Weird News : ಇದೆಂಥಾ ಪ್ರೀತಿ | ಹೆಂಡ್ತಿ ನಿಧನ ನಂತರ ಗಂಡ ಈ ರೀತಿ ಬದಲಾಗುವುದಾ?
ಕಾಲ ಎಷ್ಟು ಸ್ಪೀಡ್’ನಲ್ಲಿ ಬದಲಾಗುತ್ತಿದೆಯೋ ಅಷ್ಟೇ ಸ್ಪೀಡ್’ನಲ್ಲಿ ಜನರ ಮನಸ್ಸು, ಭಾವನೆ, ಆಸೆಗಳು ಬದಲಾಗುತ್ತಿದೆ. ಜಗತ್ತಿನ ಸೃಷ್ಟಿಯನ್ನೆ ಬದಲಾಯಿಸಲು ಹೊರಟಿದ್ದಾರೆ ಮಾನವರು. ಯಾಕೆ ಗೊತ್ತಾ? ಹುಟ್ಟಿದಾಗ ಒಂದು ಲಿಂಗ, ಬೆಳೆಯುತ್ತಾ ತಮ್ಮ ಲಿಂಗವನ್ನು ಬದಲಾಯಿಸುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ಇದೆ. ಲಿಂಗ ಬದಲಾವಣೆ ಈಗಂತೂ ಸಾಮಾನ್ಯವಾಗಿಬಿಟ್ಟಿದೆ. ಹೆಣ್ಣಿಗೋಸ್ಕರ ಹೆಣ್ಣು ಹುಡುಗನಾಗಿ ಬದಲಾಗುವುದು ಅಥವಾ ಗಂಡು ಇನ್ನೊಬ್ಬ ಗಂಡಿನ ಮೇಲೀನ ಪ್ರೀತಿಯಿಂದ ಹೆಣ್ಣಾಗಿ ಬದಲಾಗುವುದು, ಹೀಗೆ ಕೆಲವರು ಅವರವರ ಇಷ್ಟ ಕಾರಣಗಳಿಂದ ಲಿಂಗ ಬದಲಾವಣೆ ಮಾಡಿಸಿಕೊಂಡ ಅದೆಷ್ಟೋ ಘಟನೆಗಳಿವೆ. ನಾವಿಂದು ನಿಮಗೆ ಇಂತಹದೆ ಒಂದು ಸ್ಟೋರಿನ ಹೇಳಲಿದ್ದೇವೆ. ಹೆಂಗಸರನ್ನು ಕಂಡರೆ ಆಗದವ, ತನ್ನ ಹೆಂಡತಿಯಂತೆ ತಾನು ಕಾಣಬೇಕೆಂಬ ಹುಚ್ಚು ಆಸೆಯಿಂದ ಲಿಂಗ ಪರಿವರ್ತನೆ ಮಾಡಿದ್ದಾನೆ!!!
