Weight Loss : ದೇಹದ ತೂಕ ಕಡಿಮೆ ಮಾಡಲು ಈ ಕಾಳು ಬೆಸ್ಟ್!
ತೂಕ ಇಳಿಸುವ ಹುಮ್ಮಸ್ಸಿನಲ್ಲಿರುವವರು ಇದಕ್ಕಾಗಿ ತಮ್ಮ ಅಹಾರವನ್ನು ಸೂಕ್ಷ್ಮವಾಗಿ ಆರಿಸಿ,ಕೊಳ್ಳುವುದು ಅಗತ್ಯ. ಆಹಾರದಿಂದ ಅಪಾರ ಪ್ರಮಾಣದ ಕ್ಯಾಲೋರಿಗಳು ದೇಹ ಸೇರಿದರೆ ತೂಕ ಇಳಿಕೆಯ ಬದಲು ಇನ್ನಷ್ಟು ಹೆಚ್ಚಬಹುದು. ಅದರಲ್ಲೂ ವಿಶೇಷವಾಗಿ ಬೆಳಗ್ಗಿನ ಉಪಾಹಾರ ಸಾಕಷ್ಟು ಪೌಷ್ಟಿಕವೂ, ಅಗತ್ಯ ಕ್ಯಾಲೋರಿಗಳನ್ನು ನೀಡುವಂತಹದ್ದಿರಬೇಕು ಮತ್ತು ತೂಕ ಇಳಿಕೆಯ ಪ್ರಯತ್ನಗಳಿಗೆ ಬೆಂಬಲ ನೀಡುವಂತಿರಬೇಕು. ವಾಸ್ತವದಲ್ಲಿ, ತೂಕ ಇಳಿಕೆ ನಾವು ತಿಳಿದಷ್ಟು ಸುಲಭವಲ್ಲ, ಕೊಂಚ ಕ್ಲಿಷ್ಟವಾಗಿದೆ. ಬಾಯಿಗೆ ರುಚಿ ಕೊಡುವ ಜಂಕ್ ಫುಡ್, ಕರಿದ ಪದಾರ್ಥಗಳು, ಸಕ್ಕರೆ, ಮೈದಾ ಆಹಾರ ಪದಾರ್ಥ ಸೇವನೆ ಸಂಪೂರ್ಣವಾಗಿ ತಪ್ಪಿಸಬೇಕಾಗುತ್ತದೆ.
ಕಟ್ಟುನಿಟ್ಟಿನ ಆಹಾರ ಕ್ರಮ:- ತೂಕ ಇಳಿಕೆಯಲ್ಲಿ ಆಹಾರ ಕ್ರಮವು ಮಹತ್ವವಾಗಿದೆ. ತೂಕ ಇಳಿಸುವವರು ಕಟ್ಟು ನಿಟ್ಟಿನ ಆಹಾರ ಕ್ರಮ ಪಾಲಿಸಿದರೆ ಆರೋಗ್ಯ ಮತ್ತು ತೂಕ ನಷ್ಟ ಎರಡಕ್ಕೂ ಪ್ರಯೋಜನ ನೀಡುತ್ತದೆ. ತೂಕ ಇಳಿಕೆಯ ಜರ್ನಿಯಲ್ಲಿ ಮೊಳಕೆ ಕಾಳುಗಳ ಸೇವನೆ ಸಾಕಷ್ಟು ಪ್ರಯೋಜನಕಾರಿ.
