10 ಸಾವಿರ ಗಂಟೆಗಳಲ್ಲಿ ರೆಡಿ ಆಯ್ತು ಅಥಿಯಾ ಶೆಟ್ಟಿ ಧರಿಸಿದ ಗುಲಾಬಿ ಲೆಹಂಗಾ! ಕುತೂಹಲ ವಿಚಾರಗಳನ್ನ ರಿವೀಲ್ ಮಾಡಿದ್ರು ಡ್ರೆಸ್ ಡಿಸೈನರ್ ಅನಾಮಿಕಾ ಖನ್ನಾ!!

ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ಅದ್ದೂರಿಯಾಗಿ ವಿವಾಹವಾದರು.
ಇಬ್ಬರೂ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಸಂತೋಷವನ್ನ ಹಂಚಿಕೊಂಡಿದ್ದಾರೆ. ಇನ್ನೂ ಮದುವೆಯಲ್ಲಿ ಅಥಿಯಾ ಧರಿಸಿದ್ದ ಸುಂದರವಾಗಿರುವ ಬ್ರೈಡಲ್ ಲೆಹೆಂಗಾ ಎಲ್ಲರ ಗಮನ ಸೆಳೆದಿದೆ. ಈ ಲೆಹಂಗಾ ತಯಾರಿಸೋಕೆ ಎಷ್ಟು ಸಮಯ ಬೇಕಾಯ್ತು ಗೊತ್ತೇ? ಕೇಳಿದ್ರೆ ನೀವೂ ಶಾಕ್ ಆಗ್ತೀರಾ!

ವಿಶೇಷ ದಿನಕ್ಕಾಗಿ ಅಥಿಯಾ ಅವರು ಗುಲಾಬಿ ಬಣ್ಣದ ಚಿಕಂಕರಿ ಲೆಹೆಂಗಾವನ್ನು ಧರಿಸಿದ್ದರೆ, ರಾಹುಲ್ ಅವರು ಕಸೂತಿ ಮಾಡಿದ ಶೆರ್ವಾನಿಯಲ್ಲಿ ಮಿಂಚಿದರು. ಮದುವೆಯ ಸಂದರ್ಭದಲ್ಲಿ ವಿಪರೀತ ಮೇಕಪ್ ಇಲ್ಲದೆ ಅತ್ಯಂತ ಸರಳವಾದ ಲುಕ್​ನಲ್ಲಿ ಕಂಡು ಬಂದಿದ್ದಾರೆ ಅಥಿಯಾ. ಮೇಕಪ್ ಹದವಾಗಿದ್ದು ಅವರನ್ನು ಮತ್ತಷ್ಟು ಚಂದ ಕಾಣುವಂತೆ ಮಾಡಿದೆ. ಅದರಲ್ಲೂ ಅವರ ಕೂಡ ಅವರು ತೊಟ್ಟ ಲೆಹಂಗಾ, ಅವರ ಸೌಂದರ್ಯವನ್ನು ಇನ್ನೂ ಹೆಚ್ಚು ಮಾಡಿತ್ತು. ಇದೀಗ ಈ ಸುಂದರವಾದ ಲೆಹಂಗಾವನ್ನು ತಯಾರಿಸಿದ, ಅಥಿಯಾ ಅವರ ಡ್ರೆಸ್ ಡಿಸೈನರ್ ಅನಾಮಿಕಾ ಖನ್ನಾ, ಅದರ ಕುರಿತ ಕೆಲವು ಕುತೂಹಲ ವಿಚಾರಗಳನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಅಥಿಯಾ ಅತ್ಯಂತ ಸೂಕ್ಷ್ಮವಾದ ಅಭಿರುಚಿ ಹೊಂದಿದ್ದಾಳೆ. ಅವಳು ವಧುವಾಗಲಿದ್ದಾಳೆ ಎಂಬ ಅಂಶದೊಂದಿಗೆ ಅವಳಿಗಾಗಿ ವಿಶೇಷವಾದ ಉಡುಗೆ ಸಿದ್ಧಪಡಿಸಿದೆ ಎಂದಿರುವ ಖನ್ನಾ, ಲೆಹಂಗಾ ಹಿಂದಿನ ಸ್ಫೂರ್ಥಿ ಅಥಿಯಾ ಶೆಟ್ಟಿ ಎಂದು ಬಹಿರಂಗಪಡಿಸಿದ್ದಾರೆ. ಈ ಸೂಕ್ಷ್ಮವಾದ ಲೆಹಂಗಾವನ್ನು ಕೈಯಿಂದ ತಯಾರಿಸಲಾಗುತ್ತದೆ. ಕೈಯಿಂದ ನೇಯ್ಗೆ ಮಾಡಲಾಗುವ ಈ ಲೆಹಂಗಾದ ಕಸೂತಿ ಕೆಲಸ ರೇಷ್ಮೆಯಲ್ಲಿ ಮಾಡಲಾಗುತ್ತದೆ. ಇದು ನಾಜೂಕಾದ ಕರಕುಶಲತೆಯಿಂದ ತುಂಬಿದ ರೇಷ್ಮೆಯ ಆರ್ಗನ್ಝಾದಿಂದ ಮಾಡಿದ ತೆಳುವಾದ ದುಪಟ್ಟಾವನ್ನು ಸಹ ಒಳಗೊಂಡಿದೆ. ಅಲ್ಲದೆ ಈ ಲೆಹಂಗಾವನ್ನು ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು ಬೇಕಾಯಿತು. ಅಂದರೆ 1 ವರ್ಷ 51 ದಿನಗಳು ಬೇಕಾಯಿತು ಎಂದು ಅವರು ಹೇಳಿದ್ದಾರೆ.

ಮದುವೆಯ ಫೋಟೋಗಳನ್ನು ಹಂಚಿಕೊಂಡ ಅಥಿಯಾ ಹಾಗೂ ರಾಹುಲ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡು ‘ನಿಮ್ಮ ಬೆಳಕಿನಲ್ಲಿ ನಾನು ಹೇಗೆ ಪ್ರೀತಿಸಬೇಕೆಂದು ಕಲಿತೆ. ಇಂದು, ನಮ್ಮ ಅತ್ಯಂತ ಪ್ರೀತಿಪಾತ್ರರ ಜೊತೆಗೆ, ನಮಗೆ ಜೀವನದಲ್ಲಿ ಅಪಾರವಾಗಿ ಖುಷಿ, ಸಂತೋಷ ನೀಡಿದ ಮನೆಯಲ್ಲಿ ನಾವು ಮದುವೆಯಾದೆವು. ಕೃತಜ್ಞತೆ ಹಾಗೂ ಪ್ರೀತಿಯಿಂದ ಈ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದವನ್ನು ನಾವು ಬಯಸುತ್ತೇವೆ’ ಎಂದು ಬರೆದಿದ್ದರು.

Leave A Reply

Your email address will not be published.