ಹೌದು, ಟೋನಿ ಎಂಬಾತನ ಮೂಲ ನಿವಾಸ ನ್ಯೂಯಾರ್ಕ್ನಲ್ಲಿ. ಆದರೆ, ಆತನ ವಾಸ ಡೆಲ್ಲಿಯಲ್ಲಿ. ಇವನ ಮೇನ್ ಪ್ರಾಬ್ಲಂ ಆತನಿಗೆ ಹೆಂಗಸರನ್ನು ನೋಡಿದ್ರೆ ಆಗ್ತಾ ಇರ್ಲಿಲ್ಲ. ಆದ್ರೆ ಹೆಂಗಸರು ಹಾಕುವ ಬಟ್ಟೆಯನ್ನು ಮಾತ್ರ ತುಂಬಾ ಇಷ್ಟ ಪಡುತ್ತಿದ್ದ. ಕೇವಲ ಬಟ್ಟೆ ಮಾತ್ರವಲ್ಲ ಹೆಂಗಸರು ಬಳಸುವ ಆಭರಣಗಳು, ಮೇಕಪ್ಗಳನ್ನು ತುಂಬಾ ಇಷ್ಟ ಪಡುತ್ತಾ ಇದ್ದರು. ಇದಕ್ಕಾಗಿ ಈತ ದೆಹಲಿಯಲ್ಲಿ ಒಂದು ಬಾರಿ ಮಹಿಳೆಯರ ಆಭರಣವನ್ನು ಕಳ್ಳತನವನ್ನು ಮಾಡುವ ಸಾಹಸಕ್ಕಿಳಿದಿದ್ದ. ಆದರೆ, ಬರ್ತಾ ಬರ್ತಾ ಈ ಟೋನಿ ತುಂಬಾ ಬದಲಾಗುತ್ತಾನೆ. ಎಷ್ಟು ಬದಲಾಗುತ್ತಾನೆ ಅಂದ್ರೆ, ಮಹಿಳೆಯರ ಹಾಗೆಯೇ ಬಟ್ಟೆಗಳನ್ನು ತೊಡುತ್ತಾನೆ, ಮೇಕಪ್ ಮಾಡಿಕೊಳ್ಳುತ್ತಾನೆ. ಆದರೆ ಹೊರ ಪ್ರಪಂಚದಲ್ಲಿ ತಾನೊಬ್ಬ ಗಂಡಸಿನ ಹಾಗೆಯೇ ವರ್ತಿಸುತ್ತಿರುತ್ತಾನೆ.
1980 ರಲ್ಲಿ 23 ವರ್ಷದವರಾಗಿದ್ದಾಗ ಥೆರೆಸಾ ಎಂಬ ಮಹಿಳೆಯನ್ನು ಭೇಟಿಯಾಗ್ತಾರೆ. ಆ ಸಮಯದಲ್ಲಿ ಅವರು ಹೆಣ್ಣು ಮಕ್ಕಳ ಹಾಗೆ ಏನೂ ರೆಡಿ ಆಗಿರೋಲ್ಲ. ಯಾಕಂದರೆ ಟೋನಿ ಥೆರೆಸಾಳನ್ನು ತುಂಬ ಪ್ರೀತಿ ಮಾಡುತ್ತಾ ಇರುತ್ತಾನೆ. ಹಾಗಾಗಿ ಗಂಡಸಿನ ಹಾಗೆಯೇ ಇರುತ್ತಾನೆ. ಬರುಬರುತ್ತಾ ಥೆರೆಸಾಳಿಗೆ ಟೋನಿ ಮೊದಲು ಹೆಂಗಸರ ಹಾಗೆ ಬಟ್ಟೆಗಳನ್ನು ಧರಿಸುತ್ತಾ ಇದ್ದ ಮತ್ತು ಆತನಿಗೆ ಹಾಗೆ ಇರೋದು ತುಂಬಾ ಇಷ್ಟ ಎಂಬ ವಿಷಯ ತಿಳಿಯಿತು. ಆದರೆ, ಆಕೆ ಏನು ಹೇಳೋದಿಲ್ಲ. ಏಕೆಂದರೆ ಟೋನಿಗೆ ಹೆಣ್ಣುಮಕ್ಕಳ ವಸ್ತ್ರಾಭರಣ ಇಷ್ಟವಿದ್ದರು, ಓರ್ವ ಗಂಡಸಿನ ಹಾಗೆಯೇ ಇರುತ್ತಾನೆ.
