿನ್​​​​​ನ ಯಾವುದೇ ಅಂಶ ಇಲ್ಲದೇ ಇರುವುದರಿಂದ ಆರೋಗ್ಯಕ್ಕೆ ಅತ್ಯುತ್ತಮ ಚಹಾ ಇದಾಗಿದೆ. ಹಾಗಾಗಿ ಹೃದಯದ ಆರೋಗ್ಯಕ್ಕೂ ಕೂಡಾ ಅತ್ಯಂತ ಲಾಭಕರ ಅಂಶವಾಗಿದೆ. 12 ವಾರಗಳ ವರೆಗೆ ಇದನ್ನು ಸೇವಿಸುವುದರಿಂದ ಸಿಸ್ಟೊಲಿಕ್ ರಕ್ತದೊತ್ತಡ ಗಣನೀಯವಾಗಿ ಕಡಿಮೆಯಾಗುತ್ತದೆ. ನಿಮ್ಮ ತೂಕವನ್ನು ಕಡಿಮೆಮಾಡುತ್ತದೆ. ಜೊತೆಗೆ ಇದು ಖಿನ್ನತೆ, ಮನಸ್ಸಿನ ಅಸ್ವಸ್ಥತೆಯನ್ನು ಕೂಡಾ ದೂರ ಮಾಡುತ್ತದೆ.

ಕ್ಯಾಮೊಮೈಲ್ ಚಹಾ: ಸಾಂಂಪ್ರದಾಯಿಕ ಔಷಧವಾಗಿರುವ ಇದು ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಇದು ರೋಗ ನಿವಾರಣೆ ಮತ್ತು ಕ್ಯಾನ್ಸರ್​ ಹಾಗೂ ಡಯಾಬೀಟಿಸ್​ಗೆ ಪರಿಣಾಮಕಾರಿ ಎಂದು ಹೇಳುತ್ತಾರೆ ಸಂಶೋಧಕರು. ಹರ್ಬಲ್​ ಔಷಧ ಗುಣಹೊಂದಿರುವ ಈ ಚಹಾ ಸೇವನೆ ಪ್ರತಿಯೊಬ್ಬರಿಗೂ ಸುರಕ್ಷಿತವಾಗಿದೆ. ಇದನ್ನು ಸೇವಿಸುವುದರಿಂದ ಎಲ್ಲಾ ಮಹಿಳೆಯರ ಸಾಮಾನ್ಯ ನೋವಾದ ಋತುಚಕ್ರದ ನೋವನ್ನು ಶಮನಮಾಡಬಹುದಾಗಿದೆ. ಊರಿಯುತ, ಕ್ಯಾನ್ಸರ್​ ತಡೆ, ಅಸ್ಥಿಮಜ್ಜೆ ತಡೆಗೆ ಈ ಕ್ಯಾಮೊಮೈಲ್​ ಚಹಾ ಅತ್ಯಂತ ಪರಿಣಾಮಕಾರಿ. ಈ ಚಹಾ ವಿಶ್ರಾಂತಿ ನೀಡುವ ಜೊತೆಗೆ ಉತ್ತಮ ನಿದ್ರೆಗೂ ಸಹಾಕಾರಿಯಾಗಿದೆ.

ದಾಸವಾಳದ ಚಹಾ:- ದಾಸವಾಳ ಹೂವು ನೋಡಲು ಎಷ್ಟು ಚಂದವೋ ಅಷ್ಟೇ ಆರೋಗ್ಯ ಪ್ರಯೋಜನವನ್ನು ಹೊಂದಿದೆ ದಾಸವಾಳದ ಚಹಾ. ರೋಗ ನಿರೋಧಕ ಗುಣ ಹೊಂದಿದ್ದು, ತೂಕ ನಷ್ಟ, ಬ್ಯಾಕ್ಟೀರಿಯಾ ಬೆಳವಣಿಗೆಗೆ ತಡೆಗೆ ಸಹಾಯ ಮಾಡುತ್ತದೆ. ಜೊತೆಗೆ ಹೃದಯ ಮತ್ತು ಯಕೃತ್​ ಆರೋಗ್ಯಕ್ಕೆ ಉತ್ತಮವಾಗಿದೆ. ರಕ್ತದೊತ್ತಡ ತಡೆಯುವುದರ ಜೊತೆಗೆ ಯಕೃತ್​ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.

ಊಲಾಂಗ್​ ಚಹಾ:- ಇದು ಚೀನಿಯರ ಸಂಪ್ರದಾಯಿಕ ಚಹಾ ಆಗಿದೆ. ಕ್ಯಾಮೆಲಿಯಾ ಸಿನೆನ್ಸಿಸ್​ ಗಿಡದಿಂದ ಇದನ್ನು ತಯಾರಿಸಲಾಗುತ್ತದೆ. ಇದೇ ಗಿಡದಿಂದ ಗ್ರೀನ್​ ಟೀಯನ್ನು ಕೂಡಾ ತಯಾರಿಸಲಾಗುವುದು. ಇದರಲ್ಲಿ ವಿಟಮಿನ್​ ಮತ್ತು ಮಿನರಲ್ಸ್​ ಇದ್ದು, ಡಯಾಬೀಟಿಸ್​ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಹೃದಯದ ಆರೋಗ್ಯವನ್ನು ಕಾಪಾಡುವ ಈ ಚಹಾ ತೂಕ ನಷ್ಟಕ್ಕೆ ಕೂಡ ಪರಿಣಾಮಕಾರಿಯಾಗಿದೆ. ಇದರ ಮತ್ತೊಂದು ವಿಶೇಷತೆ ಎಂದರೆ. ಮಿದುಳಿನ ಕ್ರಿಯೆ, ಚುರುಕಿಗೆ ಇದು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತದೆ.

ಶುಂಠಿ ಚಹಾ:- ಬಹುತೇಕರ ನೆಚ್ಚಿನ ಚಹಾಗಳ ಲಿಸ್ಟ್ ನಲ್ಲಿ ಶುಂಠಿ ಚಹಾ ಮೊದಲನೇ ಸ್ಥಾನ ಪಡೆದಿದೆ. ಇದರಲ್ಲಿ ಯಾವುದೇ ರೀತಿಯ ಕೆಫೆನ್​ ಅಂಶ ಇರುವುದಿಲ್ಲ. ವಯಸ್ಸಾಗುವಿಕೆಗೆಯನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖವಾಗಿದೆ. ನೋವು ಶಮನಕಾರಿಯಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಫೈಬರ್​, ಪ್ರೋಟಿನ್​, ಸೋಡಿಯಂ, ಇದ್ದು ರೋಗ ಉತ್ಕರ್ಷಣ ಗುಣವನ್ನು ಹೊಂದಿದೆ. ಬಿಸಿಬಿಸಿ ಶುಂಠಿ ಚಹಾದ ಸೇವನೆಯಿಂದ ರಕ್ತ ಹೆಪ್ಪುಗಟ್ಟುವಿಕೆ, ಹೃದ್ರೋಗ ,ಕಡಿಮೆ ರಕ್ತದೊತ್ತಡ,ರಕ್ತದ ಚಲನೆ ಮುಂತಾದವುಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಹೃದ್ರೋಗ, ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಶುಂಠಿ ಚಹಾದ ಸೇವನೆಯನ್ನು ನಿಯಮಿತವಾಗಿ ಮಾಡಿರಿ.

Leave A Reply

Your email address will not be published.