Dhruva Sarja Weight Loss : 18 ಕೆಜಿ ತೂಕ ಕೇವಲ 23 ದಿನಗಳಲ್ಲಿ ಕರಗಿಸಿಕೊಂಡ ನಟ ಧ್ರುವ ಸರ್ಜಾ ! ಹೇಗೆ ? ಆಕ್ಷನ್‌ ಪ್ರಿನ್ಸ್‌ ನೀಡಿದ್ರು ಉತ್ತರ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಕುರಿತಾಗಿ ರೋಚಕ ಮಾಹಿತಿಯೊಂದು ಹೊರ ಬಿದ್ದಿದೆ. ಹೆಚ್ಚಿನವರ ನೆಚ್ಚಿನ ನಾಯಕ ಧ್ರುವ ಸರ್ಜಾ ತಮ್ಮ ದೇಹವನ್ನು ದಂಡಿಸಿಕೊಂಡು ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಒಮ್ಮೆ ದೇಹ ಇಳಿಸಿಕೊಂಡಿದ್ದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೊಮ್ಮೆ ದೇಹ ದಂಡಿಸಿಕೊಂಡು ತೂಕ ಇಳಿಸಿಕೊಂಡಿದ್ದಾರೆ. ಸರಿ ಸುಮಾರು 23 ದಿನಗಳಲ್ಲಿ 18kg ತೂಕ ಇಳಿಸಿಕೊಂಡಿದ್ದು(Dhruva Sarja weight Loss) ಅದೇ ರೀತಿ ಸಣ್ಣ ಕೂಡ ಆಗಿದ್ದಾರೆ ಎನ್ನಲಾಗಿದೆ.

 

ಡೈರೆಕ್ಟರ್ ನಂದ ಕಿಶೋರ್ ಚಿತ್ರಕ್ಕೆ ಚಿಕ್ಕ ಹುಡುಗನ ರೀತಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಪೊಗರು ಚಿತ್ರದ ಸಮಯದಲ್ಲೂ ಎರಡು ರೀತಿಯ (Kannada Hero Dhruva Sarja) ಪಾತ್ರ ಮಾಡಬೇಕಾದ ಹಿನ್ನೆಲೆ ಹೀಗಾಗಿ ಒಮ್ಮೆ ಹೆಚ್ಚಿನ ತೂಕ ಇಳಿಸಿಕೊಂಡು ಚಿಕ್ಕ (Dhruva Sarja Young Look) ಹುಡುಗರ ರೀತಿ ಕಾಣಿಸಿಕೊಂಡ ಮೇಲೆ ಮತ್ತೆ ಚಿತ್ರದಲ್ಲಿ ತೂಕ ಹೆಚ್ಚಿಸಿಕೊಂಡು ದೈತ್ಯ ದೇಹದ ಮೂಲಕ ನಟಿಸಿ ಸೈ ಎನಿಸಿಕೊಂಡ ದ್ರುವ ಸರ್ಜಾ ಈಗ ಅದೇ ರೀತಿಯ ಚಾಲೆಂಜ್​​ ಮತ್ತೆ ಸ್ವೀಕರಿಸಿದ್ದಾರೆ.

ಕನ್ನಡದ KD ಚಿತ್ರದ ಸಲುವಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದೇಹ ತೂಕ ಇಳಿಸಿಕೊಂಡಿದ್ದು, ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿರುವುದು ಸಾಮಾನ್ಯ ವಿಚಾರ ಅಲ್ಲವೇ ಅಲ್ಲ!!! ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಬರೋಬ್ಬರಿ 18 ಕೆ.ಜಿ ತೂಕ ಇಳಿಸಿಕೊಳ್ಳಲು ಸಾಧ್ಯವೇ? ಎನ್ನುವ ಪ್ರಶ್ನೆ ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿದೆ. ಆದ್ರೆ, ಆ್ಯಕ್ಷನ್ ಪ್ರಿನ್ಸ್ ದೇಹದ ತೂಕ ಇಳಿಸಿಕೊಳ್ತಿರೋದು ಇದೇ ಮೊದಲ ಸಲ ಅಲ್ಲವಲ್ಲ!! ಧ್ರುವರವರು ಈ ಹಿಂದೆ ಪೊಗರು ಚಿತ್ರಕ್ಕೆ ದೇಹದ ತೂಕ ಇಳಿಸಿಕೊಂಡಿದ್ದರು. . ಇದನ್ನ ಕಂಡ ಅನೇಕರು ಬಣ್ಣಿಸಿದ್ದಾರೆ. ಆದರೂ ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ.