2016ರಲ್ಲಿ ಟೋನಿಯ ಹೆಂಡತಿಯಾದ ಥೆರೆಸಾಳಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆಕೆಯು 2019ರಲ್ಲಿ ನಿಧನ ಹೊಂದುತ್ತಾರೆ. ಟೋನಿಗೆ ತುಂಬಾ ಆಘತವಾಗುತ್ತದೆ. ಯಾಕಂದ್ರೆ ಮುದ್ದಿನ ಹೆಂಡತಿಯನ್ನು ಅಷ್ಟು ಪ್ರೀತಿ ಮಾಡುತ್ತಿದ್ದ. ಆಕೆಯ ಅಗಲುವಿಕೆಯನ್ನು ಸಹಿಸದ ಟೋನಿಯ ಜೀವನವೇ ಶೂನ್ಯ ಎಂಬಂತೆ ಆಗಿದ್ದು, ಮಾನಸಿಕವಾಗಿ ಕೂಡ ಕುಗ್ಗಿದ್ದ.
ಇದಾದ ಬಳಿಕ ವೈದ್ಯರ ಬಳಿಗೆ ಹೋಗಿ, ತನ್ನ ಹೆಂಡತಿಯ ನೆನಪಿಗಾಗಿ ತನ್ನ ಲಿಂಗವನ್ನೇ ಬದಲಾಯಿಸಿಕೊಂಡ. ಅಂದ್ರೆ ಟೋನಿ ಈಗ ಹೆಣ್ಣಾಗಿ ಬದಲಾಗಿದ್ದಾನೆ. ಅವನ ಹೆಂಡತಿ ಯಾವ ಬಟ್ಟೆಗಳನ್ನು ಧರಿಸುತ್ತಾ ಇದ್ದಳೋ , ಯಾವ ರೀತಿಯಾಗಿ ಬಟ್ಟೆಗಳನ್ನು ಧರಿಸುತ್ತಾ ಇದ್ದಳೋ ಅದೆ ರೀತಿ ಧರಿಸುತ್ತಾನೆ. ಆಕೆಯ ತಲೆಗೂದಲಿನ ಬಣ್ಣದ ವಿಗ್ ಮಾಡಿಸಿಕೊಂಡು ಹಾಕಿಕೊಳ್ಳುತ್ತಾನೆ. ಒಟ್ಟಿನಲ್ಲಿ ಟೋನಿ ಮತ್ತೆ ಮೊದಲಿನ ಹಾಗೆಯೇ ಆಗುತ್ತಾನೆ. ಅವಳಂತೆ ಇರಬೇಕೆಂದು ಬಯಸಿದನು ಮತ್ತು ಅಂತಿಮವಾಗಿ 50 ವರ್ಷಗಳ ನಂತರ ಅವನು ತನ್ನ ಆಸೆಯನ್ನು ಪೂರೈಸಿಕೊಂಡನು. ಇದಕ್ಕೆ ಅವರ ಮಕ್ಕಳು ಕೂಡ ಸಾತ್ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಂಡು ಸಂಪೂರ್ಣ ಹುಡುಗಿಯ ಹಾಗೆಯೇ ಬದಲಾಗಿದ್ದಾನೆ ಟೋನಿ. ಇದೊಂದು ರೀತಿಯ ವಿಚಿತ್ರ ಘಟನೆಯಾದರು, ತನ್ನ ಹೆಂಡತಿಯಂತೆ ಆಗಬೇಕೆಂಬ ಕನಸು ಅದ್ಭುತವಾಗಿದೆ.
ಈಗಿನ ಕಾಲದಲ್ಲಿ ಒಬ್ಳು ಹೋದ್ರೆ ಇನ್ನೊಬ್ಳು ಇದ್ದಾಳೆ ಅಂತ ಬದ್ಕೋರು ತುಂಬಾ ಜನ. ಆದ್ರೆ ಟೋನಿನ ನೋಡಿದ್ರೆ, ಪ್ರೀತಿ ಕುರುಡು ಅನ್ನೋ ಮಾತು ಟೋನಿಗೆ ಹೇಳಿದ ಹಾಗೆಯಿದೆ. ಟೋನಿಯಂತಹ ವ್ಯಕ್ತಿ ಸಿಗೋದು ಅಪರೂಪ ಅಂತ ಹೇಳಿದ್ರೂ ತಪ್ಪಾಗಲಾರದು.