ಡಿಪ್ಲೋಮಾ ಪಾಸಾಗಿದ್ದೀರಾ ? ಹಾಗಾದ್ರೆ ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್‌ನಲ್ಲಿದೆ ಉದ್ಯೋಗವಕಾಶ | ಅರ್ಜಿ ಸಲ್ಲಿಸಲು ಫೆ.4 ಕೊನೆ ದಿನಾಂಕ

Cochin Shipyard Limited Recruitment 2023: ಕೊಚ್ಚಿನ್ ಶಿಪ್​ಯಾರ್ಡ್​ ಲಿಮಿಟೆಡ್(Cochin Shipyard Limited)​​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ. ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಡುಪಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

 

ಸಂಸ್ಥೆ : ಕೊಚ್ಚಿನ್ ಶಿಪ್​ಯಾರ್ಡ್​ ಲಿಮಿಟೆಡ್
ಹುದ್ದೆ : ಅಸಿಸ್ಟೆಂಟ್ ಮ್ಯಾನೇಜರ್, ಸೂಪರ್​ವೈಸರ್​
ಒಟ್ಟು ಹುದ್ದೆ : 5
ವಿದ್ಯಾರ್ಹತೆ : ಡಿಪ್ಲೋಮಾ, ಎಂಜಿನಿಯರಿಂಗ್
ವೇತನ ಮಾಸಿಕ : ₹49,500
ಉದ್ಯೋಗದ ಸ್ಥಳ : ಉಡುಪಿ
ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 4, 2023

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್- 1
ಸೂಪರ್​​ವೈಸರ್- ಎಲೆಕ್ಟ್ರಿಕಲ್- 1
ಸೂಪರ್​​ವೈಸರ್- ಫೈನಾನ್ಸ್​- 1
ಡ್ರಾಫ್ಟ್ಸ್​ ಮ್ಯಾನ್​- ಎಲೆಕ್ಟ್ರಿಕಲ್-1
ಡ್ರಾಫ್ಟ್​​​ ಮ್ಯಾನ್- ಮೆಕ್ಯಾನಿಕಲ್- 1

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 20/01/2023
ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 4, 2023

ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಜನವರಿ 20, 2023 ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ: ಹುದ್ದೆಗಳಿಗನುಸಾರವಾಗಿ ವೇತನ ನಿಗದಿಪಡಿಸಲಾಗಿದೆ. ವೇತನ ವಿವರ ಈ ಕೆಳಗೆ ನೀಡಲಾಗಿದೆ.
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 49,500
ಸೂಪರ್​​ವೈಸರ್- ಎಲೆಕ್ಟ್ರಿಕಲ್- ಮಾಸಿಕ ₹ 40,650
ಸೂಪರ್​​ವೈಸರ್- ಫೈನಾನ್ಸ್​- ಮಾಸಿಕ ₹ 40,650
ಡ್ರಾಫ್ಟ್ಸ್​ ಮ್ಯಾನ್​- ಎಲೆಕ್ಟ್ರಿಕಲ್- ಮಾಸಿಕ ₹ 22,000
ಡ್ರಾಫ್ಟ್​​​ ಮ್ಯಾನ್- ಮೆಕ್ಯಾನಿಕಲ್- ಮಾಸಿಕ ₹ 22,000

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಪ್ರಕಾಕ್ಷಿಕಲ್‌ ಟೆಸ್ಟ್‌, ಸ್ಕಿಲ್‌ ಟೆಸ್ಟ್‌, ಆಬ್ಜೆಕ್ಟಿವ್‌ / ಡಿಸ್ಕ್ರಿಪ್ಟಿವ್‌ ಇಂಟರ್‌ವ್ಯೂ, ಅನುಭವ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ career@udupicsl.com ಗೆ ಫೆಬ್ರವರಿ 4 ರೊಳಗೆ ಕಳುಹಿಸಬೇಕು. ದೂರವಾಣಿ ಸಂಖ್ಯೆ 0820 2538604 ಗೆ ಕರೆ ಮಾಡಿ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

Leave A Reply

Your email address will not be published.