ಗ್ಯಾಸ್ ಸಿಲಿಂಡರ್ ಡೆಲಿವರಿ ಸಮಯದಲ್ಲಿ ಹೆಚ್ಚಿನ ಹಣ ಕೊಡುತ್ತೀರಾ ? ಈ ರೀತಿ ದೂರು ಸಲ್ಲಿಸಿ!

ಭಾರತದಲ್ಲಿ ಗ್ಯಾಸ್ ಸೇವೆಗಳನ್ನು ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HP) ಒದಗಿಸುತ್ತವೆ. ಜನರಿಗೆ ತಮ್ಮ ಅತಿವೇಗದ ಸೇವೆಯಿಂದ ಈ ಕಂಪನಿಗಳು ಹೆಸರು ಮಾಡಿದೆ ಎಂದರೆ ತಪ್ಪಾಗಲಾರದು. ಹಾಗೆನೇ ಭಾರತ್ ಗ್ಯಾಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಅತಿ ಹೆಚ್ಚು ಗ್ರಾಹಕರ ಸಂಖ್ಯೆಯನ್ನು ಹೊಂದಿದೆ. ಈ ಸಿಲಿಂಡರ್ಗಳನ್ನು ಮನೆ ಮನೆಗೆ ವಿತರಿಸುವ ನೌಕರರಿಗೆ ಮಾಸಿಕ ವೇತನ ನೀಡಲಾಗುತ್ತದೆ. ಆದರೂ ಸಿಲಿಂಡರ್ ಡೆಲಿವರಿ ಮಾಡುವವರು ಜನಸಾಮಾನ್ಯರ ಅಗತ್ಯದ ಲಾಭ ಪಡೆಯುತ್ತಿದ್ದು, ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕಂಪನಿಗೆ ದೂರುಗಳು ಬರುತ್ತಲೇ ಇದೆ.

ಹೆಚ್ಚುವರಿಯಾಗಿ 25- 30 ರೂ. ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಗ್ರಾಹಕರಿಂದ ಬರುತ್ತಿದೆ. ಈ ರೀತಿ ಹೆಚ್ಚುವರಿ ಹಣ ಕೇಳುವುದು ಕಾನೂನು ಬಾಹಿರವಾಗಿದ್ದೂ, ಈ ಸಂದರ್ಭದಲ್ಲಿ ವಿತರಣಾ ವ್ಯಕ್ತಿಯ ಮೇಲೆ ಗ್ಯಾಸ್ ಕಂಪನಿಗಳಲ್ಲಿ ದೂರು ನೀಡಬಹುದು. ಗ್ರಾಹಕರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟರೆ, ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು ಎಂದು ಗ್ಯಾಸ್ ಏಜೆನ್ಸಿಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ಟೋಲ್ ಫ್ರೀ ಸಂಖ್ಯೆಗಳ ವಿವರ ಹೀಗಿದೆ
ಭಾರತ್ ಗ್ಯಾಸ್ – 1800224344
ಇಂಡೋನ್ ಗ್ಯಾಸ್- 18002333555
ಹಿಂದೂಸ್ತಾನ್ ಪೆಟ್ರೋಲಿಯಂ (HP) – 18002333555
ದೂರು ನೀಡುವ ಗ್ರಾಹಕರು ಮೊದಲು ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬೇಕು.

ಅವರಲ್ಲಿ ಗ್ರಾಹಕರ ಸಂಖ್ಯೆ, ವಿಳಾಸ, ಹೆಚ್ಚುವರಿ ಹಣವನ್ನು ವಿನಂತಿಸಿದ ಉದ್ಯೋಗಿಯ ಹೆಸರನ್ನು ನಮೂದಿಸಿ. ನಂತರ ಗ್ಯಾಸ್ ಕಂಪನಿಯು, ಗ್ರಾಹಕರಿಂದ ಹೆಚ್ಚುವರಿ ಹಣವನ್ನು ವಸೂಲಿ ಮಾಡುವ ನೌಕರನ ಬಗ್ಗೆ ತನಿಖೆ ಮಾಡುತ್ತದೆ ಮತ್ತು ಖಚಿತಪಡಿಸುತ್ತದೆ. ಅಲ್ಲದೇ ಸಂಬಂಧಪಟ್ಟ ನೌಕರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ಯಾಸ್ ಕಂಪನಿಗಳು ಹೇಳುತ್ತಿವೆ. ಆದರೆ, ಗ್ಯಾಸ್ ಸಿಲಿಂಡರ್ ವಿತರಿಸುವ ವ್ಯಕ್ತಿಯ ಹೆಸರನ್ನು ತಿಳಿದುಕೊಳ್ಳಲು ಸಲಹೆ ನೀಡಲಾಗುತ್ತದೆ.

Leave A Reply

Your email address will not be published.