New Courses: UGCಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ 4 ಹೊಸ ಆನ್ಲೈನ್ ಕೋರ್ಸ್ ಪರಿಚಯ !
ಇಂದಿನ ಕಾಲದಲ್ಲಿ ಶಿಕ್ಷಣ ಮಹತ್ತರ ಪಾತ್ರವನ್ನು ವಹಿಸುತ್ತದೆ. ನಾಳಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅಕ್ಷರಜ್ಞಾನ ಅತ್ಯವಶ್ಯಕ. ಇದೀಗ, ಪದವಿ ಹಾಗೂ ಸ್ನಾತಕೋತ್ತರ ಪದವಿ ಮಾಡಿರುವ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ 4 ಆನ್ ಲೈನ್ ಕೋರ್ಸ್ ಗಳನ್ನು ಪರಿಚಯಿಸಿದೆ.
ಪ್ರತಿಯೊಬ್ಬರಿಗೂ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಸ್ವಯಂ ಆನ್ಲೈನ್ ಪ್ಲಾಟ್ಫಾರ್ಮ್ ನಲ್ಲಿ ಈ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಈಗ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ಸ್ವಯಂ ಮೂಲಕ ವಿದ್ಯಾರ್ಥಿಗಳಿಗೆ ನಾಲ್ಕು ಮುಕ್ತ ಆನ್ ಲೈನ್ ಕೋರ್ಸ್ ಗಳನ್ನು ನೀಡುತ್ತಿದೆ.
ಭಾರತವನ್ನು ಬೌದ್ಧ ಸಂಸ್ಕೃತಿ ಹಾಗೂ ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡುವ ದೆಸೆಯಿಂದ ಮೂರು ಕೋರ್ಸ್ಗಳನ್ನು ಪರಿಚಯಿಸಲಾಗಿದೆ ಎಂದು ಯುಜಿಸಿ ತನ್ನ ಅಧಿಕೃತ ಅಧಿಸೂಚನೆಯಲ್ಲಿ ಹೇಳಿದೆ. ಭಾರತೀಯ ಬೌದ್ಧ ಇತಿಹಾಸ, ಅಭಿಧಮ್ಮ (ಪಾಲಿ), ಬೌದ್ಧ ತತ್ವಶಾಸ್ತ್ರ. ನಾಲ್ಕನೆಯದು MVOOC ಸಮುದಾಯದ ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದೆ ಎನ್ನಲಾಗಿದೆ.
ಬೌದ್ಧಧರ್ಮವು ಒಂದು ತತ್ವಶಾಸ್ತ್ರವಾಗಿದ್ದು, ಬುದ್ಧನ ತತ್ವಶಾಸ್ತ್ರದಲ್ಲಿ ಆಸಕ್ತಿ ಇರುವ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ನೀವು ಮಾರ್ಚ್ 15 ರ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ . ಈ ಕೋರ್ಸ್ 6ನೇ ಫೆಬ್ರವರಿ 2023 ರಿಂದ ಪ್ರಾರಂಭವಾಗಲಿದ್ದು 22ನೇ ಮೇ 2023 ರಂದು ಕೊನೆಗೊಳ್ಳುತ್ತದೆ ಎನ್ನಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಸೂಚನೆಗಳ ಅನುಸಾರ, ಈ ಕೋರ್ಸ್ ಅನ್ನು ಯೋಶ್ ಭಾರತ್ ಅಭಿಯಾನದ ಭಾಗವಾಗಿ ರೂಪಿಸಲಾಗಿದ್ದು, ಈ ಕೋರ್ಸ್ಗೆ ಅರ್ಜಿ ಸಲ್ಲಿಸಲು ಮಾರ್ಚ್ 15, 2023 ಕೊನೆಯ ದಿನಾಂಕವಾಗಿದೆ. ದಯಾಲ್ಬಾಗ್ ಶಿಕ್ಷಣ ಸಂಸ್ಥೆ, ಆಗ್ರಾ ಆತಿಥೇಯ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತದೆ.
ವಿಶ್ವವಿದ್ಯಾನಿಲಯ ಅನುದಾನ ಆಯೋಗ 2021 ನಿಯಮಾವಳಿಗಳ ಅನುಸಾರ, ಸ್ನಾತಕೋತ್ತರ ಮತ್ತು ಪದವಿಪೂರ್ವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಯಾ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಈ ಕೋರ್ಸ್ ಗಳನ್ನು ಅಳವಡಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯಾ ಮ್ಯಾನೇಜ್ ಮೆಂಟ್ ಗಳಿಗೆ ಯುಜಿಸಿ ಮನವಿ ಮಾಡಿದೆ. ಮೂರು ಕೋರ್ಸ್ಗಳು ಭಾರತವನ್ನು ಬೌದ್ಧ ಸಂಸ್ಕೃತಿಯ ವಿಶ್ವ ಕೇಂದ್ರವಾಗಿಸಲು ಸಹಾಯ ಮಾಡುತ್ತದೆ ಎಂದು ಯುಜಿಸಿ ತಿಳಿಸಿದ್ದು, ಇವುಗಳ ಹೊರತಾಗಿ ಸಮುದಾಯ ಬದ್ಧತೆ ಮತ್ತು ಸಾಮಾಜಿಕ ಜವಾಬ್ದಾರಿ ಕೋರ್ಸ್ ಗಳನ್ನು ನೀಡಲಾಗುತ್ತಿದೆ.
ಈ ಕೋರ್ಸ್ಗಳನ್ನು ಓದಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಲಾಗಿದ್ದು ಯುಜಿಸಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಈ ಕೋರ್ಸ್ಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ವಾರಣಾಸಿಯ ಸಮತ್ನಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್ (CIHTS) ಆತಿಥೇಯ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತದೆ.ಭಾರತದ ಬೌದ್ಧ ಇತಿಹಾಸ ಕೋರ್ಸ್ ಮಾಡಲು ಬಯಸುವವರು ಮಾರ್ಚ್ 15 ರೊಳಗೆ ನೋಂದಾಯಿಸಿಕೊಳ್ಳಬೇಕಾಗಿದ್ದು, ಕೋರ್ಸ್ ಫೆಬ್ರವರಿ 6, 2023 ರಂದು ಪ್ರಾರಂಭವಾಗುತ್ತದೆ ಮತ್ತು ಮೇ 22 ರಂದು ಕೊನೆಗೊಳ್ಳಲಿದೆ.
ಅಭಿದಮ್ಮ (ಪಾಲಿ) ಕೋರ್ಸ್ ನಲ್ಲಿ ಆಸಕ್ತ ಅಭ್ಯರ್ಥಿಗಳು ಮಾರ್ಚ್ 15 ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಕೋರ್ಸ್ 6ನೇ ಫೆಬ್ರವರಿ 2023 ರಿಂದ ಪ್ರಾರಂಭವಾಗಲಿದ್ದು 22ನೇ ಮೇ 2023 ರಂದು ಕೊನೆಗೊಳ್ಳುತ್ತದೆ. ವಾರಣಾಸಿಯ ಸಮತ್ ನಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್ (CIHTS) ಆತಿಥೇಯ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಬಹುದಾಗಿದೆ.