ನಾನು ಗರ್ಭಿಣಿ ಎಂದು ಹೇಳಿದ ನಿವೇದಿತಾ ಗೌಡ!

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಜೋಡಿ ಎಂದರೆ ತಪ್ಪಾಗದು. ಇತ್ತೀಚೆಗಷ್ಟೇ ನಿವೇದಿತಾ ಸೋಲೋ ಟ್ರಿಪ್ ಕೂಡ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ರು. ಈ ನಡುವೆ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ನಿವೇದಿತಾ ಗೌಡ ಸ್ಪರ್ಧಿಸುತ್ತಿದ್ದು, ಈ ವೇಳೆ ವೇದಿಕೆ ಮೇಲೆ ಸ್ಕಿಟ್ ಮುಗಿಸಿಕೊಂಡ ಬಳಿಕ ಜಡ್ಜ್‌ ಜೊತೆ ಮಾತನಾಡುವಾಗ ನಿವೇದಿತಾ ಗೌಡ ಎಲ್ಲರಿಗೂ ಶಾಕ್ ನೀಡಿದ್ದಾರೆ. ಈ ಹಿಂದೆ ಕೂಡ ನಿವೇದಿತಾ ಮಮ್ಮಿ ಆಗ್ತಾ ಇದ್ದಾಳೆ ಅಂತ ಏಪ್ರಿಲ್ ಫೂಲ್ ಮಾಡಿದ್ರು. ಆದ್ರೆ ಈ ಬಾರಿ ನಿವೇದಿತಾ ಗೌಡ ನಿಜವಾಗಿಯೂ ಗರ್ಭಿಣಿ ಆಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣವೂ ಇದೆ.

 

ಗಿಚ್ಚಿ ಗಿಲಿ ಗಿಲಿ ಸೀಸನ್ 2 ಕೂಡ ಕಲರ್ಸ್ ಕನ್ನಡದಲ್ಲಿ ಶುರುವಾಗಿದ್ದು, ಈ ವೇಳೆ ನಿವಿ ತಟ್ಟೆಯಲ್ಲಿ ಮಾವಿನ ಕಾಯಿ, ಹುಣಸೇ ಹಣ್ಣು ತಂದು ಮೇಜಿನ ಮೇಲಿಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇದನ್ನು ಕಂಡು ಶಾಕ್ ಆದ ನಿರೂಪಕ ನಿರಂಜನ್ ದೇಶಪಾಂಡೆ ನಿವಿ ಅವರ ಬಳಿ ಏನೂ ನಡೆಯುತ್ತಿದೆ ಇಲ್ಲಿ ಎಂದು ಹಾಸ್ಯ ಮಾಡಿದ್ದು, ಇದಕ್ಕೆ ತಮ್ಮ ಶೈಲಿಯಲ್ಲೆ ನಿವಿ ಇದು ಬಟ್ಟೆ ಇರುವ ಹುಣಸೆ ಮತ್ತೊಂದು ಬಟ್ಟೆ ತೆಗೆದಿರುವ ಹುಣಸೆ ಎಂದುತ್ತರಿಸಿದ್ದಾರೆ.

ಆದರೆ ವೇದಿಕೆಯಲ್ಲಿ ನಡೆಯುತ್ತಿರುವ ವಿದ್ಯಮಾನ ಗಮನಿಸಿ, ಏನು ನಡೆಯುತ್ತಿದೆ ಎಂದು ಅರ್ಥವಾಗದೆ ತೀರ್ಪುಗಾರ್ತಿಯಾದ ಶ್ರುತಿ ಕೃಷ್ಣ ನಿವಿ ಬಳಿ ಪ್ರಶ್ನಿಸಿದಾಗ, ‘ನನಗೆ ಎರಡು ತಿಂಗಳು ನಾನು ಪ್ರೆಗ್ನೆಂಟ್’ ಎಂದುತ್ತರಿಸಿ ನಿವಿ ಸೆಟ್ನಲ್ಲಿದ್ದವರಿಗೆ ಶಾಕ್ ನೀಡಿದ್ದಾರೆ. ಪ್ರತಿ ಬಾರಿ ಎಲ್ಲರನ್ನು ಮಂಗ ಮಾಡುವ ನೀವಿ ಮಾತು ಕೇಳಿ ಅನುಮಾನ ವ್ಯಕ್ತಪಡಿಸಿದ ನಿರಂಜನ್ ಅವರಿಗೆ, ಎರಡು ತಿಂಗಳು ಎಂದರೆ ಯಾರಿಗೂ ಅರ್ಥವಾಗದು. ತನಗೆ ತಲೆ ಸುತ್ತು, ವಾಮಿಟಿಂಗ್, ಬೆಳಗ್ಗೆ ಎದ್ದೇಳಲು ಆಗುವುದಿಲ್ಲ’ ಎಂದು ಬಾರ್ಬಿ ಡಾಲ್ ಹೇಳಿದ್ದಾರೆ.

ಈ ಎಲ್ಲ ಮಾತುಗಳನ್ನು ಕೇಳಿ ಶೃತಿ ಅವರಿಗೆ ಮತ್ತೆ ಕೂಡ ಅರ್ಥವಾಗದೆ ಇದ್ದಾಗ ಸರಿಯಾಗಿ ಬಿಡಿಸಿ ವಿವರಿಸುವಂತೆ ಹೇಳಿದ್ದು, ತಾನು ಗರ್ಭಿಣಿಯಾಗಿದ್ದು, ಹೀಗಾಗಿ ತನಗೆ ರಿಹರ್ಸಲ್‌ಗೆ ಬರಲು ಆಗುತ್ತಿಲ್ಲ’ ಎಂದು ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ. ಹೀಗಾಗಿ, ಸಾಧು ಕೋಕಿಲ ಸರ್ ತಾನು ಹೆಚ್ಚು ಗ್ಲೋ ಆಗಿ ಕಾಣಿಸುತ್ತಿದ್ದೇನೆ ಎಂದು ಹಾಸ್ಯ ಮಾಡುತ್ತಿದ್ದಾರೆ ಎಂದಿದ್ದಾರೆ.

ಇವರ ಮಾತನ್ನು ಕೇಳಿ ಗಿಚ್ಚಿ ಗಿಲಿ ಗಿಲಿ ತಂಡದ ಸೆಟ್ ನವರು ನಂಬಿದರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಎಲ್ಲರಿಗೆ ಚೆನ್ನಾಗಿ ಕಾಗೆ ಹಾರಿಸುತ್ತಿದ್ದಾರಾ ಎಂಬ ಗುಮಾನಿ ಹುಟ್ಟಿರುವುದಂತು ಸ್ಪಷ್ಟ. ನೆಟ್ಟಿಗರು ಕಂಟೆಂಟ್‌ ಕ್ರಿಯೇಟ್ ಮಾಡುವ ನಿಟ್ಟಿನಲ್ಲಿ ನಿವಿ ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಚಂದು ಹಾಗೂ ನಿವಿ ರೀಲ್ಸ್ ಮಾಡಿ ಪೇಚಿಗೆ ಸಿಲುಕಿದ ಸಂದರ್ಭದಲ್ಲಿ ಚಂದನ್ ಶೆಟ್ಟಿ ಸದ್ಯಕ್ಕೆ ಪ್ಲ್ಯಾನ್ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಮೇಲೆ ನಿವಿ ನೀಡಿದ ಹೇಳಿಕೆ ಕಂಡು ಅಭಿಮಾನಿಗಳು ಶಾಕ್ ಆಗಿ ಬಿಟ್ಟಿದ್ದಾರೆ. ನಿಜವಾಗಿಯೂ ನಿವೇದಿತಾ ಗೌಡ ಗರ್ಭಿಣಿಯಾಗಿದ್ದಾರಾ ಎಂಬ ಪ್ರಶ್ನೆಗೆ ಇನ್ನೂ ಒಗಟಾಗಿ ಪರಿಣಮಿಸಿದೆ.

Leave A Reply

Your email address will not be published.