ಪೊಗರು ಚಿತ್ರದ ಬಳಿಕ ಧ್ರುವ ಸರ್ಜಾ KD ಚಿತ್ರಕ್ಕೆ ದೇಹದ ತೂಕ ಇಳಿಸಿಕೊಂಡಿದ್ದಾರೆ. ಡೈರೆಕ್ಟರ್ ಜೋಗಿ ಪ್ರೇಮ್ ಕೊಟ್ಟ ಚಾಲೆಂಜ್​ ಸ್ವೀಕರಿಸಿ ಧ್ರುವ ಸರ್ಜಾ ವೈಟ್ ಲಾಸ್ ಮಾಡಿಕೊಂಡಿದ್ದರೆ, ಅಭಿಮಾನಿಗಳು ಮೆಚ್ಚುಗೆಯ ಸುರಿಮಳಗೈಯುತ್ತಿದ್ದಾರೆ.ಧ್ರುವ ಸರ್ಜಾ ವರ್ಕೌಟ್​​ಗೆ ಹೆಚ್ಚು ಗಮನ ಕೊಡುವ ಹಿನ್ನೆಲೆ ದಿನವೂ ದೇಹವನ್ನ ದಂಡಿಸುವ ಜೊತೆಗೆ ಫಿಟ್ ಆಂಡ್ ಫೈನ್ ಆಗುವತ್ತ ಹೆಚ್ಚಿನ ನಿಗಾ ವಹಿಸುತ್ತಾರೆ. ಆದರೆ ಚಿತ್ರಕ್ಕಾಗಿ ಧ್ರುವ ಸರ್ಜಾ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವ ಅದೇ ಚಿತ್ರಕ್ಕಾಗಿ ದೇಹದ ತೂಕವನ್ನ ಹೇಳಿದ ಸಮಯಕ್ಕೆ ಇಳಿಸಿಕೊಂಡು ಬಿಡುವ ಕಡೆಗೂ ಗಮನ ಹರಿಸುತ್ತಾರೆ. ಅದೇ ರೀತಿ ಈಗ KD ಚಿತ್ರಕ್ಕೆ ಸಣ್ಣ ಆಗಿದ್ದಾರೆ. ಇದೇ ತಿಂಗಳ 25 ರಿಂದ KD ಸಿನಿಮಾ ಶೂಟಿಂಗ್​​ನಲ್ಲೂ ಧ್ರುವಸರ್ಜಾ ಭಾಗಿ ಆಗಲು ಅಣಿಯಾಗಿದ್ದಾರೆ.

ಧ್ರುವ ಸರ್ಜಾ ಕಳೆದ 36 ದಿನಗಳಿಂದಲೂ ಟ್ರೆಡ್​​ಮಿಲ್ ಮೇಲೆ ಓಡ್ತಾನೆ ಇದ್ದಾರೆ ಎನ್ನಲಾಗಿದ್ದು, ಪ್ರತಿ ದಿನ 10 ಕಿಲೋಮೀಟರ್ ಓಟ ಕಾಮನ್ ಅಂತೆ. ಸರ್ಜಾ ದೇಹದ ತೂಕ ಇಳಿಸಿಕೊಂಡಿರುವ ಹಿಂದಿನ ಸೀಕ್ರೆಟ್ ಪ್ರತಿ ದಿನ ಹೀಗೆ ಓಟ ಎನ್ನುವ ಮಾತುಗಳು ಕೇಳಿಬರುತ್ತಿವೆ. ಎಲ್ಲರ ರೀತಿಯೇ ಧ್ರುವ ಕೂಡ ಎಲ್ಲ ಆಹಾರವನ್ನು ಸೇವಿಸಿ ಕಠಿಣ ವ್ಯಾಯಾಮವನ್ನೂ ನಿಯಮಿತ ಮಾಡುವ ಜೊತೆಗೆ ನುರಿತವರ ಮಾರ್ಗದರ್ಶನದಲ್ಲಿ ಡಯೆಟ್ ಮತ್ತು ವರ್ಕೌಟ್ ಮಾಡುತ್ತಿದ್ದಾರೆ. ಈ ನಡುವೆ ಕಠಿಣ ಡಯೆಟ್ ಫಾಲೋ ಮಾಡುತ್ತಿರುವ ದ್ರುವಸರ್ಜಾ ಅವರ ಅಭಿಮಾನಿಗಳ ನಡುವೆ ಹೊಸ ಪ್ರಶ್ನೆಯೊಂದು ಕಾಡುತ್ತಿದ್ದು, ಬಹು ಬೇಗ ದೇಹ ದಂಡನೆ ಮಾಡಿದರೆ ಅವರ ದೇಹದ ಮೇಲೆ ಏನಾದರೂ ಪ್ರಭಾವ ಬೀರಬಹುದೇ ಎಂಬ ಆತಂಕ ಕೂಡ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Leave A Reply

Your email address will not be published.