ಅದ್ಭುತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ನ ಈ ಕಾರು | ಕೇವಲ 2.48 ಲಕ್ಷ ರೂ.ಗೆ ಲಭ್ಯ!!

ಪ್ರಸ್ತುತ ಮಾರುಕಟ್ಟೆಯಲ್ಲಿ ಕಾರುಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಲಿದ್ದು, ಗ್ರಾಹಕರನ್ನು ಸೆಳೆಯಲು ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹಾಗೇ ಇದೀಗ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ತನ್ನ ಬಜಾಜ್ ಕ್ಯೂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈವರೆಗೆ ಇದು ವಾಣಿಜ್ಯ ಬಳಕೆಗೆ ಮಾತ್ರ ಮೀಸಲಿತ್ತು. ಆದರೆ ಸದ್ಯದಲ್ಲೇ ಇತರ ಬೈಕ್ ಅಥವಾ ಕಾರಿನ ಬದಲಿಗೆ ಬಜಾಜ್ ಕ್ಯೂಟ್ ಅನ್ನು ಗ್ರಾಹಕರು ಖರೀದಿಸಬಹುದಾಗಿದೆ.

 

ಈ ಕಾರು ಬಜಾಜ್‌ನ ಕ್ಯೂಟ್ ಕ್ವಾಡ್ರೈಸಿಕಲ್ ವಿಭಾಗದಲ್ಲಿ ಬರುತ್ತದೆ. ಈ ವಿಭಾಗವನ್ನು ಮೂರು ಚಕ್ರ ಮತ್ತು ನಾಲ್ಕು ಚಕ್ರಗಳ ನಡುವೆ ಇರಿಸಲಾಗಿದ್ದು, ಈ ಕಾರಣದಿಂದ ಕಂಪನಿ ಇದನ್ನು ಮಾರುಕಟ್ಟೆಗೆ ಪರಿಚಯಿಸಲು ಬಹಳ‌ ಸಮಯ ತೆಗೆದುಕೊಂಡಿತ್ತು. ಕಂಪನಿಯು ಈ ಕಾರನ್ನು ಆಟೋ ರಿಕ್ಷಾಕ್ಕೆ ಪರ್ಯಾಯವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಕಾರಿನ ಬೆಲೆ ಕೇವಲ 2.48 ಲಕ್ಷ ರೂ. ಆಗಿದೆ. ಹಾಗೇ ಈ ಕಾರಿನಲ್ಲಿ ಆಟೋ ರಿಕ್ಷಾದಂತೆಯೇ ಚಾಲಕ ಸೇರಿದಂತೆ ನಾಲ್ವರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇದೆ.

ಸದ್ಯ ಬಜಾಜ್ ಬಿಡುಗಡೆ ಮಾಡಿರುವ ಬಜಾಜ್ ಕ್ಯೂಟ್ ವಾಣಿಜ್ಯ ಬಳಕೆಗೆ ಮಾತ್ರ ಲಭ್ಯವಿದೆ. ಆದರೆ, ಶೀಘ್ರದಲ್ಲೇ ಈ ಕಾರನ್ನು ಗ್ರಾಹಕರಿಗೆ ಖಾಸಗಿ ಬಳಕೆಗಾಗಿ ಖರೀದಿಸುವ ಅವಕಾಶ ಒದಗಲಿದೆ. ಬಜಾಜ್ ಅಂತಿಮವಾಗಿ ಖಾಸಗಿ/ಸಾರಿಗೆಯೇತರ ವಿಭಾಗದಲ್ಲಿ ಕ್ಯೂಟ್‌ ಬಿಡುಗಡೆಗೆ ಅನುಮೋದನೆ ಪಡೆದುಕೊಂಡಿದೆ. ಇನ್ನೂ, ಈ ಕಾರಿನ ಗರಿಷ್ಠ ವೇಗವು 70 ಕಿಮೀ/ಗಂಟೆಗೆ ಸೀಮಿತವಾಗಿದೆ ಎಂದು ಹೇಳಲಾಗಿದೆ.

ಬಜಾಜ್ ಕ್ಯೂಟ್ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದ್ದು, ಹಾಗಾಗಿ ಅದರ ತೂಕ 17 ಕೆಜಿಯಷ್ಟು ಹೆಚ್ಚಾಗಿದೆ. ಇನ್ನೂ, ಈ ಕಾರು ಪೆಟ್ರೋಲ್ ಮತ್ತು CNG ಆಯ್ಕೆಗಳಲ್ಲಿ ಬರಲಿದ್ದು, ಈ ಕಾರು 4W 216 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ, ಕ್ಯೂಟ್ 10.8 ಹಾರ್ಸ್ ಪವರ್ ಮತ್ತು 16.1 ಎನ್ಎಂ ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ ಎಂದು ತಿಳಿದುಬಂದಿದೆ.

Leave A Reply

Your email address will not be published.