Actress Prema : ನಟಿ ಪ್ರೇಮಾ ಅವರಿಂದ ಬಂತು ಎರಡನೇ ಮ್ಯಾರೇಜ್ ಬಗ್ಗೆ ಬಿಗ್ ಅಪ್ಡೇಟ್!!!

ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನಟಿ ಪ್ರೇಮಾ ಅವರ ಮದುವೆ ಕುರಿತು ಊಹಾಪೋಹಗಳು ಹರಿದಾಡಿ ಸಂಚಲನ ಮೂಡಿಸಿತ್ತು. ನಟಿ ಪ್ರೇಮಾ ಹಸೆ ಮಣೆ ಏರುವ ಕುರಿತು ಹರಿದಾಡುತ್ತಿರುವ ಸುದ್ದಿಯ ಕುರಿತಾಗಿ ಜೊತೆಗೆ ಎರಡನೇ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.

 

ನಟನೆಯ ಮೂಲಕ ಸೈ ಎನಿಸಿಕೊಂಡಿರುವ ನಟಿ ಪ್ರೇಮಾ . ಅದ್ಭುತ ನಟನೆ ಮೂಲಕ ಜನಪ್ರಿಯತೆ ಗಳಿಸಿ ಮನೆಮಾತಾದ ನಟಿ ಪ್ರೇಮಾ ಅವರ ಮೊದಲ ಮದುವೆ ಮುರಿದು ಬಿದ್ದ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ರಿ ಎಂಟ್ರಿ ಕೊಟ್ಟರು ಕೂಡ ನಟಿ ಪ್ರೇಮಾ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಮಿಂಚದ ಹಿನ್ನೆಲೆ ಮತ್ತೆ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರು. ಈ ನಡುವೆ ಪ್ರೇಮಾ ಮತ್ತೆ ಮರುಮದುವೆಗೆ ಸಜ್ಜಾಗುತ್ತಿದ್ದಾರೆ ಎಂಬ ಗಾಳಿ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಿದಾಡಿತ್ತು. ಅಷ್ಟೇ ಅಲ್ಲದೆ, ಕಾಪು ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿತ್ತು. ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ನಟಿ ಪ್ರೇಮಾ ಕೊರಗಜ್ಜನ ಸನ್ನಿಧಿಗೂ ಭೇಟಿ ನೀಡಿದ್ದರು. ಹೀಗಾಗಿ, ನಟಿ ಪ್ರೇಮಾ ಹಸೆ ಮಣೆ ಏರುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿ ಹಬ್ಬಿತ್ತು. ಇದೀಗ, ನಟಿ ಪ್ರೇಮಾ ಈ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.

ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದ ಬಳಿಕ ಏಕಾಂಗಿಯಾಗಿ ಜೀವನ ಸಾಗಿಸುತ್ತಿರುವ ನಟಿ ಪ್ರೇಮಾ ಇದೀಗ 2ನೇ ಮದುವೆ ಆಗಲು ಸಜ್ಜಾಗಿದ್ದಾರೆ ಎಂದೇ ಹೆಚ್ಚಿನವರು ಭಾವಿಸಿದ್ದರು. ಈ ನಿಟ್ಟಿನಲ್ಲಿ ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೋರೆ ಹೋಗಿದ್ದಾರೆ ಎನ್ನುವ ಸುದ್ದಿ ಜೋರಾಗಿ ಸದ್ದು ಮಾಡಿತ್ತು. ಆದರೆ, ಈ ಕುರಿತಂತೆ ಸ್ಯಾಂಡಲ್​ವುಡ್ ನಟಿ ಪ್ರೇಮಾ ಅವರು ಎರಡನೇ ಮದುವೆ ಬಗ್ಗೆ ಮೌನ ಮುರಿದಿದ್ದು, ಈ ಮೂಲಕ ಹಲವು ದಿನಗಳಿಂದ ಓಡಾಡುತ್ತಿರುವ ಮದುವೆ ಕುರಿತ ಸುದ್ದಿಗಳಿಗೆ ಬ್ರೇಕ್ ನೀಡುವ ಹಾಗೂ ತೆರೆ ಎಳೆಯಲು ಮುಂದಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಕೊರಗಜ್ಜ ಸನ್ನಿಧಿಗೆ , ನಟಿ ಪ್ರೇಮಾ ಜೊತೆ ತಮ್ಮ ಅಯ್ಯಪ್ಪ ಪತ್ನಿ ನಟಿ ಅನು ಅಯ್ಯಪ್ಪ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ ಮೇಲಂತೂ ನಟಿಯ ಮದುವೆ ಸುದ್ದಿಯ ಅನುಮಾನ ದಟ್ಟವಾಗಿ ಹಬ್ಬಿತ್ತು. ಸದ್ಯ ಎಲ್ಲೆಡೆ ವ್ಯಾಪಕವಾಗಿ ನಟಿ ಪ್ರೇಮಾ ಮದುವೆ ಕುರಿತು ಗುಸು ಗುಸು ಸುದ್ದಿ ಹಬ್ಬಿರುವ ಹಿನ್ನೆಲೆ ಫುಲ್ ಗರಂ ಆಗಿರುವ ನಟಿ ಎರಡನೇ ಮದುವೆ ಆಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಷ್ಟೇ ಅಲ್ಲದೆ, ದೇವಸ್ಥಾನಕ್ಕೂ ಹೋಗೊದು ತಪ್ಪು ಎಂದು ಭಾವಿಸಿದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಕೊರಗಜ್ಜನ ದೇವಾಲಯಕ್ಕೆ ಹೋಗದೆ ಅನೇಕ ಸಮಯ ಆದ ಕಾರಣ ಅಲ್ಲಿಗೆ ಭೇಟಿ ನೀಡಿದ್ದಾಗಿ ಪ್ರೇಮ ಹೇಳಿಕೊಂಡಿದ್ದಾರೆ.

ಇದಲ್ಲದೆ ತಾನು ನನ್ನ ಮದುವೆ ಬಗ್ಗೆ ಅಲ್ಲಿ ಪ್ರಸ್ತಾಪ ಕೂಡ ಮಾಡಿಲ್ಲ ಎಂದು ನಟಿ ಪ್ರೇಮಾ ಸ್ಪಷ್ಟ ಪಡಿಸಿ, ತಾನು ಇನ್ನೂ ಹೆಚ್ಚಿನ ಸಾಧನೆ ಮಾಡುವತ್ತ ಗಮನ ವಹಿಸಬೇಕು ಎನ್ನುವ ಮೂಲಕ ಮದುವೆಯ ಪ್ರಸ್ತಾಪವನ್ನು ಅಲ್ಲಗಳೆದಿದ್ದಾರೆ. ಹಾಗೂ ಒಂದು ವೇಳೆ, ತಾನು ಮದುವೆ ಆದಲ್ಲಿ ಕುಟುಂಬ ಹಾಗೂ ಅಭಿಮಾನಿಗಳ ಗಮನಕ್ಕೆ ತರುವುದಾಗಿ ನಟಿ ಪ್ರೇಮಾ ಹೇಳಿಕೊಂಡಿದ್ದಾರೆ.

Leave A Reply

Your email address will not be published.