ಮೊಳಕೆಯೊಡೆದ ಹೆಸರು ಕಾಳು, ಮೊಳಕೆಯೊಡೆದ ಕಡಲೆಕಾಳು, ಮೊಳಕೆಯೊಡೆದ ಗೋಧಿ, ಹುರುಳಿ, ಮಡಿಕೆ ಕಾಳು ಹೀಗೆ ವಿವಿಧ ಕಾಳುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಗ್ಗೆ ನೀರನ್ನು ಸೋಸಿ ತೆಗೆದು, ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಿ ಸಲಾಡ್ ರೂಪದಲ್ಲಿ ಸೇವಿಸುವುದರಿಂದ ತೂಕ ನಷ್ಟಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಮೊಳಕೆಯೊಡೆದ ಗೋಧಿಯಲ್ಲಿ ಫೋಲೇಟ್, ಕಬ್ಬಿಣ, ವಿಟಮಿನ್ ಸಿ, ಸತು, ಮೆಗ್ನೀಸಿಯಮ್, ಕಿಣ್ವ, ಕ್ಯಾಲ್ಸಿಯಂ, ಡಯೆಟರಿ ಫೈಬರ್ ಮತ್ತು ಪ್ರೊಟೀನ್ ಇದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ.
ಮೊಳಕೆಯೊಡೆದ ಗೋಧಿಯಲ್ಲಿ ಅಗಾಧ ಪ್ರಮಾಣದ ಫೈಬರ್ ಅಂಶವಿದೆ. ಹಾಗಾಗಿ ಕರಗುವ ನಾರಿನ ಪ್ರಮಾಣ ಹೆಚ್ಚಾಗಿದ್ದು, ಮಲಬದ್ಧತೆ ನಿವಾರಿಸುತ್ತದೆ. ಒಂದು ಬಟ್ಟಲು ಮೊಳಕೆಯೊಡೆದ ಗೋಧಿ ಸೇವನೆಯು ದೀರ್ಘಕಾಲ ಹೊಟ್ಟೆ ತುಂಬಿಸುತ್ತದೆ. ಇದು ಹಸಿವಾಗುವುದನ್ನು ತಡೆಯುತ್ತದೆ. ಈ ಮೂಲಕ ಇದು ವೇಟ್ ಲಾಸ್ ಗೆ ಸಹಕಾರಿ.
ಕಡಿಮೆ ಕ್ಯಾಲೋರಿ:- ಮೊಳಕೆಯೊಡೆದ ಗೋಧಿ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ವ್ಯಾಯಾಮ ಮತ್ತು ಗೋಧಿಯ ಸೇವನೆ ಮಾಡಿದರೆ ತ್ವರಿತವಾಗಿ ತೂಕ ಕಳೆದುಕೊಳ್ಳಬಹುದು. ಜೀರ್ಣಾಂಗ ವ್ಯವಸ್ಥೆ ಸರಿಪಡಿಸಿ, ಬೆಲ್ಲಿ ಫ್ಯಾಟ್ ಅನ್ನು ಕಡಿಮೆ ಮಾಡುತ್ತದೆ.
ಪ್ರೋಟೀನ್ ಸಮೃದ್ಧ ಆಹಾರ:- ಮೊಳಕೆಯೊಡೆದ ಗೋಧಿ, ತೂಕ ಇಳಿಕೆಗೆ ಬೇಕಾದ ಪ್ರೊಟೀನ್’ಯುಕ್ತ ಆಹಾರವಾಗಿದೆ. ಇದರಲ್ಲಿ ಅಮೈನೋ ಆಮ್ಲವಿದ್ದು, ತೂಕ ನಿಯಂತ್ರಿಸುವ ಜೊತೆಗೆ ಸ್ನಾಯುಗಳ ಆರೋಗ್ಯವನ್ನು ಕಾಪಾಡುತ್ತದೆ.
ಮೊಳಕೆಯೊಡೆದ ಗೋಧಿಯನ್ನು ಮಧ್ಯಾಹ್ನ ಊಟ, ರಾತ್ರಿ ಊಟ, ಉಪಹಾರಕ್ಕೆ ಯಾವಾಗ ಬೇಕಾದರೂ ಸೇವಿಸಬಹುದು ಹಾಗೂ ಸಲಾಡ್ ರೂಪದಲ್ಲೂ ಸೇವಿಸಬಹುದು.